Karnataka Times
Trending Stories, Viral News, Gossips & Everything in Kannada

KSTRC: KSRTC ಯಲ್ಲಿ ಪ್ರಯಾಣಿಸುವ ಪುರುಷರು ಮಹಿಳೆಯರು ಸೇರಿ ಎಲ್ಲರಿಗೂ ಹೊಸ ಸೂಚನೆ

advertisement

ಮೋಸ ಹೋಗುವವರ ಪ್ರಮಾಣ ಅಧಿಕ ಆದಂತೆ ಮೋಸ ಮಾಡುವವರು ಕೂಡ ಅಧಿಕ ಆಗುತ್ತಲೇ ಇದೆ. ಮನೆಗೆ ಬಂದು ಕಳ್ಳತನ ಮಾಡುವ ಪ್ರಮಾಣಕ್ಕಿಂತಲೂ ನಮಗೆ ಅರಿವಿಲ್ಲದಂತೆ ನಮ್ಮ ಫೋನ್, ಚಿನ್ನ ಹಾಗೂ ನಗದು ದೋಚುವ ಪ್ರಮಾಣ ಅಧಿಕ ಆಗಿದೆ ಎನ್ನಬಹುದು.ಹೀಗೆ ಮೋಸ ಹೋಗುವುದನ್ನು ತಡೆಯಲು ಸರಕಾರ ಅನೇಕ ತರನಾದ ಸಂದೇಶ ಆಗಾಗ ನೀಡುತ್ತಲೆ ಇದ್ದು ಇದೀಗ ಸಾರ್ವಜನಿಕ ಬಸ್ ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತಿದೆ.

WhatsApp Join Now
Telegram Join Now

ಅಪಾಯ ತಪ್ಪಿದ್ದಲ್ಲ:

ನಾವು ದೂರದ ಊರಿಗೆ ಪ್ರಯಾಣಕ್ಕೆಂದು ಹೋಗುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಇಲ್ಲವಾದಲ್ಲಿ ಮೋಸ ಹೋಗುತ್ತೇವೆ. ನಮ್ಮ ಕುಟುಂಬಸ್ಥರು, ಮನೆಯವರು, ಸ್ನೇಹಿತರು ಪರಿಚಯಸ್ಥರೊಂದಿಗೆ ಮಾತ್ರವೇ ಮಾತನಾಡುವುದನ್ನು ಮಾಡಿದರೆ ಉತ್ತಮ ಅಪರಿಚಿತರು ಎಲ್ಲರೂ ಕೆಟ್ಟವರಲ್ಲ ಅಂತೆಯೇ ಒಳ್ಳೆಯವರು ಕೂಡ ಇರಲಾರರು. ಹಾಗಾಗಿ ನಮ್ಮ ಎಚ್ಚರಿಕೆಯಿಂದ ನಾವು ಇರಬೇಕಾದ್ದು ಕೂಡ ಅತಿ ಅವಶ್ಯಕವಾಗಿದೆ. ತಪ್ಪಿದ್ದಲ್ಲಿ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.

ರೈಲಿನಲ್ಲಿಯೂ ಮೋಸ:

ಕರ್ನಾಟಕದಿಂದ ಗೋವಾಕ್ಕೆ ಹೋಗುವ ಪ್ರಯಾಣಿಕರಿಗೆ ರೈಲಿನಲ್ಲಿ ಆಗಾಗ ಮೋಸ ಆಗುತ್ತಲಿದೆ. ಅದರಲ್ಲೂ ಚಾಕೊಲೇಟ್ ನೀಡಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕರ ನಗದು,ಚಿನ್ನ ಎಸ್ಕೇಪ್ ಮಾಡಲಾಗುತ್ತಿದ್ದು ಇದಕ್ಕೆ ಚಾಕಲೇಟ್ ಗ್ಯಾಂಗ್ ಎಂದು ಸಹ ಹೆಸರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ಕೂಡ ಎಚ್ಚರಿಕೆಯೆ ಸಂದೇಶ ರವಾನಿಸಿದೆ‌. ಗೋವಾ ಹಾಗೂ ಇತರ ಭಾಗದಲ್ಲಿ ಪ್ರಯಾಣ ಮಾಡುವಾಗ ಅಪರಿಚಿತದಿಂದ ಆಹಾರ ಪದಾರ್ಥಗಳನ್ನು ಸ್ವೀಕಾರ ಮಾಡುವಾಗ ಎಚ್ಚರ ವಹಿಸಿ ಎಂದು ತಿಳಿಸಲಾಗಿದೆ.

advertisement

ಸರಕಾರಿ ಬಸ್ ಪ್ರಯಾಣಿಕರಿಗೆ ಹೊಸ ತೊಂದರೆ:

 

Image Source: Social News XYZ

 

ರಾಜ್ಯದಲ್ಲಿ ಶಕ್ತಿ ಯೋಜನೆ ಬಳಿಕ ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಸರಕಾರದ KSRTC ನಲ್ಲಿ ಪ್ರಯಾಣ ಮಾಡುವಾಗ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಬೆಳಗಾವಿಯಲ್ಲಿ KSRTC ಬಸ್ ನಲ್ಲಿ ಜೂಸ್ ಗ್ಯಾಂಗ್ ಒಂದು ಪತ್ತೆಯಾಗಿದ್ದು ಜ್ಯೂಸ್ ಮತ್ತು ಬಾಳೆಹಣ್ಣನ್ನು ಮಾರಾಟ ಮಾಡುವಾಗ ಅದರಲ್ಲಿ ನಶೆ ಪದಾರ್ಥ ಮಿಕ್ಸ್ ಮಾಡಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕರ ಹಣ, ಬಂಗಾರ ಇತ್ಯಾದಿ ಬೆಲೆ ಬಾಳುವ ವಸ್ತು, ವಾಚ್ ಹಾಗೂ ಸ್ಮಾರ್ಟ್ ಫೋನ್ ಕಳ್ಳತನ ಮಾಡುವುದು ತಿಳಿದು ಬಂದಿದೆ.

ಪ್ರಕರಣದ ವಿವರಣೆ:

ಬೆಳಗಾವಿಯ KSRTC ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸಂಜೀವ ಖೋತಾ ಎನ್ನುವವರು ಬಾಳೆ ಹಣ್ಣು ಹಾಗೂ ಜ್ಯೂಸ್ ಮಾರಾಟ ಮಾಡುವವರಿಂದ ಖರೀದಿಸಿ, ಸೇವಿಸಿ ಮೂರ್ಛೆ ಹೋಗಿದ್ದಾರೆ. ಇವರೊಂದಿಗೆ ಮತ್ತೊಬ್ಬರು ಕೂಡ ಸೇರಿ 14 ಗಂಟೆ ಬಳಿಕ ಪ್ರಜ್ಞೆ ಬಂದಿದೆ ಆದರೆ ಅದಾದ ಬಳಿಕ ಅವರ ಬಳಿ ಇದ್ದ ಹಣ, ಫೋನ್ , ಪರ್ಸ್, ಚಿನ್ನದ ಚೈನ್ ಎಲ್ಲ ಕಾಣೆಯಾಗಿದ್ದು ತಿಳಿದು ಬಂದಿದ್ದು ಇದು ಜ್ಯೂಸ್ ಗ್ಯಾಂಗ್ ನ ಕರಾಮತ್ತು ಎಂಬುದು ತಿಳಿದು ಬಂದಿದೆ. ಹಾಗಾಗಿ ಸಂಜೀವ ಖೋತಾ ಮತ್ತು ಮತ್ತೊಬ್ಬರು ಆಸ್ಪತ್ರೆ ಚಿಕಿತ್ಸೆ ಮುಂದುವರಿಸಿದ್ದು ಈ ಜ್ಯೂಸ್ ಗ್ಯಾಂಗ್ ಪರಿಶೀಲನೆ ನಡೆಸಲು ಪೊಲೀಸರು ಎಲ್ಲ ಆಯಾಮದಲ್ಲಿಯೂ ಕೂಎ ಚಿಂತಿಸುತ್ತಿದ್ದಾರೆ.

advertisement

Leave A Reply

Your email address will not be published.