Karnataka Times
Trending Stories, Viral News, Gossips & Everything in Kannada

Aadhaar Card: ದೇಶದ ಜನತೆಗೆ ಆಧಾರ್ ಕಾರ್ಡ್ ವಿಚಾರವಾಗಿ ಹೊಸ ರೂಲ್ಸ್!

advertisement

ಇಂದು ಆಧಾರ್ ಕಾರ್ಡ್ (Aadhaar Card) ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಮತ್ತು ಅತೀ ಅಗತ್ಯವಾದ ದಾಖಲೆ ಎನಿಸಿದೆ. ಇಂದು ಯಾವುದೇ ಸರಕಾರಿ ಸೌಲಭ್ಯ ಪಡೆಯುದಾದರೂ ಈ ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗಿದೆ. ಹಾಗಾಗಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಈ ಆಧಾರ್ ಕಾರ್ಡ್ ಎನ್ನುವುದು ಬಹಳಷ್ಟು ಮುಖ್ಯವಾಗಿದೆ.

ಲಿಂಕ್ ಕಡ್ಡಾಯ:

 

Image Source: Business Today

 

ಇಂದು ಆಧಾರ್ (Aadhaar Card) ಜೊತೆ ಪ್ಯಾನ್ ಕಾರ್ಡ್ (PAN Card), ರೇಷನ್ ಕಾರ್ಡ್ (Ration Card) ಇತ್ಯಾದಿ ಲಿಂಕ್ ಸಹ ಕಡ್ಡಾಯ ವಾಗಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯಲು ಅಥವಾ ಹೊಸ ಸಿಮ್ ಕಾರ್ಡ್ (New SIM Card) ಪಡೆಯಲು ಆಧಾರ್ ಇಂದು ಬಹಳಷ್ಟು ಅಗತ್ಯವಿದೆ. ಈ ಕಾರಣದಿಂದಾಗಿ ಆಧಾರ್ ಸಂಬಂಧಿತ ವಿಚಾರವಾಗಿ ಅಪರಾಧಗಳು ಕೂಡ ಬಹಳಷ್ಟು ಹೆಚ್ಚಾಗಿದೆ.

ದುರ್ಬಳಕೆ ಹೆಚ್ಚಳ:

advertisement

ಇಂದು ಆಧಾರ್ ಗೆ ಸಂಬಂಧ ಪಟ್ಟಂತೆ ಮೋಸ ವಂಚನೆಗಳು ಹೆಚ್ಚಾಗಿದ್ದು ನಿಮ್ಮ ಆಧಾರ್ ಅಥವಾ ಆಧಾರ್ ಸಂಬಂಧಿತ ಮಾಹಿತಿಯನ್ನು ಪಡೆದು ದುರುಪಯೋಗ ಮಾಡುವ ಘಟನೆ ಹೆಚ್ಚಾಗಿದೆ. ಈ ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಪಡೆಯಬಹುದು.ಇತರ ರೀತಿಯಲ್ಲಿ ದುರ್ಬಳಕೆ ಕೂಡ ಮಾಡಬಹುದು. ಹಾಗಾಗಿ ಆಧಾರ್ ಕಾಯ್ದೆ, 2016 ಆಧಾರ್ ಸಂಬಂಧಿತ ಅಪರಾಧಗಳಿಗೆ ಪರಿಹಾರ ಮತ್ತು ಆ ಅಪರಾಧಗಳಿಗೆ ಶಿಕ್ಷೆಯನ್ನು ಕೂಡ ನೀಡಲಿದೆ.

ನವೀಕರಣ ಕಡ್ಡಾಯ:

 

Image Source: Zee Business

 

ನಿಮ್ಮ ಆಧಾರ್ ಕಾರ್ಡ್ (Aadhaar Card) 10 ವರ್ಷ ಹಳೆಯದು ಆಗಿದ್ದರೆ ಅಥವಾ ನಿಮ್ಮ ಮನೆಯ ಸದಸ್ಯರ ಆಧಾರ್ ಕಾರ್ಡ್‌ಗಳು 10 ವರ್ಷದ ಹಳೆಯದು ಎಂದಾದರೆ ಅದನ್ನು ನವೀಕರಣ ಮಾಡುವುದು ಕಡ್ಡಾಯ ಇಲ್ಲದ್ದಿದ್ದಲ್ಲಿ ನಿಮ್ಮ ಆಧಾರ್ ನಿಷ್ಕ್ರಿಯ ಆಗಲಿದೆ. ಹತ್ತು ವರ್ಷದ ಹಳೇ ಆಧಾರ್ ಸಂಖ್ಯೆ ಹೊಂದಿರುವವರು ದಾಖಲೆಗಳನ್ನು ನವೀಕರಿಸಲು ಕಡ್ಡಾಯವಾಗಿ ತಿಳಿಸಲಾಗಿದೆ.

ದಂಡ ಎಷ್ಟು?

ಹಾಗಾಗಿ ಆಧಾರ್ ವಿಚಾರವಾಗಿ ನೀವು ತಪ್ಪು ಮಾಹಿತಿ ನೀಡಿದರೆ 3 ವರ್ಷ ಜೈಲು ಶಿಕ್ಷೆ ಅಥವಾ 10 ಸಾವಿರ ದಂಡ ವಿಧಿಸಲಿದೆ. ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ವ್ಯಕ್ತಿಯು ಹೆಸರು-ವಿಳಾಸ ಅಥವಾ ಬಯೋಮೆಟ್ರಿಕ್ ಮಾಹಿತಿ ಮೋಸ ವಾದರೆ 3 ವರ್ಷಗಳ ಜೈಲು ಶಿಕ್ಷೆ ಅಥವಾ 10 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಬಹುದು. ಕೇಂದ್ರ ನಿಯಮ ಉಲ್ಲಂಘಿಸಿದರೆ ಕನಿಷ್ಠ 10 ಲಕ್ಷ ರೂ.ಗಳ ದಂಡ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.ಅಲ್ಲಿರುವ ಡೇಟಾವನ್ನು ಬದಲಾವಣೆ ಮಾಡಿದರೆ ಶಿಕ್ಷೆಯನ್ನು ನೀಡಬಹುದು.

advertisement

Leave A Reply

Your email address will not be published.