Karnataka Times
Trending Stories, Viral News, Gossips & Everything in Kannada

Anna Bhagya Money: ಅನ್ನಭಾಗ್ಯ ಹಣ ಖಾತೆಗೆ ವಿಳಂಬ, ಯಾವಾಗ ಜಮೆ ಯಾಗಲಿದೆ?

advertisement

ರಾಜ್ಯ ಸರಕಾರ ಪಂಚ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಇಂದು ‌ಕೂಡ ಹೆಚ್ಚು ಪ್ರಚಲಿತ ದಲ್ಲಿದೆ. ಇನ್ನೇನು ಲೋಕ ಸಭೆ ಚುನಾವಣೆ ಯ ಫಲಿತಾಂಶ ಕೂಡ ಬರಲಿದ್ದು ಫಲಿತಾಂಶಕ್ಕೆ ಇಡೀ ರಾಜ್ಯವೇ ಕಾದು ಕುಳಿತಿದೆ. ಆದರೆ ಗ್ಯಾರಂಟಿ ಯೋಜನೆ ‌ಗಳು ಇಂದು ಕೂಡ ಪ್ರಸಿದ್ದಿ ಯಲ್ಲಿದ್ದು ಅನ್ನ ಭಾಗ್ಯ ಯೋಜನೆ (Anna Bhagya Yojana) ಯ ಮೂಲಕ ಮನೆಯ ಹಿರಿಯ ಸದಸ್ಯನ‌ ಖಾತೆಗೆ ಹಣ ಕೂಡ ಜಮೆಯಾಗುತ್ತಿದ್ದು ಈ ತಿಂಗಳಿನ ಹೋದ ತಿಂಗಳಿನ‌ ಹಣ ಖಾತೆಗೆ ಜಮೆ ಯಾಗಿಲ್ಲ ‌.ಇದಕ್ಕೆ ಕಾರಣವೇನು? ಯಾಕೆ ‌ವಿಳಂಬ ವಾಗಿದೆ ಎಂಬ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಪಡಿತರ ಜೊತೆಗೆ ಹಣ:

ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಯ ಮೂಲಕ ಹತ್ತು ಕೆಜಿ ಅಕ್ಕಿಯನ್ನು ನೀಡುವುದಾಗಿ ತಿಳಿಸಿತ್ತು. ಆದರೆ ಕೇಂದ್ರ ಸರಕಾರ ಅಕ್ಕಿ ನೀಡದ ಹಿನ್ನಲೆಯಲ್ಲಿ ಅಕ್ಕಿ ಲಭ್ಯವಾಗದೆ ಇದ್ದಲ್ಲಿ 5 ಕೆ.ಜಿ ಅಕ್ಕಿಯನ್ನು ಹಾಗೂ ಉಳಿದ 5 ಕೆ.ಜಿ. ಅಕ್ಕಿಯ ಬದಲಾಗಿ 170 ರೂ. ಹಣವನ್ನು ಪಾವತಿಸುವುದಾಗಿ ಸರಕಾರ ತಿಳಿಸಿತ್ತು.ಈಗ ಒಬ್ಬರಿಗೆ 170 ರೂ. ಹಣ ಫಲಾನುಭವಿಗಳಿಗೆ ಲಭ್ಯವಾಗುತ್ತಿದೆ.

ಹಣ ಬಂದಿಲ್ಲ:

 

Image Source: The Indian Express

 

ಪ್ರತಿ ತಿಂಗಳು ಕೂಡ 15ನೇ ತಾರೀಖಿನೊಳಗೆ ಅನ್ನಭಾಗ್ಯ ಹಣ (Anna Bhagya Money) ಜಮೆ ಯಾಗುತ್ತಿದ್ದು ಫಲಾನು ಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ಕೆ.ಜಿ.ಗೆ 34ರಂತೆ ಒಟ್ಟು 170 ಮೊತ್ತವನ್ನು ನೀಡುತ್ತಿದೆ. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಿಂಗಳ ಹಣ ಬಿಡುಗಡೆ ವಿಳಂಬವಾಗಿದೆ.ಆದರೆ ಮೇ 31 ರ ಒಳಗೆ 10 ನೇ ಕಂತಿನ ಜೊತೆ ಹಿಂದಿನ ಕಂತು ಬರಲು ಬಾಕಿ ಇದ್ದ ಅನ್ನಭಾಗ್ಯ ಹಣ ಸಂದಾಯ ಆಗಲಿದೆ ಎನ್ನಲಾಗಿದೆ.

advertisement

ಹಣ ಯಾಕೆ ಬಂದಿಲ್ಲ?

ಇನ್ನೂ ಹಲವರಿಗೆ ಈ ಅನ್ನಭಾಗ್ಯ ಹಣ (Anna Bhagya Money) ತಲುಪಿಲ್ಲ. ಆಧಾರ್ ಜೋಡಣೆ ಆಗಿಲ್ಲ. ಖಾತೆ ನಿಷ್ಕ್ರಿಯ, ಕುಟುಂಬ ದಲ್ಲಿ ಮನೆ ಯಜಮಾನ ಇಲ್ಲದಿರುವ ನಾನಾ ಕಾರಣಗಳಿಂದ ಹಲವು ಫಲಾನುಭವಿಗಳ ಖಾತೆಗಳಿಗೆ ಹಣ ಬಂದಿಲ್ಲ.

ಇವರಿಗೆ ಹಣ ಬರಲಿದೆ:

ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ ಇದ್ದವರಿಗೆ ಅನ್ನಭಾಗ್ಯ ಹಣವನ್ನು ಜಮೆ ಮಾಡುತ್ತಿದ್ದು ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಇನ್ನು ಕುಟುಂಬದಲ್ಲಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ ಇತರ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ಹಣ ಹಾಕಲು ಸರಕಾರ ಒಪ್ಪಿಗೆ ನೀಡಿದೆ.

ಹೊಸ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ:

ಈಗಾಗಲೇ ‌ಹೊಸ ರೇಷನ್ ಕಾರ್ಡ್ (New Ration Card) ಗೆ ಅರ್ಜಿ ಸಲ್ಲಿಸಲು ಸರಕಾರ ಅವಕಾಶ ನೀಡಿದ್ದು ಜೂನ್ 4 ರ ನಂತರ ಮತ್ತೆ ಅವಕಾಶ ನೀಡಲಿದೆ.ಹಾಗಾಗಿ ಯಾರೆಲ್ಲ‌ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದರೋ ಅವರು ಅರ್ಜಿ ಹಾಕಬಹುದು.ಆದರೆ ಸುಳ್ಳು ದಾಖಲೆ ನೀಡಿ ಗ್ಯಾರಂಟಿ ಯೋಜನೆಯ ಹಣ ಪಡೆದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗಲಿದೆ‌.

advertisement

Leave A Reply

Your email address will not be published.