Karnataka Times
Trending Stories, Viral News, Gossips & Everything in Kannada

Aadhaar Card Link: ರೈತರ RTC ಗೆ ಆಧಾರ್ ಲಿಂಕ್ ಕಡ್ಡಾಯ

advertisement

ರೈತರು ಕೃಷಿಯಲ್ಲಿ ಅಭಿವೃದ್ಧಿ ‌ಯನ್ನು ಕಾಣಬೇಕಾದರೆ ಕೃಷಿಯ ಪೋಷಣೆ,ರಕ್ಷಣೆ ಸರಿಯಾಗಿ ಮಾಡಬೇಕು. ಹೌದು ರೈj

WhatsApp Join Now
Telegram Join Now

ತರು ಕೃಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸಬೇಕು,ಅವರಿಗೆ ಕೆಲಸ ಸುಲಭವಾಗಬೇಕು ಎಂದು ಸರಕಾರವು ಆಧುನಿಕ ಕೃಷಿ ಪದ್ದತಿಗೂ ಒತ್ತು ನೀಡುತ್ತಿದೆ.‌ ಅದೇ ರೀತಿ ರೈತರು ಮತ್ತಷ್ಟು ‌ಕೃಷಿಯಲ್ಲಿ ಆಸಕ್ತಿ ತೋರಬೇಕೆಂದು ವಿವಿಧ ರೀತಿಯ ಸೌಲಭ್ಯ ಗಳನ್ನು‌ ಕೂಡ ಸರಕಾರ ಒದಗಿಸುತ್ತಿದೆ.ಈಗಾಗಲೇ ಬರಗಾಲ ದಿಂದ ನಷ್ಟ ಉಂಟಾಗಿದ್ದ ರೈತರಿಗೆ ಬರ ಪರಿಹಾರ ಮೊತ್ತ ವನ್ನು‌ ನೀಡಲು ಸರಕಾರ ಮುಂದಾಗಿದ್ದು‌ ಕೆಲವು ರೈತರ ಖಾತೆಗೆ ಹಣವೂ ಕೂಡ ಜಮೆಯಾಗಿದೆ.

ಈ ಪ್ರಕಟನೆ ನೀಡಿದೆ:

ಇದೀಗ ಸರಕಾರವು ರೈತರಿಗೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು ಆರ್‌ಟಿಸಿಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದಿದೆ. ಇದಕ್ಕಾಗಿ ಸರ್ಕಾರ ಹೊಸದಾದ ತಂತ್ರಾಂಶವನ್ನು ಸಿದ್ಧಗೊಳಿಸಿದ್ದು ಈ ಬಗ್ಗೆ ‌ ಗ್ರಾಮ ಆಡಳಿತ ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿಯನ್ನು ಕೂಡ ನೀಡಿದ್ದಾರೆ.

ಕಡ್ಡಾಯ ಮಾಡಬೇಕು:

 

advertisement

Image Source: Times of India

 

ಈ ಹಿಂದೆಯೇ ಸರ್ಕಾರ ಆರ್‌ಟಿಸಿ (RTC) ಗೆ ಆಧಾರ್‌ ಕಾರ್ಡ್ (Aadhaar Card) ಗೆ ಜೋಡಣೆ ಕಡ್ಡಾಯ ಎಂದು ತಿಳಿಸಿತ್ತು. ಆದರೆ ಕೆಲವು ರೈತರು ಮಾತ್ರ ಲಿಂಕ್ ಮಾಡಿದ್ದು ಇನ್ನು‌ ಕೆಲವು ರೈತರು ಈ‌ ಕೆಲಸ ಮಾಡಿಲ್ಲ. ಸರ್ಕಾರದ ಯಾವುದೇ ಸೌಲಭ್ಯಗಳು ಸಿಗಬೇಕು ಎಂದರೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಬೇಕು ಇಲ್ಲದಿದ್ದಲ್ಲಿ ಯಾವುದೇ ಸರಕಾರದ ಸೌಲಭ್ಯ ಗಳು ಸಿಗುವುದಿಲ್ಲ.

ಇಲ್ಲಿ ಲಿಂಕ್ ಮಾಡಿ:

ನಿಮ್ಮ ಜಮೀನಿನ ಅರ್ ಟಿ ಸಿ (RTC) ಮತ್ತು ಆಧಾರ್ ಕಾರ್ಡ್ (Aadhaar Card) ತೆಗೆದುಕೊಂಡು ಗ್ರಾಮ ಒನ್ ಕೇಂದ್ರ, ಆನ್‌ಲೈನ್ ಕೇಂದ್ರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಲಿಂಕ್ ಮಾಡಬಹುದು.

ಅನ್ ಲೈನ್ ಮೂಲಕ ಮಾಡಿಸಿ:

  • ಮೊದಲಿಗೆ RTC Aadhaar Link Status ಲಿಂಕ್ ಮೇಲೆ ಕ್ಲಿಕ್ ಮಾಡಿ ಭೂಮಿ ವೆಬ್ಸೈಟ್ ಗೆ ತೆರಳಿ. ನಂತರ ಮೊಬೈಲ್ ನಂಬರ್ ಅನ್ನು ಹಾಕಿ ಕ್ಯಾಪ್ಚ್ ಕೋಡ್/Captcha code ಅನ್ನು ನಮೂದಿಸಿ, SEND OTP ಬಟನ್ ಮೇಲೆ ಕ್ಲಿಕ್ ಮಾಡಿ.ನಂತರ OTP ಅನ್ನು ಹಾಕಿ.ಲಾಗಿನ್ ಅಗಿ.
  • ನಂತರ ಆಧಾರ್ ಕಾರ್ಡ್ ನಂಬರ್ ಹಾಕಿ OK ಎಂದು ಕ್ಲಿಕ್ ಮಾಡಿ. Submit ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಲಿಂಕ್ ಆಧಾರ್, Link Aadhar ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಸರ್ವೆ ನಂಬರ್ ಒಂದೊಂದನ್ನು ಟಿಕ್ ಮಾಡಿಕೊಂಡು Link ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ಮತ್ತೆ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ Verify OTP ಬಟನ್ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ ? Yes ಎಂದು ಕ್ಲಿಕ್ ಮಾಡಿದರೆ ಈ ಸರ್ವೆ ನಂಬರ್ ಈಗಾಗಲೇ ಲಿಂಕ್ ಆಗಿದೆ ಎನ್ನುವ ಸಂದೇಶ ಬರಲಿದೆ.

advertisement

Leave A Reply

Your email address will not be published.