Karnataka Times
Trending Stories, Viral News, Gossips & Everything in Kannada

Ram Mandir: ರಾಮ ಮಂದಿರದ ಮುಖ್ಯ ಅರ್ಚಕರಿಗೆ ತಿಂಗಳಿಗೆ ಸಿಗುವ ಸಂಬಳ ಎಷ್ಟು ಗೊತ್ತಾ?

advertisement

500 ವರ್ಷಗಳಿಂದ ಕಾದು ಕುಳಿತಿದ್ದ ಅಯೋಧ್ಯೆ ಶ್ರೀ ರಾಮನ ಭವ್ಯ ಮಂದಿರ ಅಂತೂ ಇಂತೂ ಲೋಕಾರ್ಪಣೆಗೊಂಡಿದೆ. ಸಹಸ್ರಾರು ರಾಮನ ಭಕ್ತರು ಜನವರಿ 22, 2024 ರಂದು ಈ ಭವ್ಯ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಊಹಿಸಲು ಸಾಧ್ಯವಾಗದಷ್ಟು ಅದ್ದೂರಿಯಾಗಿ ಶ್ರೀರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಿದ ಹಲವು ಪ್ರಭುದ್ಧ ವಿದ್ವಾಂಸರು, ಮಹಾತ್ಮರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ರಾಮ ಮಂದಿರ (Ram Mandir) ದ ಉದ್ಘಾಟನೆಯನ್ನು ಸಾಂಗವಾಗಿ ನೆರವೇರಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi) ಅವರು ಲಕ್ಷಾಂತರ ರಾಮ ಭಕ್ತರ ಕನಸನ್ನು ಈಡೇರಿಸಿದ್ದಾರೆ.

ರಾಮಮಂದಿರ (Ram Mandir) ಅಂದ ತಕ್ಷಣ ಅಲ್ಲಿನ ರಾಮನನ್ನು ನಿತ್ಯವೂ ಪೂಜೆ ಮಾಡಲು ಪ್ರಾರ್ಥಿಸಲು ಅರ್ಚಕರು ಬೇಕೇ ಬೇಕು. ಹಾಗಾದರೆ ಈ ಅರ್ಚಕರನ್ನ ಹೇಗೆ ಆಯ್ಕೆ ಮಾಡಲಾಗಿದೆ ಅವರಿಗೆ ಕೊಡಲಾಗುವ ಸಂಬಳ ಎಷ್ಟು ಎನ್ನುವುದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ರಾಮಮಂದಿರ ಮುಖ್ಯ ಅರ್ಚಕರು ಯಾರು:

 

advertisement

 

ಶ್ರೀರಾಮ ಮಂದಿರ (Ram Mandir) ದಲ್ಲಿ ಮುಖ್ಯ ಅರ್ಚಕರಾಗಿ 83 ವರ್ಷದ ಆಚಾರ್ಯ ಸತ್ಯೇಂದ್ರ ದಾಸ್ ಜಿ 1992 ರಲ್ಲಿ ನೇಮಕಗೊಂಡಿದ್ದರು. ಕಳೆದ 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಅವರಿಗೆ ಆರಂಭದಲ್ಲಿ ಕೊಡುತ್ತಿದ್ದದ್ದು ಕೇವಲ 100 ರೂಪಾಯಿ ಸಂಬಳ. ಅದನ್ನ ನಂತರ 900 ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು. ಬಳಿಕ ಸಾವಿರ ರೂಪಾಯಿ ಹಾಗೆ 12,000 ನಂತರ ಹದಿನೈದು ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಲಾಯಿತು. ಅಕ್ಟೋಬರ್ 2023ರಲ್ಲಿ 25,000ಗಳಿದ್ದ ಅರ್ಚಕರ ಸಂಬಳ ಈಗ 32,900ಗಳಿಗೆ ಹೆಚ್ಚಿಸಲಾಗಿದೆ.

ಈ ಮುಖ್ಯ ಅರ್ಚಕರನ್ನು ಬಿಟ್ಟು ಇನ್ನೂ ಸಾಕಷ್ಟು ಅರ್ಚಕರು ಶ್ರೀರಾಮ ಮಂದಿರದ ಎಲ್ಲಾ ಪೂಜಾ ವಿಧಿ ವಿಧಾನಗಳನ್ನು ನೋಡಿಕೊಳ್ಳುತ್ತಾರೆ. ಹತ್ತಾರು ಅರ್ಚಕರು ನಿತ್ಯವೂ ಶ್ರೀರಾಮನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಇಂತಿಷ್ಟು ಎಂದು ಸಂಬಳ ನೀಡಲಾಗುತ್ತಿದ್ದು, ಎಲ್ಲಾ ಅರ್ಚಕರನ್ನು ಬಹಳ ಮುತ್ತು ಅರ್ಜಿಯಿಂದ ಆಯ್ಕೆ ಮಾಡಲಾಗಿದೆ. ಸರಿಯಾಗಿ ಮಂತ್ರ ಬರುವಂತಹ, ಪೂಜಾ ವಿಧಿ ವಿಧಾನಗಳನ್ನು ಅರಿತುಕೊಂಡಿರುವಂತಹ ಹಾಗೂ ಉತ್ತಮ ಸಂಸ್ಕೃತ ವಿದ್ಯಾಭ್ಯಾಸ ಮಾಡಿರುವಂತವರನ್ನೇ ಅರ್ಚ

advertisement

Leave A Reply

Your email address will not be published.