Karnataka Times
Trending Stories, Viral News, Gossips & Everything in Kannada

Income Tax: ಇನ್ಮುಂದೆ ಈ ತರದ ಕೃಷಿಗೂ ತೆರಿಗೆ ಕಟ್ಟಬೇಕು, ಹೊಸ ನಿಯಮ ಜಾರಿಗೆ!

advertisement

ಕೃಷಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಮಾತ್ರವಲ್ಲದೇ ಸ್ವ ಕೆಲಸಕ್ಕೆ ಒಂದು ಮೂಲ ಮಂತ್ರ ಎನ್ನಬಹುದು. ಅದೇ ರೀತಿ ಕೆಲ ಕೃಷಿಯಿಂದ ಸಾಲ (Loan) ಸೂಲ ಹೆಚ್ಚಾದರೆ ಇನ್ನೂ ಕೆಲ ಕೃಷಿ ಬಹುಕೋಟಿ ಆದಾಯ ನೀಡುವುದು ಇದೆ. ಇದೇ ನಿಟ್ಟಿನಲ್ಲಿ ಕೃಷಿಯಿಂದ ಬಂದ ಆದಾಯದ ಮೇಲೆ ತೆರಿಗೆ ಸಂಬಂಧಿಸಿದಂತೆ ಸರಕಾರ ಈ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಈ ಮೂಲಕ ಕೆಲ ಕೃಷಿಗಳ ಆದಾಯ ದುಪ್ಪಟ್ಟು ಆಗಿರುವ ಕಾರಣ ಕೃಷಿಯನ್ನು ವಾಣಿಜ್ಯವರ್ಗವಾಗಿ ಇರಿಸಲಾಗಿದೆ. ಕೆಲ ಕೃಷಿಗೆ ಆದಾಯ ತೆರಿಗೆ (Income Tax) ವಿನಾಯಿತಿ ಸೌಲಭ್ಯ ಕೂಡ ನೀಡಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಯಮದಲ್ಲಿ ಏನಿದೆ?

ಆದಾಯ ತೆರಿಗೆ ನಿಯಮದ (Income Tax Rules) ಪ್ರಕಾರ ವಾರ್ಷಿಕವಾಗಿ 3ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಕಡ್ಡಾಯವಾಗಿ ಆದಾಯ ರಿಟರ್ನ್ (IT Return) ಅರ್ಜಿ ಸಲ್ಲಿಸಬೇಕು. ಹಾಗೇಯೇ ಇದರ ಮೇಲೆ ಯಾವುದೇ ರೀತಿ ತೆರಿಗೆ ಮಿತಿ ಇರಲಾರದು‌. ಅದೇ ರೀತಿ ದುಡಿಯುವ ವರ್ಗದವರಿಗೆ ವಾರ್ಷಿಕ 7 ಲಕ್ಷದ ವರೆಗೆ ಷರತ್ತು ಬದ್ಧ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.ಹಾಗಾಗಿ ಈಗ ಕೃಷಿ ಸಂಬಂಧಿತ ತೆರಿಗೆ ನೀತಿ ಕ್ರಮದ ಬಗ್ಗೆ ಸರಕಾರ ಸ್ಪಷ್ಟ ಮಾಹಿತಿ ನೀಡಿದೆ. ಆದಾಯ ತೆರಿಗೆ ಇಲಾಖೆ ನಿಯಮದ (Income Tax Department Rule) ಪ್ರಕಾರ ಕೃಷಿ ಹಾಗೂ ರೈತರ ಕಾರ್ಯ ಚಟುವಟಿಕೆಯಿಂದ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ವಾಣಿಜ್ಯ ಕೃಷಿ:

 

 

advertisement

ಕೃಷಿಯ ಅಂಶವನ್ನು ತೆರಿಗೆಯಿಂದ ಬೇರ್ಪಡಿಸಿದ್ದರು ಕೆಲ ಕೃಷಿ ಆದಾಯ ಅಧಿಕ ಲಾಭ ಬರುವ ಹಿನ್ನೆಲೆ ಇದನ್ನು ವಾಣಿಜ್ಯ ಕೃಷಿ ಸಾಲಿಗೆ ಸೇರಿಸಲಾಗಿದೆ. ಹಾಗಾಗಿ ವಾಣಿಜ್ಯ ಕೃಷಿ ಚಟುವಟಿಕೆಯಿಂದ ಬರುವ ಆದಾಯಕ್ಕೆ ಕೆಲ ಷರತ್ತು ಬದ್ಧ ವಿನಾಯಿತಿ ಇತರೆ ನಿಯಮ ಅನ್ವಯಿಸಲಾಗಿದೆ. ಆದಾಯ ತೆರಿಗೆ (Income Tax) ಕಾಯ್ದೆ 1961ರಾನ್ವಯ 5ಸಾವಿರಕ್ಕಿಂತ ಹೆಚ್ಚಿನ ಕೃಷಿ ಆದಾಯ ಗಳಿಕೆಗೆ ಫೈಲ್ಸ್ ಮಾಡಿಸುವುದು ಕಡ್ಡಾಯವಾಗಿದೆ. ಹಾಗಾದರೆ ಯಾವ ರೀತಿ ಕೃಷಿ ಇಂತಹ ನಿಯಮಗಳ ಅಡಿಯಲ್ಲಿ ಬರುತ್ತದೆ ಎಂದು ತಿಳಿಯಲು ಈ ಲೇಖನ ಪೂರ್ತಿ ಓದಿ.

ಯಾವೆಲ್ಲ ಕೃಷಿ:

  • ಚಹಾ ಕೃಷಿ (Tea Cultivation) ಅಧಿಕ ಲಾಭ ಇರುವ ಕಾರಣ ತೆರಿಗೆ ವ್ಯಾಪ್ತಿಯಲ್ಲಿ ಬರಲಿದೆ.
  • ಕಾಫಿ (Coffee Cultivation) ಮತ್ತು ರಬ್ಬರ್ ಕೃಷಿ (Rubber Cultivation) ಯಿಂದ ಕೂಡ ಅಧಿಕ ಲಾಭ ಬರಲಿದ್ದು ಆದಾಯ ತೆರಿಗೆ ವ್ಯಾಪ್ತಿ ಇರಲಿದೆ.
  • ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಉತ್ತಮ ಲಾಭ ಇರುವ ಕಾರಣ ತೆರಿಗೆ ವ್ಯಾಪ್ತಿಗೆ ಬರಲಿದೆ.
  • ಪ್ರಾಣಿ ವ್ಯಾಪಾರ ತೆರಿಗೆ ವ್ಯಾಪ್ತಿಯಲ್ಲಿ ಪರಿಗಣಿಸಲಾಗುವುದು.
  • ಮರ ಮಾರಾಟದಿಂದ ಬರುವ ಲಾಭ ಕೂಡ ತೆರಿಗೆ ವ್ಯಾಪ್ತಿಗೆ ಬರಲಿದೆ.
  • ಭೂಮಿ ಮತ್ತು ಕಟ್ಟಡ ಬಾಡಿಗೆ ರೂಪದಿಂದ ಪಡೆಯುವ ಹಣ ಕೂಡ ಬರಲಿದೆ. ಈ ಎಲ್ಲ ವಿಚಾರಗಳ ಮೇಲೆ ಕೆಲ ವಿನಾಯಿತಿ ಹಾಗೂ ಷರತ್ತು ಬದ್ಧ ತೆರಿಗೆ ಅನ್ವಯ ಇದೆ.

ಈ ರೀತಿ ತೆರಿಗೆ ಅನ್ವಯ:

ಇಲ್ಲಿ ರೈತರ ಒಟ್ಟು ಉತ್ಪನ್ನದ ಲಾಭದ ಮೇಲೆ 40% ದಷ್ಟು ಉತ್ಪನ್ನಕ್ಕೆ ಮಾತ್ರ ತೆರಿಗೆ ವಿಧಿಸಲಾಗುವುದು. ಉಳಿದ 60% ದಷ್ಟು ಉತ್ಪನ್ನಕ್ಕೆ ತೆರಿಗೆ ವಿನಾಯಿತಿ ಇರಲಿದೆ. ಚಾ , ಕಾಫಿ, ರಬ್ಬರ್, ಮರ ಸಾಗಾಟ ಇತರ ಕ್ಷೇತ್ರದನ್ನು ವಾಣಿಜ್ಯ ಕೃಷಿ ಸಾಲಿಗೆ ಸೇರಿಸಲಾಗಿದ್ದು ಇದಕ್ಕೆ ತೆರಿಗೆ ಸಾಧಾರಣ ನಿಯಮ ಅನ್ವಯಿಸುತ್ತದೆ. ಇದು ರಾಜ್ಯದಿಂದ ರಾಜ್ಯಕ್ಕೆ, ಬೆಳೆಗಳ ಒಟ್ಟು ಪ್ರಮಾಣಾಧಾರಿತ ತೆರಿಗೆ ಸಹ ಬದಲಾಗಲಿದೆ.

advertisement

Leave A Reply

Your email address will not be published.