Karnataka Times
Trending Stories, Viral News, Gossips & Everything in Kannada

T20: ಜಡೇಜಾ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಈ ಖ್ಯಾತ ಆಲ್‌ರೌಂಡರ್! ಕಣ್ಣೀರಿಟ್ಟ ಅಭಿಮಾನಿಗಳು

advertisement

International Cricket: ಭಾರತ ಈ ಬಾರಿ ವೆಸ್ಟ್ ಇಂಡೀಸ್ನ ಬಾರ್ಬಡೋಸ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬರೋಬರಿ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆಲ್ಲುವಂತಹ ಸಾಧನೆಯನ್ನು ಮಾಡಿದೆ. ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ 2007ರಲ್ಲಿ ಮೊದಲ ಟಿ ಟ್ವೆಂಟಿ ವಿಶ್ವಕಪ್ ಅನ್ನು ಯುವ ತಂಡದ ಜೊತೆಗೆ ಗೆದ್ದ ಸಾಧನೆಯನ್ನು ಮಾಡಿತ್ತು. ಅದಾದ ನಂತರ ಸುಧೀರ್ಘ 17 ವರ್ಷಗಳ ಕಾಯುವಿಕೆಯ ನಂತರ ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಈಗ ಟಿ 20 ವಿಶ್ವಕಪ್(T20 World Cup)  ಗೆದ್ದಿರೋದು ಇತಿಹಾಸ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

ಇದು ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿರುವಂತಹ ರಾಹುಲ್ ದ್ರಾವಿಡ್ ರವರಿಗೆ ಕೊನೆಯ ಪಂದ್ಯ ಆಗಿತ್ತು ಅನ್ನೋದು ಕೂಡ ಸಾಕಷ್ಟು ಎಮೋಷನಲ್ ಆಗಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅದಕ್ಕಿಂತಲೂ  ಸರ್ಪ್ರೈಸ್ ಅಂದ್ರೆ ಭಾರತ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ(Rohith Sharma)  ಅವರು ಹಾಗೂ ಭಾರತದ ಟಿ20 ಇತಿಹಾಸದ ಅತ್ಯಂತ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವಂತಹ ವಿರಾಟ್ ಕೊಹ್ಲಿ ಇಬ್ಬರೂ ಕೂಡ ತಮ್ಮ ಅಂತರಾಷ್ಟ್ರೀಯ ಟಿ 20 ಫಾರ್ಮ್ಯಾಟ್ ಗೆ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತಾರೆ.

ಯಾವೊಬ್ಬ ಕ್ರಿಕೆಟ್ ಅಭಿಮಾನಿ ಕೂಡ ಈ ರೀತಿ ಆಗುತ್ತೆ ಅನ್ನೋದಾಗಿ ಕನಸು ಮನಸ್ಸಿನಲ್ಲಿ ಕೂಡ ಊಹಿಸಿರಲಿಲ್ಲ ಅಂತ ಹೇಳಬಹುದಾಗಿದೆ. ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಇಬ್ರು ಕೂಡ ಇನ್ಮುಂದೆ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಟಿ ಟ್ವೆಂಟಿ ಆಡುವುದಿಲ್ಲ ಅನ್ನೋದನ್ನ ಊಹಿಸಿಕೊಳ್ಳುವುದಕ್ಕೆ ಕೂಡ ಸಾಧ್ಯವಾಗುತ್ತಿಲ್ಲ ಅನ್ನೋದಾಗಿ ಟಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

Image Source: www.espncricinfo.com

advertisement

ಈ ವಿಚಾರವನ್ನೇ ತಡೆದುಕೊಳ್ಳಲು ಸಾಧ್ಯವಾಗ್ತಿರ್ಲಿಲ್ಲ ಅದರ ನಡುವೆ ಈಗ ರವೀಂದ್ರ ಜಡೇಜಾ ಅವರು ಕೂಡ ಟಿ ಟ್ವೆಂಟಿ ಫಾರ್ಮ್ಯಾಟ್ಗೆ ತಮ್ಮ ವಿದಾಯವನ್ನು ಘೋಷಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದರಿಂದ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಇನ್ನಷ್ಟು ದುಃಖ ಪಡುವಂತೆ ಆಗಿದೆ. ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಉತ್ತಮ ಬ್ಯಾಟ್ಸ್ಮನ್ ಹಾಗೂ ಬೌಲರ್ ರೂಪದಲ್ಲಿ ಮಾತ್ರವಲ್ಲದೆ ಎಲ್ಲದಕ್ಕಿಂತ ಉತ್ತಮವಾದ ಫೀಲ್ಡರ್ ರೂಪದಲ್ಲಿ ಕೂಡ ರವೀಂದ್ರ ಜಡೆಜಾ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮದೇ ಆಗಿರುವಂತಹ ಕೊಡುಗೆ ನೀಡಿದ್ದಾರೆ. ಈಗ ಇದರ ಬೆನ್ನಲ್ಲೆ ಮತ್ತೊಬ್ಬ ಕ್ರಿಕೆಟಿಗ ಕೂಡ ಮೂರು ಫಾರ್ಮೆಟ್ ಗಳಿಗೆ ವಿಧಾಯವನ್ನು ಘೋಷಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಮೂರು ಫಾರ್ಮಾಟ್ ಗಳಿಗೆ ವಿಧಾಯವನ್ನು ಘೋಷಿಸಿದ ಈ ಆಟಗಾರ: ಅಭಿಮಾನಿಗಳು ದುಃಖದಲ್ಲಿ

ಹೌದು ಮಾತಾಡ್ತಿರೋದು ಭಾರತೀಯ ಕ್ರಿಕೆಟಿಗನ ಬಗ್ಗೆ ಅಲ್ಲ ಬದಲಾಗಿ ಬಾಂಗ್ಲಾದೇಶದ ಕ್ರಿಕೆಟಿಗನ ಬಗ್ಗೆ. ಮೊಹಮ್ಮದ್ ಮೊಹಮ್ಮದುಲ್ಲಾ ರಿಯಾದ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಭಾವಪೂರ್ಣವಾದ ವಿಧಾಯವನ್ನ ಘೋಷಿಸಿದ್ದಾರೆ. ಬಾಂಗ್ಲಾದೇಶದ ಪರವಾಗಿ 50 ಟೆಸ್ಟ್ ಪಂದ್ಯಗಳನ್ನು ಹಾಗೂ 232 ಏಕದಿನ ಪಂದ್ಯಗಳನ್ನು ಹಾಗೂ 128 t20 ಪಂದ್ಯಗಳನ್ನು ಇವರು ಆಡಿದ್ದಾರೆ. 2007 ರಲ್ಲಿ ಕೀನ್ಯಾ ದೇಶದ ಪರ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ನ ಮೊದಲ ಪಂದ್ಯವನ್ನ ಆಡುವ ಮೂಲಕ ಪಾದಾರ್ಪಣೆ ಮಾಡಿದರು. ಬಾಂಗ್ಲಾದೇಶದ ಅತ್ಯುತ್ತಮ ಆಲ್ ರೌಂಡಾಗಿ ಕೂಡ ಪ್ರದರ್ಶನ ನೀಡಿರುವ ಈಗ ವಿದಾಯವನ್ನು ಘೋಷಿಸಿರೋದು ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳಿಗೆ ಭರಿಸಲಾರದ ದುಃಖವನ್ನು ನೀಡಿದೆ.Mahmudullah retires from international cricket

 

advertisement

Leave A Reply

Your email address will not be published.