Karnataka Times
Trending Stories, Viral News, Gossips & Everything in Kannada

Supreme Court: ಈ 7 ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗಲ್ಲ! ಮತ್ತೆ ನಿಯಮ ದೇಶಾದ್ಯಂತ ಬದಲು

advertisement

Right To Property: ಕಾನೂನಿನ ನಿಯಮಗಳು ಮನುಷ್ಯರ ಅಗತ್ಯ ಹಾಗೂ ಅವಶ್ಯಕತೆಗೆ ತಕ್ಕಂತೆ ಆಗಾಗ ಬದಲಾಗುತ್ತಿರುತ್ತದೆ ಎಂದು ಹೇಳಬಹುದು. ಹಾಗಾಗಿ ಕಾಯ್ದೆಗಳು ಕೂಡ ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಾ ಇರುತ್ತೇವೆ. ಮಹಿಳೆಯು ಪುರುಷರಷ್ಟೆ ಎಲ್ಲ ಹಕ್ಕನ್ನು ಪಡೆಯಲು ಸರಿಸಮಾನಳು ಎಂಬುದು ತಿಳಿದಿದ್ದರು ಕೆಲವೊಂದು ಸಂದರ್ಭದಲ್ಲಿ ಆಸ್ತಿಯಲ್ಲಿ ಪಾಲು ಪಡೆಯಲು ಮಹಿಳೆಯರಿಗೆ ಹಕ್ಕು ಇರಲಾರದು‌. ಮಹಿಳೆಗೆ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂದು ಕಾನೂನಿನಲ್ಲಿ ಉಲ್ಲೇಖ ಮಾಡಿದರೂ ಕೂಡ ಕೆಲವು ವಿಶೇಷ ಕಾರಣಗಳಿದ್ದ ಸಂದರ್ಭದಲ್ಲಿ ಆಕೆಗೆ ಆಸ್ತಿಪಾಲು ಕೆಳುವ ಹಕ್ಕು ಇಲ್ಲ ಎನ್ನಬಹುದು.

WhatsApp Join Now
Telegram Join Now

ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಎಲ್ಲ ಕ್ಷೇತ್ರದಲ್ಲಿ ಕೂಡ ಪುರುಷರಷ್ಟೆ ಸ್ಥಾನ ಮಾನ ನೀಡಲು ಸಮಾಜ ಮುಂದಾಗುತ್ತಿದೆ. ಆಸ್ತಿ ವಿಚಾರಕ್ಕೆ ಬಂದರೆ 2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ ಮಹಿಳೆಗೆ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ ಹಾಗೆಲ್ಲ ಇದ್ದರೂ ಕೂಡ ಕೆಲವು ಸಂದರ್ಭಗಳಲ್ಲಿ ಮಹಿಳೆ ತನಗೆ ಸಿಗಬೇಕಾದ ಆಸ್ತಿಯಲ್ಲಿ ಪಾಲು ಕೇಳಲು ಅನರ್ಹಳು ಎನ್ನಬಹುದು.  ಈ ಮಾಹಿತಿ ನಿಮಗೆ ಬಹಳ ಅನುಕೂಲವಾಗಿದ್ದು ಪೂರ್ತಿ ಓದಿ.

woman property rights in india

ಯಾವೆಲ್ಲ ಸಂದರ್ಭದಲ್ಲಿ ಆಸ್ತಿ ಹಕ್ಕು ಇಲ್ಲ

ಸ್ವಯಾರ್ಜಿತ ಆಸ್ತಿ ಆಗಿದ್ದರೆ?
ತಂದೆಯ  ಸ್ವಯಾರ್ಜಿತ ಆಸ್ತಿಯಾಗಿದ್ದರ  ಆಸ್ತಿ ಪಾಲು ಮಾಡುವುದು ಬಿಡುವುದು, ಸಂಪೂರ್ಣ ಹಕ್ಕು ನೀಡುವುದು ತಂದೆಯ ನಿರ್ಧಾರ ಆಗಿದೆ.  ಅದರಲ್ಲಿ ಭಾಗ ಕೇಳುವ ಅಧಿಕಾರ ಮಕ್ಕಳಿಗೆ ಖಂಡಿತಾ  ಇರಲಾರದು. ತಂದೆ ಬದುಕಿದ್ದ ಸಂದರ್ಭದಲ್ಲಿ ಅದು ಆತನ ಸ್ವಯಾರ್ಜಿತ ಆಸ್ತಿ ಆಗಿದ್ದರೆ ಆಗ ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಆಸ್ತಿ ಪಾಲು ಕೇಳುವ ಅಧಿಕಾರ ಹೊಂದಿರಲಾರರು. ತಂದೆ ಮರಣ ಹೊಂದಿದ್ದ ಸಂದರ್ಭದಲ್ಲಿ  ತನ್ನ ಸ್ವಯಾರ್ಜಿತ ಆಸ್ತಿಗೆ ವಿಲ್ ಮಾಡಿಟ್ಟರೆ, ಯಾರಿಗಾದರೂ ಮಾರಿದ್ದರೆ, ದಾನವಾಗಿ ನೀಡಿದ್ದರೆ ಅಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಪಡೆಯಲು ಸಾಧ್ಯವಿಲ್ಲ ಎಂದು ಹೇಳಬಹುದು.

advertisement

ಕಾಯ್ದೆ ಬರುವ ಮೊದಲೇ ಆಸ್ತಿ ಹಂಚಿಕೆ ಮಾಡಿದ್ದರೆ
2005ರಂದು ಹಿಂದೂ ಉತ್ತರಾಧಿಕಾರ ಕಾಯ್ದೆ ಬರುವ ಮುನ್ನ ಆಸ್ತಿ ಹಂಚಿಕೆಯಾಗಿದ್ದು ಅದನ್ನು ಬೇರೆ ಅವರು ಅನುಭವಿಸುತ್ತಾ ಇದ್ದರೆ ಅಂತಹ ಭೂಮಿ ಮತ್ತೆ ನೀಡಿ ಎಂದು ಕೇಳುವ ಯಾವುದೇ ಹಕ್ಕು ಇರಲಾರದು ಎಂದು ಹೇಳಬಹುದು. ಆಸ್ತಿ ಬೇಡ ಎಂದು  ಹೇಳಿ ಅನೇಕ ವರ್ಷದ ಬಳಿಕ ಆ ಜಾಗಕ್ಕೆ ಉತ್ತಮ ಬೆಲೆ ಬಂದಿದೆ ಎಂದು  ಆಸ್ತಿ ನೀಡುವಂತೆ ಕೇಳುವ ಹಾಗೆ ಇರಲಾರದು. ಯಾಕೆಂದರೆ ಆ ಒಂದು ಜಾಗದಲ್ಲಿ ಬೇರೆ ನಿಮ್ಮ ಸಹೋದರ ಅನೇಕ ವರ್ಷದಿಂದ ಕೃಷಿ ಇತರ ಕೆಲಸ ಮಾಡಿಕೊಂಡಿದ್ದಾಗ ಅದಕ್ಕೆ ಆಸ್ತಿ ಮರು ಪಡೆಯುವುದು ಸಮಸ್ಯೆ ಆಗಲಿದೆ.

woman property rights in india
Image Source: informalnewz

ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿದ್ದರೆ

ಆಸ್ತಿ ಪಾಲು ಆಗುವ ಸಂದರ್ಭದಲ್ಲಿ ನನಗೆ ಆಸ್ತಿ ಬೇಡ ಹಣ ಪಡೆಯುತ್ತೇವೆ ಎಂದು ಒಪ್ಪಿಗೆಯಿಂದಲೇ ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿದ್ದರೆ ಬಳಿಕ ಆಸ್ತಿ ಪಾಲು ಕೇಳುವ ಅಧಿಕಾರ ಇರಲಾರದು. ಆಸ್ತಿಯಲ್ಲಿ ನಿಮ್ಮ ಸಹಿ ನಕಲು ಮಾಡಿದರೆ ಹಾಗೂ ಬೇಕೆಂದೆ ಪಾಲು ನೀಡದಿದ್ದಾಗ ಪಾಲು ಪಡೆಯಲು ಕಾನೂನಾತ್ಮಕ ಹೋರಾಟ ಮಾಡಬಹುದು. ಸುಳ್ಳು ದಾಖಲೆ ಸೃಷ್ಟಿ ಮಾಡಿ ಆಸ್ತಿ ವಶ ಮಾಡಿದರೂ ಕೂಡ ಆಸ್ತಿ ಪಾಲು ಪಡೆಯಬಹುದು.

ದಾನವಾಗಿ ನೀಡಿದ್ದ ಆಸ್ತಿ
ನಿಮ ಪೂರ್ವಜರು ಒಂದು ಆಸ್ತಿಯನ್ನು ದಾನವಾಗಿ ಯಾರಿಗಾದರು ನೀಡಿದ್ದರೆ ಅದು ದಾನವಾಗಿ ಪಡೆದಿದ್ದಕ್ಕೆ ದಾಖಲೆ ಇದ್ದರೆ ಆಗ ನೀವು ಉಡುಗೊರೆ ಅಥವಾ ದಾನವಾಗಿ ನೀಡಿದ್ದ ಆಸ್ತಿ ಮರು ಪಡೆಯಲು ಅದರಲ್ಲಿ ಮಹಿಳೆಯರಿಗೆ ಹಕ್ಕು ಇರಲಾರದು ಎಂದು ಕೂಡ ಹೇಳಬಹುದು.

advertisement

Leave A Reply

Your email address will not be published.