Karnataka Times
Trending Stories, Viral News, Gossips & Everything in Kannada

BPL Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರಿಗೆ ಬಹುಮುಖ್ಯ ಮಾಹಿತಿ! ಈ 7 ದಾಖಲೆ ರೆಡಿ ಇಟ್ಟುಕೊಳ್ಳಿ

advertisement

BPL Card New: ಇಂದು ರೇಷನ್ ಕಾರ್ಡ್ ಎಂಬುದು ಅತೀ ಅಗತ್ಯ ವಾದ ದಾಖಲೆ ಎನಿಸಿದ್ದು ಬಡ ವರ್ಗದ ಜನತೆಗೆ ಈ ಕಾರ್ಡ್ ಮೂಲಕ ಹಲವು ರೀತಿಯ ಸೌಲಭ್ಯ ಗಳು ಸಿಗ್ತಾ ಇದೆ‌. ಹೌದು ಅದರಲ್ಲೂ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಅನ್ನು ಬಡ ವರ್ಗದ ಜನತೆಗಾಗಿಯೇ ಜಾರಿ ಮಾಡಲಾಗಿದ್ದು ಇದರ ಮೂಲಕ ಹಲವು ರೀತಿಯ ಸೌಲಭ್ಯ ಪಡೆಯುತ್ತಿದ್ದಾರೆ. ಅದರಲ್ಲೂ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದು ಕೊಳ್ಳಲು ಈ ರೇಷನ್ ಕಾರ್ಡ್ ಅಗತ್ಯ ವಾಗಿ ಬೇಕಾಗಿದೆ. ಇಂದು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲು ಸಹ ಹೆಚ್ಚಿನ ಜನರು ಕಾಯ್ತಾ ಇದ್ದು ಅರ್ಜಿ ಸಲ್ಲಿಕೆ ಮಾಡಲು ಸರಕಾರ ಸದ್ಯದಲ್ಲೇ ಅವಕಾಶ ನೀಡಬಹುದು.

WhatsApp Join Now
Telegram Join Now

ಹೌದು ಹೊಸದಾಗಿ ಮದುವೆ ಆದ ದಂಪತಿಗಳು, ಹೊಸದಾಗಿ ಮನೆ ಮಾಡಿದವರು ಇತ್ಯಾದಿ ಜನೆಉ ಹೊಸ ರೇಷನ್ ಕಾರ್ಡ್ ಪಡೆಯಲು ಕಾಯುತ್ತಿದ್ದು ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಹಿಸುದ್ದಿ ನೀಡಿದೆ. ಹೌದು ಜೂನ್ ಮೊದಲ ವಾರದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದು ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯ ವಾಗಿದೆ. ಅರ್ಹರು ಅರ್ಜಿ ಹಾಕಬಹುದಾಗಿದೆ.

NEW RATION CARD JULY UPDATES
Image Source: Times Bull

advertisement

ಈ ದಾಖಲೆಗಳು ಬೇಕು
*ಆಧಾರ್ ಕಾರ್ಡ್
*ವೋಟರ್ ಐಡಿ
*ವಯಸ್ಸಿನ ಪ್ರಮಾಣ ಪತ್ರ
*ಡ್ರೈವಿಂಗ್ ಲೈಸೆನ್ಸ್
*ಪೋಟೋ
*ಮೊಬೈಲ್ ಸಂಖ್ಯೆ
ಸ್ವಯಂ ಘೋಷಿತ ಪ್ರಮಾಣ ಪತ್ರ

ಅರ್ಜಿ ಹಾಕಲು ಅರ್ಹರು ಆಹಾರ ಮತ್ತು ನಾಗರಿಕ ಇಲಾಖೆ ahara.kar.nic.in ಮೂಲಕ ಅರ್ಜಿ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.NEW RATION CARD JULY UPDATES

ಹೀಗೆ ಅರ್ಜಿ ಹಾಕಿ
ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರು ಖಾಸಗಿ ಸೈಬರ್ ಸೆಂಟರ್ ಬಳಸುವುದನ್ನು ಬಿಟ್ಟು ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಹಾಕಿದರೆ ಒಳಿತು. ಹೌದು kar.nic.in ಇಲ್ಲಿ ಇ-ಸೇವೆಗಳು ಎಂಬಲ್ಲಿ ಕ್ಲಿಕ್ ಮಾಡಿದರೆ, ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸೋ ಆಯ್ಕೆ ಕಾಣಲಿದೆ. ಬಳಿಕ ನಿಮ್ಮ ಮಾಹಿತಿ ಗಳನ್ನು ಹಾಕಿ, ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಆಯ್ಕೆ ಮಾಡಿಕೊಂಡು ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ ಲೋಡ್ ಮಾಡಿ.

ಕಾರ್ಡ್ ‌ತಿದ್ದುಪಡಿಗೂ ಅವಕಾಶ
ಹೌದು ಕೆಲವರ ರೇಷನ್ ಕಾರ್ಡ್ ಅನ್ನು‌ತಿದ್ದು ಪಡಿ ಮಾಡಲು ಸಹ ಬಾಕಿ ಇರಲಿದ್ದು ಆಹಾರ ಇಲಾಖೆಯು ‌ಜುಲೈ ತಿಂಗಳಿನಲ್ಲಿ ಅವಕಾಶ ನೀಡಬಹುದು.ಹಾಗಾಗಿ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ಸೇರ್ಪಡೆ ‌ಇತ್ಯಾದಿ ಮಾಡಲು ಅವಕಾಶ ಇರಲಿದೆ‌.

advertisement

Leave A Reply

Your email address will not be published.