Karnataka Times
Trending Stories, Viral News, Gossips & Everything in Kannada

Cement and Iron Rods: ಕುಸಿದ ಸಿಮೆಂಟ್ ಹಾಗೂ ಕಬ್ಬಿಣದ ರಾಡುಗಳ ಬೆಲೆ! ಮನೆ ಕಟ್ಟುವವರಿಗೆ ಗುಡ್ ನ್ಯೂಸ್

advertisement

ನಮ್ಮ ಹಿರಿಯರು ಹೇಳಿರು ಹಾಗೆ ಒಂದು ಮನೆ ಕಟ್ಟಿ ನೋಡು ಅಥವಾ ಮದುವೆ ಮಾಡಿ ನೋಡು ಅಂತ. ಅದರ ಅರ್ಥ ಆ ಎರಡು ಕೆಲಸ ಮಾಡುವುದಕ್ಕೆ ಕೂಡ ಕೈ ತುಂಬಾ ಹಣ ಇದ್ರೆ ಮಾತ್ರ ಸಾಧ್ಯ ಇಲ್ಲ ಅಂದ್ರೆ ಕಷ್ಟ ಆಗುತ್ತೆ ಅನ್ನೋದೇ ಅದರ ಅರ್ಥವಾಗಿದೆ. ಅದರಲ್ಲೂ ವಿಶೇಷವಾಗಿ ಆ ಹಾಡು ಬಂದು ಸುಮಾರು ವರ್ಷಗಳೇ ಕಳೆದು ಹೋಗಿವೆ. ಈಗಿನ ಖರ್ಚಿನ ಬಗ್ಗೆ ಕೇಳಿದರೆ ಅವರು ಕೇವಲ ಮದುವೆಗಿಂತ ಹೆಚ್ಚಾಗಿ ಮನೆ ಕಟ್ಟೋದನ್ನೇ ಕಷ್ಟ ಅಂತ ಹೇಳ್ತಾ ಇದ್ರು. ಹೌದು ಮನೆ ಕಟ್ಟುವಂತಹ ವಸ್ತುಗಳ ಬೆಲೆ ಏರಿಕೆಯ ಕಾರಣದಿಂದಾಗಿ ಮನೆ ಕಟ್ಟುವುದು ಕೂಡ ದುಬಾರಿ ಖರ್ಚಾಗಿದೆ.

WhatsApp Join Now
Telegram Join Now

ಪ್ರತಿದಿನ ಒಂದಲ್ಲ ಒಂದು ಕಡೆಯಲ್ಲಿ ನೋಡ್ತಾ ಇದ್ರೆ ಕಟ್ಟಡದ ನಿರ್ಮಾಣ ಆಗ್ತಾನೆ ಇರುತ್ತೆ. ಹೀಗಾಗಿ ಈ ಕೆಲಸದಲ್ಲಿ ಬಳಕೆ ಆಗುವಂತಹ ಪ್ರಮುಖ ವಸ್ತು ಆಗಿರುವ ಸಿಮೆಂಟ್ ಹಾಗೂ ಕಬ್ಬಿಣದ ರಾಡುಗಳ (Cement and Iron Rods) ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಕಂಡು ಬರುತ್ತದೆ. ಹೀಗಾಗಿ ನೀವು ಒಂದು ವೇಳೆ ಮನೆ ಕಟ್ಟಲು ಯೋಜನೆಯ ಮಾಡ್ತಾ ಇದ್ದೀರಾ ಅಂತ ಅಂದ್ರೆ ಅವುಗಳ ಬೆಲೆಯನ್ನು ತಿಳಿದು ಲೆಕ್ಕಾಚಾರ ಮಾಡುವುದು ಉತ್ತಮ ಎಂಬುದು ಕೂಡ ಇಲ್ಲಿ ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರ.

ಸಿಮೆಂಟ್ ಹಾಗೂ ಕಬ್ಬಿಣದ ರಾಡುಗಳ ಬೆಲೆ:

 

advertisement

Image Source: The Economic Times

 

ಇನ್ನು ನೀವು ಇಂದಿನ ದಿನದಲ್ಲಿ ಉತ್ತಮ ಕ್ವಾಲಿಟಿಯ ಸಿಮೆಂಟ್ ಬೆಲೆ (Cement Price) ಬಗ್ಗೆ ಮಾತನಾಡುವುದಾದರೆ ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆ ಇಳಿಕೆಯಾಗಿದೆ ಎಂಬುದಾಗಿ ಕಂಡು ಬಂದಿದೆ. ಕೇವಲ ಸಿಮೆಂಟ್ ಬೆಲೆಯಲ್ಲಿ ಮಾತ್ರವಲ್ಲದೆ ಉತ್ತಮ ಕ್ವಾಲಿಟಿಯ ಕಬ್ಬಿಣದ ರಾಡುಗಳ ಬೆಲೆಯಲ್ಲಿ (Iron Rods) ಕೂಡ ಭಾರತದ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕಂಡು ಬಂದಿದೆ ಎನ್ನುವಂತಹ ಮಾಹಿತಿ ದೊರಕುತ್ತಿದೆ.

 

Image Source: Adobe Stock

 

ಕಬ್ಬಿಣದ ರಾಡುಗಳ ಬೆಲೆ (Iron Rods Price) ಬಗ್ಗೆ ಮಾತನಾಡುವುದಾದರೆ ಪ್ರತಿ ಕ್ವಿಂಟಲ್ ಗೆ 6500 ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಈ ಬೆಲೆ ಆಧಾರದ ಮೇಲೆ ನೀವು ಮನೆಯ ಕನ್ಸ್ಟ್ರಕ್ಷನ್ ಅಥವಾ ಯಾವುದೇ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಮಾಡ್ತಾ ಇದ್ರೆ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡಬಹುದಾಗಿದೆ. ಇನ್ನು ಸಿಮೆಂಟ್ ಬಗ್ಗೆ ಮಾತನಾಡುವುದಾದರೆ ಕಾಂಕ್ರೀಟ್ ಸಿಮೆಂಟ್ ಬೆಲೆ ಪ್ರತಿ ಬ್ಯಾಕ್ ಗೆ 310 ರೂಪಾಯಿ ಬೆಲೆ ಆಗಿದೆ. ಇನ್ನು ಜಿಪ್ಸಂ ಸಿಮೆಂಟ್ (Cement) ಗೆ ಪ್ರತಿ ಚೀಲಕ್ಕೆ 340 ಆಗಿದೆ ಎನ್ನುವುದಾಗಿ ಮಾರುಕಟ್ಟೆಯ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಕಬ್ಬಿಣದ ರಾಡು ಹಾಗೂ ಸಿಮೆಂಟ್ (Cement and Iron Rods) ಬೆಲೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಅಲ್ಲಿನ ಬೇಡಿಕೆ ಹಾಗೂ ಪೂರೈಕೆಗೆ ತಕ್ಕಂತೆ ಬದಲಾವಣೆ ಆಗುವ ಸಾಧ್ಯತೆ ಕೂಡ ಇರುತ್ತದೆ ಹೀಗಾಗಿ ನೀವು ಇದನ್ನ ಮೊದಲಿಗೆ ನಿಮ್ಮ ಡೀಲರ್ ಬಳಿ ಕೇಳಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.

advertisement

Leave A Reply

Your email address will not be published.