Karnataka Times
Trending Stories, Viral News, Gossips & Everything in Kannada

Pradhan Mantri Fasal Bima Yojana: ಈ 10 ತಾಲೂಕುಗಳಿಗೆ ಬೆಳ್ಳಂಬೆಳಿಗ್ಗೆ ಜಮೆ ಆಯ್ತು ಬೆಳೆ ವಿಮೆ ಹಣ

advertisement

Pradhan Mantri Fasal Bima Yojana: ಈ ವರ್ಷ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬರಗಾಲದ ಕಾರಣದಿಂದಾಗಿ ರಾಜ್ಯದಲ್ಲಿ ಕೃಷಿಯ ವಿಚಾರದಲ್ಲಿ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಬೇಕಾದಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ ಎಂದು ಹೇಳಬಹುದಾಗಿದ್ದು ಸರ್ಕಾರ ಬಲ ಪರಿಹಾರವನ್ನು ಈಗ ನೀಡುವುದಕ್ಕೆ ಹೊರಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳೆರಡೂ ಕೂಡ ರೈತರಿಗೆ ಬೆಳೆ ಪರಿಹಾರವನ್ನು ನೀಡಲು ಹೊರಟಿದೆ ಎಂದು ಹೇಳಬಹುದಾಗಿದೆ.

ಈಗಾಗಲೇ ಬೆಳೆ ಇನ್ಸೂರೆನ್ಸ್ ಯೋಜನೆ ಅಡಿಯಲ್ಲಿ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದಕ್ಕಾಗಿ 44.34 ಕೋಟಿ ರೂಪಾಯಿಗಳ ಸಹಾಯಧನವನ್ನು ಮಂಜೂರು ಮಾಡಲಾಗಿದೆ. ಹಾಗಿದ್ರೆ ಬನ್ನಿ ಯಾವ ಜಿಲ್ಲೆಯವರಿಗೆ ಎಷ್ಟೆಷ್ಟು ಪರಿಹಾರವನ್ನು ನೀಡಲಾಗುತ್ತಿದೆ ಎನ್ನುವಂತಹ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

Pradhan Mantri Fasal Bima Yojana (PMFBY) scheme was launched in India by Ministry of Agriculture & Farmers welfare, New Delhi from Kharif 2016 season onwards
Image Source: The Week

ಬೆಳೆ ಇನ್ಶೂರೆನ್ಸ್ ಯಾರಿಗೆ ಯಾವ ರೀತಿ ಸಿಕ್ತಾ ಇದೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

advertisement

ಹವಾಮಾನ ಆದರಿಸಿರುವಂತಹ ಬೆಳೆ ಇನ್ಸೂರೆನ್ಸ್ ಯೋಜನೆ ಅಡಿಯಲ್ಲಿ 2023 ಹಾಗೂ 24ನೇ ಸಾಲಿನ ಲಿಸ್ಟ್ ಪ್ರಕಾರ ಕಾರವಾರ ಜಿಲ್ಲೆಯ 27,637 ರೈತರು 44.34 ಕೋಟಿ ರೂಪಾಯಿಗಳ ವಿಮೆ ಮಂಜೂರು ಆಗಿದೆ ಎನ್ನುವಂತಹ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬೆಳೆದಿರುವಂತಹ ಬೆಳೆ ಸಂಪೂರ್ಣವಾಗಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಸಹಾಯವನ್ನು ನೀಡುವ ನಿಟ್ಟಿನಲ್ಲಿ ಈ ಬೆಳೆ ಪರಿಹಾರ ಹಣವನ್ನು ಮಂಜೂರು ಮಾಡಿದೆ ಎಂಬುದಾಗಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲಾಗಿದೆ.

ಕಾರವಾರ ಜಿಲ್ಲೆಯಲ್ಲಿ ಕೂಡ ಯಾವ್ಯಾವ ತಾಲೂಕಿನ ಜನರಿಗೆ ಎಷ್ಟು ಬೆಳೆ ಪರಿಹಾರ ಸಿಕ್ಕಿದೆ ಅನ್ನೋದನ್ನ ಕೂಡ ತಿಳಿದುಕೊಳ್ಳೋಣ ಬನ್ನಿ.

* ಭಟ್ಕಳ ತಾಲೂಕಿನ 271 ಜನ ರೈತರಿಗೆ ಬೆಳೆ ಪರಿಹಾರದ ವಿಮೆಯ ರೂಪದಲ್ಲಿ 1.54 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.
* ದಾಂಡೇಲಿಯ 103 ರೈತರಿಗೆ 4.63 ಲಕ್ಷ ರೂಪಾಯಿ
* ಹಳಿಯಾಳದ 8883 ರೈತರಿಗೆ 5.35 ಕೋಟಿ ರೂಪಾಯಿ
* ಹೊನ್ನಾವರದ 84 ರೈತರಿಗೆ 36,000 ರೂಪಾಯಿ‌
* ಜೋಯಿಡಾದ 275 ರೈತರಿಗೆ 1.29 ಲಕ್ಷ ರೂಪಾಯ್

Pradhan Mantri Fasal Bima Yojana (PMFBY) scheme was launched in India by Ministry of Agriculture & Farmers welfare, New Delhi from Kharif 2016 season onwards
* ಕುಮಟಾದ 57 ರೈತರಿಗೆ 50 ಸಾವಿರ ರೂಪಾಯಿಗಳ ಪರಿಹಾರ.
* ಮುಂಡಗೋಡದ 7041 ರೈತರಿಗೆ 20.28 ಕೋಟಿ ರೂಪಾಯಿ ಪರಿಹಾರ.
* ಸಿದ್ದಾಪುರದ 421 ರೈತರಿಗೆ 3.59 ಲಕ್ಷ ರೂಪಾಯಿಗಳ ಪರಿಹಾರ.
* ಶಿರಸಿಯ 9123 ರೈತರಿಗೆ 17.72 ಕೋಟಿ ರೂಪಾಯಿಗಳ ಪರಿಹಾರ.
* ಯಲ್ಲಾಪುರದ 1,379 ರೈತರಿಗೆ 86.32 ಲಕ್ಷ ರೂಪಾಯಿಗಳ ಪರಿಹಾರ ಹಣವನ್ನ ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ

ಈ ಮೂಲಕ ಈ ಬಾರಿಯ ಬರದಿಂದಾಗಿ ಸಾಕಷ್ಟು ಕೃಷಿ ಹಾನಿಯನ್ನು ಮಾಡಿಕೊಂಡಿರುವಂತಹ ರೈತರಿಗೆ ಅದರಲ್ಲೂ ವಿಶೇಷವಾಗಿ ಕಾರವಾರ ಜಿಲ್ಲೆಯ ರೈತರಿಗೆ ಸರ್ಕಾರದ ಕಡೆಯಿಂದ ಈಗಾಗಲೇ ಈ ಮೇಲೆ ತಿಳಿಸಿರುವ ರೀತಿಯಲ್ಲಿ ಪರಿಹಾರದ ಇನ್ಸೂರೆನ್ಸ್ ಮೊತ್ತ ಬಂದು ಸೇರಿರುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ತುಂಬೆಲ್ಲ ಯಾವ್ಯಾವ ಕಡೆಗಳಲ್ಲಿ ಹೆಚ್ಚಿನ ನಷ್ಟವನ್ನು ರೈತರು ಕಂಡಿದ್ದಾರೋ ಎನ್ನುವುದನ್ನು ಗಮನಿಸಿ ಹಣವನ್ನು ವರ್ಗಾವಣೆ ಮಾಡುವಂತಹ ಪ್ರಕ್ರಿಯೆ ಪ್ರಾರಂಭ ಆಗಬಹುದಾಗಿದೆ ಎನ್ನುವಂತಹ ನಿರೀಕ್ಷೆ ಇದೆ.

advertisement

Leave A Reply

Your email address will not be published.