Karnataka Times
Trending Stories, Viral News, Gossips & Everything in Kannada

Gold Price: ಚಿನ್ನದ ಬೆಲೆ 50 ಸಾವಿರಕ್ಕೆ ಕುಸಿಯುತ್ತಾ? ತಜ್ಞರ ಅಭಿಪ್ರಾಯ ಏನು?

advertisement

ಚಿನ್ನ ಅಂದ ತಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಹೌದು ಅಷ್ಟರ ಮಟ್ಟಿಗೆ ಚಿನ್ನ (Gold) ಎಂಬುದು ಅಗತ್ಯ ಮತ್ತು ಹೂಡಿಕೆಯ ವಸ್ತು ಎನಿಸಿದೆ.‌ಅದರಲ್ಲೂ ಭಾರತೀಯ ಸಂಪ್ರದಾಯ ಪ್ರಕಾರ ಮದುವೆ,ಶುಭ ಸಮಾರಂಭಗಳಿಗೆ ಚಿನ್ನ ಅಗತ್ಯ ವಾಗಿ ಬೇಕು. ಅದೇ ರೀತಿ ಇಂದು ಹೂಡಿಕೆ ಅಂತ ಬಂದಾಗ ಸಹ ಹೆಚ್ಚಿನ ಜನರು ಚಿನ್ನದ ಹೂಡಿಕೆಯನ್ನೇ ಆಯ್ದು ಕೊಳ್ಳುತ್ತಾರೆ. ಚಿನ್ನದ ಬೆಲೆ (Gold Rate) ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು ಇದೀಗ ಮುಂದಿನ ದಿನದಲ್ಲಿ ಚಿನ್ನದ ದರ ಕುಸಿತ ಆಗುತ್ತೇ ಎನ್ನುವ ಮಾಹಿತಿ ಯೊಂದು ಬಂದಿದ್ದು ಎಷ್ಟರ ಮಟ್ಟಿಗೆ ಕುಸಿತ ಕಾಣಲಿದೆ ಎನ್ನುವ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಬೆಲೆ‌ ದುಪ್ಪಟ್ಟು:

 

Image Source: Mint

 

ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆ (Gold Price) ಸಾಕಷ್ಟು ಬದಲಾವಣೆ ಆಗಿದೆ. ಇಂದು ಬೆಲೆಯಂತು ದುಪ್ಪಟ್ಟು ಆಗಿದೆ.ಇದಕ್ಕೆ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗಿದ್ದು‌ ಚಿನ್ನದ ಬೆಲೆ ಏರಿಕೆ ಯಾಗಿದ್ದು ಹೀಗಾಗಿ ಚಿನ್ನದ ಬೆಲೆಯು ಈ ವರ್ಷದ ಅಂತ್ಯಕ್ಕೆ, ಹೆಚ್ಚು ಆಗಬಹುದು ಅಂತಿದ್ದ ತಜ್ಞರು. ಆದರೆ ಈಗ ಉಲ್ಟಾ ಆಗಿ ಚಿನ್ನ ಕುಸಿಯಬಹುದು ಎನ್ನಲಾಗುತ್ತಿದೆ.

advertisement

ಕಾರಣವೇನು?

ಚಿನ್ನ ಖರೀದಿ ಮಾಡೋರಿಗೆ ಬೆಲೆ ಕುಸಿದರೆ ಖುಷಿ. ಈಗ ಒಂದು ವಾರದಲ್ಲಿ ಬೆಲೆ ಏರಿಕೆ ಇಳಿಕೆ ಆಗುತ್ತಲೇ ಇದೆ. ಮುಂದಿನ ದಿನದಲ್ಲಿ ಚಿನ್ನ ಮತ್ತೆ 50 ಸಾವಿರ ರೂಪಾಯಿಗೆ ಕುಸಿತ ಕಾಣಲಿದೆ ಎನ್ನಲಾಗಿದೆ. ಹೌದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆದಿದೆ. ಈ ಯುದ್ಧದ ಪರಿಣಾಮ ಕಳೆದ ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆ (Gold Price) ಭಾರಿ ಏರಿಕೆ ಕಂಡಿತ್ತು. ಆದರೆ, ಈಗ ಇಸ್ರೇಲ್ ಹಮಾಸ್ ನಡುವೆ ಯುದ್ಧ ನಿಂತಿದ್ದು ಹೀಗಾಗಿ ಚಿನ್ನದ ಮೇಲೆ ಡಿಮ್ಯಾಂಡ್ ಕಡಿಮೆ ಆಗಿ ಬೆಲೆ ಮತ್ತೆ ಕುಸಿತ ಕಾಣಲಿದೆ ಎನ್ನಲಾಗುತ್ತಿದೆ.

ಇಂದಿನ ಬೆಲೆ ಎಷ್ಟು?

ಇಂದು 1 ಗ್ರಾಂ ಚಿನ್ನಕ್ಕೆ 6,685 ರೂ ಇಂದು ನಿನ್ನೆ 6,665 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 20 ರೂ ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 66,850 ರೂ ಇರಲಿದ್ದು ನಿನ್ನೆ 66,650 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 200 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,68,500 ರೂ. ನೀಡಬೇಕು.ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ (Gold Price) 6,740 ರೂ ಆಗಿದ್ದು 24 ಕ್ಯಾರೆಟ್‌ಗೆ 7,353 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,685 ರೂ. 24 ಕ್ಯಾರೆಟ್‌ಗೆ 7,293 ರೂ. ಇರಲಿದೆ.ಬೆಳ್ಳಿ ಬೆಲೆ 100 ಗ್ರಾಂಗೆ 9,325 ರೂಪಾಯಿ ಆಗಿದೆ.‌ಒಟ್ಟಿನಲ್ಲಿ‌ ಮುಂದಿನ‌ ದಿನದಲ್ಲಿ ಚಿನ್ನದ ಬೆಲೆ ಕಡಿಮೆ ಯಾದರೆ ಗ್ರಾಹಕರಿಗೆ ಮತ್ತಷ್ಟು ಖುಷಿ ಸಿಗಲಿದೆ.

advertisement

Leave A Reply

Your email address will not be published.