Karnataka Times
Trending Stories, Viral News, Gossips & Everything in Kannada

KSRTC: ಸಾರಿಗೆ ಸಚಿವರಿಂದ ಬೆಳ್ಳಂಬೆಳಿಗ್ಗೆ ಇನ್ನೊಂದು ಗುಡ್ ನ್ಯೂಸ್! ರಾಜ್ಯಾದ್ಯಂತ ಘೋಷಣೆ

advertisement

KSRTC: ಕೊರೊನಾ ಬಂದ ಬಳಿಕ ಅನೇಕರ ಜೀವನ ಬದಲಾಗಿದೆ ಎಂದು ಹೇಳಬಹುದು. ಕೊರೊನಾ ಕಾಯಿಲೆ ಮಾರಕವಾಗಿ ಎಲ್ಲ ಕಡೆ ಹಬ್ಬುತ್ತಿದ್ದ ಕಾರಣಕ್ಕೆ ಅದನ್ನು ತಡೆಗಟ್ಟುವ ಸಲುವಾಗಿ ಅನೇಕವಿಧವಾದ ಕ್ರಮ ಕೈಗೊಳ್ಳಲಾಗಿದ್ದು ಅಂತಹ ಒಂದು ಕ್ರಮದಲ್ಲಿ ಬಸ್ ಸಂಚಾರ ಕೆಲವೆಡೆ ಸ್ಥಗಿತ ಮಾಡಿದ್ದನ್ನು ಕಾಣಬಹುದು. ಬಸ್ ನಲ್ಲಿ ಪ್ರಯಾಣ ಮಾಡುವುದರಿಂದ ಕೂಡ ಕೋವಿಡ್ ಹಬ್ಬುತ್ತದೆ ಎಂಬ ಹಿನ್ನೆಲೆ ಅನೇಕ ಕಡೆ ಬಸ್ ಸ್ಥಗಿತ ಮಾಡಲಾಗಿದೆ. ಈಗ ಕೋವಿಡ್ ಪ್ರಮಾಣ ಬಹಳ ಕಡಿಮೆ ಆಗಿದ್ದರು ಆಗ ತೆಗೆದುಕೊಂಡ ಕೆಲ ತಾತ್ಕಾಲಿಕ ನಿರ್ಧಾರ ಇಂದಿಗೂ ಮತ್ತೆ ಪುನಃ ಮರಳಿ ಸಮಸ್ಥಿಗೆ ಬರುತ್ತಿಲ್ಲವಾಗಿದೆ.

WhatsApp Join Now
Telegram Join Now

ಕೋವಿಡ್ ನಲ್ಲಿ ಓಡಾಟ ನಿರ್ಬಂಧಿಸುವ ಜೊತೆಗೆ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಬಸ್ ಸಂಚಾರ ನಿಲ್ಲಿಸಿದ್ದನ್ನು ಈಗ ಮತ್ತೆ ಪುನಃ ಆರಂಭ ಮಾಡಲು ಸರಕಾರ ಮುಂದಾಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಸರಕಾರಿ ಬಸ್ ರೂಟ್ ಅನೇಕ ಕಡೆ ಸ್ಥಗಿತಗೊಂಡಿದ್ದು ಈಗ ಮತ್ತೆ ಪುನಃ ಕಾರ್ಯಾರಂಭ ಮಾಡಲಿದೆ ಎನ್ನಬಹುದು. ಹಾಗಾಗಿ ಇಷ್ಟು ಕಾಲ ಸ್ಥಗಿತವಾಗಿದ್ದ ಸರಕಾರಿ ಬಸ್ ಗಳು ಈಗ ಮತ್ತೆ ಕಾರ್ಯಾರಂಭ ಮಾಡಲಾಗುತ್ತಿದೆ.

Image Source: Onmanorama

advertisement

ಶೀಘ್ರ ಪುನರಾರಂಭ
ಕೊರೊನಾ ಸಂದರ್ಭದಲ್ಲಿ ಸ್ಥಗಿತ ಗೊಂಡಿದ್ದ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಮಾಡಲಾಗುವುದು. 3,800 ಸರಕಾರಿ ಬಸ್ ಗಳ ರೂಟ್ ಸ್ಥಗಿತ ಮಾಡಿದ್ದನ್ನು ಈಗ ಮತ್ತೆ ಕಾರ್ಯಾರಂಭ ಮಾಡಲಾಗುವುದು. ಬಹುತೇಕ ಕಡೆಯಲ್ಲಿ ಸರಕಾರಿ ಬಸ್ ಗಳು ತಮ್ಮ ರೂಟ್ ನಲ್ಲಿ ಸ್ಥಗಿತಗೊಂಡಿದ್ದೆ ಒಂದು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ನಿತ್ಯ ದೂರು ಸಲ್ಲಿಸುತ್ತಿದ್ದಾರೆ. ಈಗ ಮತ್ತೆ ಇವುಗಳನ್ನು ಪುನರಾರಂಭ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ.

ಶಕ್ತಿ ಯೋಜನೆ ಆರಂಭ ಆದ ಬಳಿಕ ಸರಕಾರಿ ಬಸ್ ಗೆ ಬೇಡಿಕೆ ಅಧಿಕ ಆಗುತ್ತಿದೆ ಈ ಹಿನ್ನೆಲೆಯಲ್ಲಿ ಇಷ್ಟು ಸಮಯ ಸ್ಥಗಿತಗೊಂಡಿದ್ದ ರೂಟ್ ಈಗ ಮತ್ತೆ ಆರಂಭ ಆಗುತ್ತದೆ ಎನ್ನಬಹುದು. ಬಸ್ ಕೊರತೆ ಇದ್ದು ಅದರ ಜೊತೆಗೆ ಸಿಬಂದಿ ಸಂಖ್ಯೆ ಕೂಡ ಬಹಳ ಕಡಿಮೆ ಇದೆ ಹಾಗಾಗಿ ಹೊಸದಾಗಿ ಸಿಬಂದಿ ನೇಮಕ ಮಾಡುವ ಜೊತೆಗೆ ಹೆಚ್ಚುವರಿಬಸ್ ಕೂಡ ಶೀಘ್ರವಾಗಿ ಬಿಡಲಾಗುತ್ತದೆ. ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಈ ಬಗ್ಗೆ ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಹಿರಂಗ ಹೇಳಿಕೆ ನೀಡಿದ್ದಾರೆ.

Image Source: Coach Builders India

ಈಗಾಗಲೇ ಸ್ಥಗಿತ ಗೊಂಡಿದ್ದ ಬಸ್ ಸೇವೆ ಶೀಘ್ರ ಪುನರಾರಂಭ ಆಗಲಿದೆ ಅದರ ಜೊತೆಗೆ 900 ಕ್ಕೂ ಅಧಿಕ ಬಸ್ ನವೀಕರಣ ಕಾರ್ಯ ಕೂಡ ನಡೆಯುತ್ತಿದೆ.250 ಜನ ತಾಂತ್ರಿಕ ಸಿಬಂದಿಯ ನೇಮಕಾತಿ ಕೂಡ ನಡೆಸಲಾಗುತ್ತಿದೆ. ಹಾಗಾಗಿ ಶೀಘ್ರವೇ ಇಷ್ಟು ಸಮಯ ಸ್ಥಗಿತವಾಗಿದ್ದ ವ್ಯವಸ್ಥೆ ಮತ್ತೆ ಪುನಃ ಆರಂಭ ಆಗುತ್ತದೆ ಎಂದು ಕೂಡ ಹೇಳಬಹುದು.

advertisement

Leave A Reply

Your email address will not be published.