Karnataka Times
Trending Stories, Viral News, Gossips & Everything in Kannada

Gruha Lakshmi Scheme: 2 ತಿಂಗಳಿಂದ ಗೃಹಲಕ್ಷ್ಮಿ ಹಣ ಬಾರದವರಿಗೆ ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ! ಸಂಜೆಯ ಗುಡ್ ನ್ಯೂಸ್

advertisement

Gruha Lakshmi Scheme: ಇದೀಗ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಾರದೇ ಇದ್ದವರಿಗೆ ಗುಡ್ ನ್ಯೂಸ್ ಮಾಹಿತಿ‌ ‌ಯೊಂದು ಬಂದಿದೆ. ಹೌದು ಮಹಿಳೆಯರ ಅಭಿವೃದ್ಧಿ ಗಾಗಿ ಕಾಂಗ್ರೆಸ್ ಸರಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳಿಗೆ ಮನೆಯ‌ ಹಿರಿಯ ಸದಸ್ಯೆಯ ಖಾತೆಗೆ ಹಣ ಜಮೆ ಮಾಡ್ತಾ ಇದೆ. ಇದುವರೆಗೂ ನೊಂದಣಿ ಮಾಡಿದ ಮಹಿಳೆಯರಿಗೆ ಸುಮಾರು ಹನ್ನೊಂದು ಕಂತಿನ ವರೆಗೆ ಹಣ ಬಿಡುಗಡೆ ಯಾಗಿದ್ದು ಹೆಚ್ಚಿನ ಮಹಿಳೆಯರು ಈ ಯೋಜನೆಯ ಸದುಪಯೋಗ ಮಾಡಿಕೊಂಡಿದ್ದಾರೆ.

WhatsApp Join Now
Telegram Join Now

ಆದರೆ ಎರಡು ತಿಂಗಳಿನಿಂದ ಸರಿಯಾಗಿ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ ಎಂದು‌ಕೆಲವು ಮಹಿಳೆಯರು ಹೇಳ್ತಾ ಇದ್ದಾರೆ.‌ಚುನಾವಣೆ ಇದ್ದ ಕಾರಣದಿಂದಾಗಿ ಹಣ ಬರುವುದು ಕೂಡ ವಿಳಂಬ ವಾಗಿತ್ತು.ಇದೀಗ ಎರಡು ತಿಂಗಳಿನಿಂದ ಹಣ ಬಾರದೇ ಇದ್ದವರಿಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದ್ದು ಈ ಬಗ್ಗೆ ಓದಿರಿ.

ಗೃಹಲಕ್ಷ್ಮಿ ಯೋಜನೆಯ ಆಪ್ಡೆಟ್ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಕೆಲವು ಮಹಿಳೆಯರಿಗೆ ಒಂದು ಕಂತಿನ ಹಣ ಜಮೆ ಯಾಗಿಲ್ಲ ಎನ್ನುವ ಸಮಸ್ಯೆ ಯಾದರೆ ಕೆಲವು ಮಹಿಳೆಯರಿಗೆ ಎರಡು ತಿಂಗಳ ಹಣ ಬಂದಿಲ್ಲ.ಈ ಬಗ್ಗೆ ಮಾತನಾಡಿದ ಸಚಿವೆ ಗೃಹಲಕ್ಷ್ಮಿ ಹಣವನ್ನು ಮೇ 1ರಂದು ಮಹಿಳೆಯರ ಖಾತೆಗೆ ಜಮೆ ಮಾಡಿದ್ದೇವೆ, ಜೂನ್ ತಿಂಗಳ ಹಣ ಈಗಾಗಲೇ ಟ್ರೆಷರಿಗೆ ಹಾಕಿದ್ದೇವೆ ಇಡೀ ರಾಜ್ಯದಲ್ಲಿ ಇವತ್ತು ಮತ್ತು ನಾಳೆ ನಾಳೆ ಮೊತ್ತ ಕ್ರೆಡಿಟ್ ಆಗಲಿದೆ ಎನ್ನುವ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.

Gruha Lakshmi Scheme
Image Source: The New Indian Express

advertisement

ಗ್ಯಾರಂಟಿ ಸ್ಥಗಿತ ಬಗ್ಗೆ ಸುಳ್ಳು ಆರೋಪ ಕೇಳಿ ಬರ್ತಾ ಇದೆ. ಯಾವುದೇ ಕಾರಣಕ್ಕೂ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಅದರಲ್ಲೂ ಮಹಿಳೆಯರ ಯೋಜನೆಗಳು ಯಾವತ್ತಿದ್ದರೂ ಮುಂದುವರಿಯುತ್ತದೆ ಎಂದರು.

ಮೇ ತಿಂಗಳಲ್ಲಿ ಎಲ್ಲ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆ ಯಾಗಿದೆ. ಐದು ವರ್ಷ ಕೂಡ ಗೃಹಲಕ್ಷ್ಮಿ ಮನೆ ಮನೆ ಬಾಗಿಲಿಗೆ ತಲುಪುತ್ತಾಳೆ. ಗೃಹಲಕ್ಷ್ಮಿ ಯೋಜನೆ ಸ್ಥಗಿತ ವಾಗುವ ಮಾತೇ ಇಲ್ಲ, ಈ ಯೋಜನೆಗಳು ಮುಂದು ವರೆಯುತ್ತದೆ. ಯಾರು ಕೂಡ ಆತಂಕಕ್ಕೊಳಗಾಗುವುದು , ಪ್ರತಿ ತಿಂಗಳು ನೋಂದಣಿ ಮಾಡಿದ ಮಹಿಳೆಯರಿಗೆ ಹಣ ತಲುಪಿಸುತ್ತೇವೆ ಎಂದರು.

ಇನ್ನು ಗೃಹಲಕ್ಷ್ಮಿ ಹಣ ಬಾರದೇ ಇದ್ದಂತಹ ಮಹಿಳೆಯರು ತಮ್ಮ ದಾಖಲೆಗಳನ್ನು ಸರಿ ಪಡಿಸಿ ಮತ್ತೆ ನೋಂದಣಿ ಮಾಡಬಹುದಾಗಿದೆ.ಈಗಾಗಲೇ ಕೆಲವು ತಾಂತ್ರಿಕ ಸಮಸ್ಯೆ ಯಿಂದ ಗೃಹಲಕ್ಷ್ಮಿ ಹಣ ಜಮೆ ಯಾಗಿಲ್ಲ.ಕೆಲವರ ಆಧಾರ್‌ ಕಾರ್ಡ್ ಜೋಡಣೆಯಾಗಿಲ್ಲಎಂದು ಗೃಹಲಕ್ಷ್ಮಿ ಹಣ ಬರ್ತಾ ಇಲ್ಲ.ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮೂರು, ನಾಲ್ಕು ಬ್ಯಾಂಕ್ ಖಾತೆ ಇದ್ದರೆ ಅಂತಹವರಿಗೆ ಗೃಹಲಕ್ಷ್ಮಿಯ ಹಣ ಜಮೆ ಯಾಗೋದಿಲ್ಲ. ಅದೇ ರೀತಿ ಖಾತೆಯಿದ್ದರೂ ಹಣದ ಚಲಾವಣೆ ಮಾಡಿಲ್ಲದೆ ಇದ್ದರೆ ಅಂತಹವರಿಗೂ ಹಣವಿಲ್ಲ. ಹಾಗಾಗಿ ಮಹಿಳೆಯರು ಆಧಾರ್ ಅಪ್ಡೇಟ್, ಆಧಾರ್ ಕಾರ್ಡ್ ಇ‌ಕೆವೈಸಿ, ರೇಷನ್ ಕಾರ್ಡ್ ಲಿಂಕ್, ಬ್ಯಾಂಕ್ ಖಾತೆ ಲಿಂಕ್ ಇತ್ಯಾದಿ ಮಾಡುವುದು ಕೂಡ ಕಡ್ಡಾಯ‌.

Gruha Lakshmi Scheme
Image Source: Deccan Herald

advertisement

Leave A Reply

Your email address will not be published.