Karnataka Times
Trending Stories, Viral News, Gossips & Everything in Kannada

Property: ಯಾವುದೇ ಆಸ್ತಿ ಮಾರಾಟ, ನೋಂದಣಿಗೂ ಮುನ್ನ ಈ ಕೆಲಸ ಕಡ್ಡಾಯ, ಸರ್ಕಾರದ ಆದೇಶ!

advertisement

ಇಂದು ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಬಹಳ ಮುಖ್ಯವೆನಿಸಿದ ದಾಖಲೆ ಯಾಗಿದೆ. ಹುಟ್ಟಿದ ಮಕ್ಕಳಿಂದ ಹಿಡಿದು ವೃದ್ಧಾಪ್ಯದವರೆಗೂ ಈ ಆಧಾರ್ ಕಾರ್ಡ್ (Aadhaar Card) ಹೊಂದಿರಲೇ ಬೇಕಾಗುತ್ತದೆ. ಅದೇ ರೀತಿ ಸರಕಾರದ ಯಾವುದೇ ಸೌಲಭ್ಯ ಪಡೆಯುದಾದ್ರೂ ಸಹ ಆಧಾರ್ ಕಾರ್ಡ್ ಬಹಳ ಮುಖ್ಯವೆನಿಸುತ್ತದೆ. ಬ್ಯಾಂಕ್ ನಿಂದ ಹಿಡಿದು ಎಲ್‌ಪಿಜಿ ಸಿಲಿಂಡರ್ (LPG Cylinder) ಪಡೆಯಲು ಸಹ ಆದಾರ್ ಕಾರ್ಡ್ ಬೇಕು. ಇಂದು ಸಾಕಷ್ಟು ಕಡೆ ನಾವು ಆಧಾರ್ ಕಾರ್ಡ್ ಅನ್ನು ಬಳಸುತ್ತೇವೆ. ಹಾಗಾಗಿ ಆಧಾರ್ ಕಾರ್ಡ್ ಅಪ್ಡೇಟ್‌ (Aadhaar Card Update) ಮಾಡಿ ನವೀಕರಣ ಮಾಡುವುದು ಸಹ ಅಷ್ಟೆ ಮುಖ್ಯವಾಗುತ್ತದೆ.

WhatsApp Join Now
Telegram Join Now

ಆಸ್ತಿ ಖರೀದಿ ನೊಂದಣಿಗೆ ಕ್ರಮ:

 

 

ಇಂದು ಆಸ್ತಿ ಖರೀದಿ (Property Purchase), ಮಾರಾಟ ವಹಿವಾಟು ಗಳು ಹೆಚ್ಚಾಗಿದ್ದು ಮೋಸದ ವಂಚನೆಗಳು ಸಹ ಹೆಚ್ಚಾಗುತ್ತಿದೆ.‌ ಅದೇ ರೀತಿ ಇಂದು ‌ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅನೇಕರು ಪೊಲೀಸ್ ಠಾಣೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಸಂಖ್ಯೆಯು ಹೆಚ್ಚಾಗಿದೆ.‌ ‌ಇದೀಗ ಈ ಬಗ್ಗೆ ಹೊಸದಾದ ನಿ‌ಯಮ ಜಾರಿಗೆ ತಂದಿದ್ದು ಯಾವುದೇ ವ್ಯಕ್ತಿ ತನ್ನ ಆಸ್ತಿ ಮಾರಾಟ ಅಥವಾ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮುನ್ನ ವ್ಯಕ್ತಿಯ ಆಧಾರ್‌ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಹೈಕೋರ್ಟ್‌ (High Court), ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆದೇಶ ನೀಡಿದೆ.

advertisement

ಪರಿಶೀಲನೆ ನಡೆಸಬೇಕು:

2016ರ ಪ್ರಕಾರ UIDAI ನೊಂದಿಗೆ ನೋಂದಣಿ ಮಾಡಿಕೊಂಡಿರುವ ಆಧಾರ್‌ ಕಾರ್ಡ್‌ (Aadhaar Card) ಹೊಂದಿರುವ ಗ್ರಾಹಕರಿಗೆ ಮೊಬೈಲ್‌ ಸಂಖ್ಯೆ (Mobile Number) ಗೆ ಬರುವ OTP ಆಧರಿಸಿ ಪರಿಶೀಲನೆ ಮಾಡಬೇಕು ಎಂದಿದೆ.

ಪ್ರಕರಣ ದಾಖಲು:

ದಾಖಲೆಗಳನ್ನು ನಕಲು ಮಾಡಿ ಭೂಮಿ ಮಾರಾಟ ಮಾಡಿರುವ ಪ್ರಕರಣವೊಂದು ದಾಖಲೆಯಾಗಿದ್ದು ಕಾರಣದಿಂದಾಗಿ ಈ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ‌ ನೋಂದಣಿ ವೇಳೆ ತಪ್ಪು ಮಾಹಿತಿಯ ಆಧಾರ್‌ ದಾಖಲೆ ಸಲ್ಲಿಸಿದ್ದು, ಅದನ್ನು ಅಧಿಕೃತ ದಾಖಲೆ ಅಥವಾ ಗುರುತಿನ ಚೀಟಿ ಎಂದು ಪರಿಗಣಿಸಿ ಉಪ ನೋಂದಣಾಧಿಕಾರಿ ನೋಂದಣಿ ಮಾಡಿದ್ದಾರೆ. ಆದರೆ, ಆಧಾರ್‌ ನೈಜತೆ ಪರಿಶೀಲನೆ ‌ಮಾಡದೇ ಇರುವುದರಿಂದ ಸಮಸ್ಯೆ ಉಂಟಾಗಿದೆ.‌ ಹೀಗಾಗಿ ಈ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

advertisement

Leave A Reply

Your email address will not be published.