Karnataka Times
Trending Stories, Viral News, Gossips & Everything in Kannada

Sania Mirza: ಮೊಹಮ್ಮದ್ ಶಮಿ ಅಲ್ಲ ಸಾನಿಯಾ ಮಿರ್ಜಾ ಮದುವೆ ಆಗುತ್ತಿರುವುದು ಈ ಭಾರತೀಯ ಕ್ರಿಕೆಟಿಗನನ್ನು!

advertisement

ಒಂದು ಕಡೆ ಟಿ ಟ್ವೆಂಟಿ ವಿಶ್ವಕಪ್ (T20 World Cup) ಅನ್ನು ಭಾರತ ದೇಶ 17 ವರ್ಷಗಳ ನಂತರ ಗೆದ್ದಿದೆ ಎನ್ನುವಂತಹ ಖುಷಿ ಆಕಾಶವನ್ನು ಮೀರಿ ಮೇಲೆ ಹೋಗ್ತಾ ಇದ್ರೆ ಇನ್ನೊಂದು ಕಡೆಯಲ್ಲಿ ನಮ್ಮ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಸುತ್ತ ಎರಡನೇ ಮದುವೆಯ ಸುದ್ದಿಗಳು ಹೆಚ್ಚಾಗಿ ಕೇಳಿ ಬರ್ತಿದೆ. ಹೌದು ನಿಮಗೆ ನಾವು ಹೇಳೋದಕ್ಕೆ ಹೊರಟಿರೋದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿರುವಂತಹ ಶಮ್ಮಿ ಹಾಗೂ ಸಾನಿಯಾ ಮಿರ್ಜಾ ಅವರ ಮದುವೆಯ ಸುದ್ದಿ ಬಗ್ಗೆ. ಈ ವಿಚಾರದ ಬಗ್ಗೆ ಶಮಿ ಆಗಲಿ ಅಥವಾ ಸಾನಿಯಾ ಮಿರ್ಜಾ (Sania Mirza) ಆಗ್ಲಿ ಎಲ್ಲೂ ಕೂಡ ಮಾತನಾಡಿಲ್ಲ ಹೀಗಿದ್ದರೂ ಕೂಡ ಇಬ್ಬರು ಮದುವೆಯಾಗಲಿದ್ದಾರೆ ಎನ್ನುವಂತಹ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ.

WhatsApp Join Now
Telegram Join Now

ಸಾನಿಯಾ ಮಿರ್ಜಾ ಮದುವೆ ಆಗುತ್ತಿರುವುದು ಶಮಿ ಅವರನ್ನಲ್ಲ ಬದಲಾಗಿ ಈ ಭಾರತೀಯ ಕ್ರಿಕೆಟಿಗ ನನ್ನ:

 

Image Source: The Siasat Daily

 

ಭಾರತ ದೇಶದ ಪರವಾಗಿ ಟೆನಿಸ್ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿರುವಂತಹ ಆಟಗಾರ್ತಿ ಆಗಿರುವಂತಹ ಸಾನಿಯಾ ಮಿರ್ಜಾ (Sania Mirza) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಟೆನ್ನಿಸ್ ಆಟದಲಿ ತಮ್ಮದೇ ಆಗಿರುವಂತಹ ದೊಡ್ಡ ಮಟ್ಟದ ಇತಿಹಾಸವನ್ನು ಹಾಗೂ ಸಾಧನೆಯ ಪುಟಗಳನ್ನ ಸಾನಿಯಾ ಮಿರ್ಜಾ (Sania Mirza) ಹೊಂದಿದ್ದಾರೆ ಹಾಗೂ ಭಾರತ ದೇಶದ ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಸಾನಿಯಾ ಮಿರ್ಜಾ ಅವರ ರೀತಿಯಲ್ಲಿ ಆಗಬೇಕು ಅನ್ನೋದಾಗಿ ಕೂಡ ಕನಸು ಕಂಡಿರುತ್ತಾರೆ.

advertisement

ಈಗಾಗಲೇ ಟೆನಿಸ್ಗೆ ನಿವೃತ್ತಿಯನ್ನು ಹೇಳಿರುವಂತಹ ಸಾನಿಯಾ ಮಿರ್ಜಾ (Sania Mirza) ರವರು ತಮ್ಮ ಮೊದಲನೇ ಮದುವೆ ಶೋಯಬ್ ಮಲ್ಲಿಕ್ ಅವರಿಂದ ಕೂಡ ವಿವಾಹ ವಿಚ್ಛೇದನವನ್ನು ಕೂಡ ಪಡೆದುಕೊಂಡಿದ್ದಾರೆ. ಇಲ್ಲಿಂದಲೇ ಪ್ರಾರಂಭವಾಗಿ ಸಾನಿಯಾ ಮಿರ್ಜಾ ಅವರ ಎರಡನೇ ಮದುವೆ ಯಾರ ಜೊತೆಗೆ ಆಗಬಹುದು ಎನ್ನುವಂತಹ ಗೆಸ್ಸಿಂಗ್ ಗೇಮ್ ಗಳು ಪ್ರಾರಂಭವಾಗಿದ್ದವು.

ಇನ್ನು ಇದೇ ಸಂದರ್ಭದಲ್ಲಿ ತಮ್ಮ ಮೊದಲನೇ ಪತ್ನಿಯಿಂದ ಶಮಿಯವರು ಕೂಡ ದೂರ ಇರುವ ಕಾರಣದಿಂದಾಗಿ ಅವರು ಕೂಡ ಎರಡನೇ ಮದುವೆ ಆಗಬಹುದು ಎನ್ನುವಂತಹ ಮಾತನ್ನು ಆಡಲಾಗುತ್ತಿತ್ತು ಹಾಗೂ ಇದೇ ಸಂದರ್ಭದಲ್ಲಿ ಅವರ ಹೆಸರು ಸಾನಿಯಾ ಮಿರ್ಜಾ (Sania Mirza) ಅವರ ಜೊತೆಗೆ ತಳುಕು ಹಾಕಿಕೊಂಡಿತ್ತು. ಆದರೆ ಇದು ಈಗ ಸತ್ಯಕ್ಕೆ ದೂರವಾಗಿರುವಂತಹ ಮಾತು ಎಂಬುದಾಗಿ ಕೇಳಿ ಬರ್ತಿದೆ.

ಆದರೆ ಸಾನಿಯಾ ಮಿರ್ಜಾ (Sania Mirza) ಅವರು ಮತ್ತೊಬ್ಬ ಭಾರತೀಯ ಕ್ರಿಕೆಟಿಗ ಆಗಿರುವಂತಹ ಶಿಖರ ಧವನ್ (Shikhar Dhawan) ಅವರನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ದಿಕ್ಕಿನಲ್ಲಿ ನೋಡುವುದಾದರೆ ಶಿಖರ ಧವನ್ ಕೂಡ ತಮ್ಮ ಮೊದಲ ಪತ್ನಿಯಾಗಿರುವಂತಹ ಆಯೇಷ ಮುಖರ್ಜಿ ಅವರ ಜೊತೆಗೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಈಗಾಗಲೇ ತುಂಬಾ ಸಮಯ ಮುಗಿದು ಹೋಗಿದೆ.

 

Image Source: The Hindu

 

ಕೆಲವೊಂದು ಸುದ್ದಿಗಳ ಪ್ರಕಾರ ಇಬ್ರೂ ಕೂಡ ಡೇಟಿಂಗ್ ನಡೆಸುತ್ತಾ ಇದ್ದು ಅತಿ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ ಎನ್ನುವಂತಹ ಸುದ್ದಿಗಳು ಕೂಡ ಕೇಳಿ ಬರ್ತಾ ಇದೆ. ಈ ಲೆಕ್ಕಾಚಾರದಲ್ಲಿ ನೋಡೋದಾದರೆ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಸಂಪೂರ್ಣವಾಗಿ ಪಡೆದುಕೊಂಡಿರುವುದರಿಂದಾಗಿ ಮದುವೆ ಆಗೋದಕ್ಕೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಅನ್ನುವಂತಹ ಲೆಕ್ಕಾಚಾರದಲ್ಲಿ ಈಗ ಈ ಸುದ್ದಿಗೆ ಹೆಚ್ಚಿನ ಮೌಲ್ಯ ಸಿಕ್ತಾ ಇದೆ ಅಂತ ಹೇಳಬಹುದು.

advertisement

Leave A Reply

Your email address will not be published.