Karnataka Times
Trending Stories, Viral News, Gossips & Everything in Kannada

Gruha Lakshmi Yojane: ಗೃಹಲಕ್ಷ್ಮಿ ಮೀಟಿಂಗ್ ಮುಕ್ತಾಯ, ಈ 12 ಜಿಲ್ಲೆಗಳಿಗೆ ಪೆಂಡಿಂಗ್ ಹಣ ಮೊದಲು ಬರಲಿದೆ

advertisement

Gruha Lakshmi Yojane: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಕರ್ನಾಟಕದ ನಾಗರಿಕರಿಗೆ(Citizens Of Karnataka) ಸಾಕಷ್ಟು ಪ್ರಯೋಜನಗಳು ಉಂಟಾಗಿದೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಗೃಹಲಕ್ಷ್ಮಿ, ಶಕ್ತಿ ಹಾಗೂ ಅನ್ನಭಾಗ್ಯದಂತಹ ಯೋಜನೆ(Anna Bhagya scheme)ಗಳನ್ನು ಪಡೆದುಕೊಳ್ಳುತ ಸುಗಮವಾಗಿ ಜೀವನ ನಡೆಸುತ್ತಿದ್ದಾರೆ. ಹೀಗೆ ಪ್ರತಿ ತಿಂಗಳು ಜನರಿಗೆ ಬೇಕಾಗುವಂತಹ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನು ಸರ್ಕಾರ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು, ಈಗಾಗಲೇ 11ನೇ ಕಂತಿನ ಹಣವನ್ನು ಎಲ್ಲ ಮಹಿಳೆಯರ ಬ್ಯಾಂಕ್ ಖಾತೆಗೆ(Bank account) ಜಮೆ ಮಾಡಿರುವ ಸರ್ಕಾರ ಮುಂದಿನ ಕಂತಿನ ಹಣವನ್ನು ಮೊದಲು ಈ 12 ಜಿಲ್ಲೆಗಳಿಗೆ ಜಮೆ ಮಾಡಲಿದ್ದಾರೆ.

WhatsApp Join Now
Telegram Join Now

ಒಂದು ಕೋಟಿ 18 ಲಕ್ಷ ಮಹಿಳೆಯರಿಗೆ ₹2000 ಜಮೆ

ಕರ್ನಾಟಕದಾದ್ಯಂತ ಸರ್ಕಾರ ಬಿಡುಗಡೆ ಮಾಡಿರುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲ ಮಹಿಳೆಯರು 11ನೇ ಕಂತಿನ ಗೃಹಲಕ್ಷ್ಮಿ ಯೋಜನೆ(Gruha Lakshmi scheme)ಯ ಎರಡು ಸಾವಿರ ರೂಪಾಯಿ ಹಣವನ್ನು ನೀಡಲಾಗಿದೆ. ಸರ್ಕಾರದಿಂದ ಮಹಿಳೆಯರ ಕರ್ಚಿಗಾಗಿ ದೊರಕುತ್ತಿರುವ ಹಣವನ್ನು ಪಡೆದ ಮಹಿಳೆಯರು ಸ್ವಾವಲಂಬಿಗಳಾಗಿ ತಮಗೆ ಬೇಕಾದ ಪದಾರ್ಥಗಳನ್ನು ಯಾವುದೇ ಹೆಚ್ಚಿನ ಪ್ರಾಥಮಿಕ ಸಮಸ್ಯೆಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ. ಈ ಕಾರಣದಿಂದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರ ಖಾತೆಗೆ 12ನೇ ಕಂತಿನ ಹಣವನ್ನು ಜೂನ್ 30ನೇ ತಾರೀಕು ಎಲ್ಲ ಮಹಿಳೆಯರ ಖಾತೆಗೆ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.Gruha Lakshmi Scheme

ಜೂನ್ ಕೊನೆಯಲ್ಲಿ 12ನೇ ಕಂತಿನ ಹಣ ದೊರಕಲಿದೆ!

advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ ಅವರವರ ಖಾತೆಗೆ ಡಿಬಿಟಿ ಮೂಲಕ ಜೂನ್ ಕೊನೆಯಲ್ಲಿ ಜಮೆ ಮಾಡುವುದಾಗಿ ತಿಳಿಸಿದರು. ಅದರಂತೆ ಯಾವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ₹2000 ತಿಂಗಳಾದರೂ ಜಮಯಾಗುತ್ತಿಲ್ಲವೋ ಅವರು ಕೂಡಲೇ ತಾಂತ್ರಿಕ ಸಮಸ್ಯೆಗಳನ್ನು ಬಗೆ ಹರಿಸಿಕೊಂಡು ಮರು ಅರ್ಜಿ ಸಲ್ಲಿಸಿ ಎಂಬ ಸಲಹೆಯನ್ನು ನೀಡಿದ್ದಾರೆ.

ಮೊದಲು ಈ 12 ಜಿಲ್ಲೆಗಳಿಗೆ ದೊರಕಲಿದೆ ಗೃಹಲಕ್ಷ್ಮಿ ಹಣ!

ಹೀಗೆ ಗೃಹಲಕ್ಷ್ಮಿ ಯೋಜನೆಯ ಹಣವು ಹೊಂದಿಕೆಯಾಗುತ್ತಿದ್ದ ಹಾಗೆ 12 ಕಂತಿನ ಹಣ(12th Installment Amount)ವನ್ನು ಜಮೆ ಮಾಡಲಿರುವ ಭರವಸೆಯನ್ನು ನೀಡಿದ್ದು, ಅದರನ್ವಯ ಮೊದಲಿಗೆ ಬೆಂಗಳೂರು, ಉಡುಪಿ, ಗುಲ್ಬರ್ಗ, ಬಿಜಾಪುರ, ಚಿಕ್ಕೋಡಿ, ಬಾಗಲಕೋಟೆ, ಕೋಲಾರ, ರಾಯಚೂರು, ಬೀದರ್, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ವಾಸಿಸುವಂತಹ ಮಹಿಳೆಯರ ಖಾತೆಗೆ ಮೊದಲು ಹಣವನ್ನು ವರ್ಗಾವಣೆ ಮಾಡುತ್ತಾರೆ. ಆನಂತರ ಇತರೆ ಜಿಲ್ಲೆಯ ಮಹಿಳೆಯರಿಗೆ ಜಮೆ ಮಾಡುವುದಾಗಿ ತಿಳಿಸಿದ್ದಾರೆ.

Gruha Lakshmi Money
Image Source: Oneindia

advertisement

Leave A Reply

Your email address will not be published.