Karnataka Times
Trending Stories, Viral News, Gossips & Everything in Kannada

KSRTC: KSRTC ಬಸ್ ಹತ್ತುವ ಹಿರಿಯ ನಾಗರಿಕರಿಗೆ ದೊಡ್ಡ ಗುಡ್ ನ್ಯೂಸ್! ಮಹಿಳೆಯರಿಗೆ ಮಾತ್ರವಲ್ಲ

advertisement

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ನೀವು ನಿಮ್ಮ ಕಣ್ಣಾರೆ ನೋಡಿದ್ದೀರಿ ಹಾಗೂ ನಿಮ್ಮ ಮನೆಯಲ್ಲಿ ಕೆಲವರು ಆ ಯೋಜನೆಗಳನ್ನ ಅನುಭವಿಸುತ್ತಿದ್ದಾರೆ ಕೂಡ. ರಾಜ್ಯ ಸರ್ಕಾರ ಇದಕ್ಕಾಗಿಯೇ ವರ್ಷಕ್ಕೆ ಸಾವಿರಾರು ಕೋಟಿ ರೂಪ ಹಣವನ್ನು ಮೀಸಲಾಗಿರಿಸಿ ಅನ್ನೋದನ್ನ ಕೂಡ ನೀವು ಈಗಾಗಲೇ ತಿಳಿದುಕೊಂಡಿದ್ದೀರಿ.

WhatsApp Join Now
Telegram Join Now

ಒಂದರ್ಥದಲ್ಲಿ ಮಾತನಾಡುವುದಾದರೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಸರ್ಕಾರ ಚುನಾವಣೆಗು ಮುಂಚೆ ಅನೌನ್ಸ್ ಮಾಡಿದಂತಹ ಈ ಗ್ಯಾರಂಟಿ ಯೋಜನೆಗಳು ಎಂದು ಹೇಳಬಹುದಾಗಿದೆ. ಇನ್ನು ಇದೇ ಯೋಜನೆಗಳನ್ನ ಪ್ರತಿಫಲಿಸುವ ರೀತಿಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೂಡ ಗ್ಯಾರಂಟಿ ಯೋಜನೆಗಳನ್ನು ಅನೌನ್ಸ್ ಮಾಡಲಾಗಿತ್ತು ಆದರೆ ಕರ್ನಾಟಕ ರಾಜ್ಯದಲ್ಲಿ ಇವುಗಳು ಅಷ್ಟೊಂದು ಹೆಚ್ಚಿನ ಪರಿಣಾಮವನ್ನು ಬೀರುವುದಕ್ಕೆ ಯಶಸ್ವಿಯಾಗಿಲ್ಲ ಎಂದು ಹೇಳಬಹುದಾಗಿದೆ.

ಅದೇನೇ ಇರಲಿ ಚುನಾವಣೆ ಮುಗಿದ ನಂತರ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬುದಾಗಿ ಪರಿಗಣಿಸಲಾಗಿತ್ತು ಆದರೆ ಸರ್ಕಾರ ಈ ವಿಚಾರದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿದ್ದು ಯಾವುದೇ ಕಾರಣಕ್ಕೂ ಕೂಡ ಉಚಿತ ಯೋಜನೆಗಳನ್ನು ನೀಲಿಸಲು ಸಾಧ್ಯವಿಲ್ಲ ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಅಂದರೆ ಕೆಎಸ್ಆರ್ಟಿ (KSRTC) ನಿಗಮ ಬಸ್ಸುಗಳಲ್ಲಿ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.

 

advertisement

Image Source: The News Minute

 

ಆರಂಭಿಕ ದಿನಗಳಲ್ಲಿ ಈ ಯೋಜನೆ ಸಾಕಷ್ಟು ವ್ಯಾಪಕವಾಗಿ ಟೀಕೆಗೆ ಒಳಗಾಗಿತ್ತು ಆದರೆ ಈಗ ರಾಜ್ಯದ ಬಹುತೇಕ ಎಲ್ಲಾ ಮಹಿಳೆಯರು ಕೂಡ ಈ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ಮುಂದೆ ಯಾವುದೇ ಸ್ಥಳಕ್ಕೆ ಮಹಿಳೆಯರು ಹೋಗಬೇಕು ಅಂತ ಇದ್ದರೂ ಕೂಡ ಹಣದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಶಕ್ತಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದೊಳಗೆ ಎಲ್ಲಿ ಬೇಕಾದರೂ ಕೂಡ ಕೆ ಎಸ್ ಆರ್ ಟಿ ಸಿ (KSRTC) ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದಾಗಿದೆ.

ಆದರೆ ಇದೇ ವಿಚಾರದಲ್ಲಿ ಈಗ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಸಿಗುವಂತಹ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ. ಹಿರಿಯ ನಾಗರಿಕರು ಅಂದ್ರೆ ಅರವತ್ತು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರಿಗೆ ಉಚಿತ ಬಸ್ ಪ್ರಯಾಣವನ್ನು ಕೆಎಸ್ಆರ್ಟಿಸಿ (KSRTC) ಬಸ್ಸುಗಳಲ್ಲಿ ನೀಡುವಂತಹ ಯೋಜನೆಯನ್ನು ರಾಜ್ಯ ಸರ್ಕಾರ ಮಾಡುವುದಕ್ಕೆ ಹೊರಟಿದೆ ಎನ್ನುವಂತಹ ಸುದ್ದಿ ತಿಳಿದು ಬರುತ್ತಿದೆ.

ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ ಆದರೆ, ಖಂಡಿತವಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel) ವನ್ನು ನೀಡಿದ ರೀತಿಯಲ್ಲೇ ಈ ಯೋಜನೆ ಕೂಡ ಜಾರಿಗೆ ಬಂದರೆ ಖಂಡಿತವಾಗಿ ಸಾಕಷ್ಟು ಜನಪ್ರಿಯವಾಗಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.