Karnataka Times
Trending Stories, Viral News, Gossips & Everything in Kannada

Cricket World Cup:1983 ರಲ್ಲಿ ವಿಶ್ವಕಪ್ ಗೆದ್ದಿರುವಂತಹ ಭಾರತೀಯ ಕ್ರಿಕೆಟ್ ತಂಡಕ್ಕೆ ಎಷ್ಟು ಹಣ ಸಿಕ್ಕಿತ್ತು ಗೊತ್ತಾ?

advertisement

1983 Cricket World Cup: ಭಾರತೀಯ ಕ್ರಿಕೆಟ್ ತಂಡದ ಇತಿಹಾಸ ನಿಜಕ್ಕೂ ಕೂಡ ಪ್ರಾರಂಭವಾಗುವುದು 1983 ರಲ್ಲಿ ಇಂಗ್ಲೆಂಡ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಕಪಿಲ್ ದೇವ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗಿನಿಂದ.

WhatsApp Join Now
Telegram Join Now

ಆ ತಂಡ ಹಂದಿನ ದಿನಗಳಲ್ಲಿ ಒಂದು ಚಿಕ್ಕ ತಂಡವನ್ನು ಸೋಲಿಸುವುದು ಕೂಡ ಅಸಾಧ್ಯವೇ ಸರಿ ಎಂದು ಕರೆಸಿಕೊಳ್ಳುತ್ತದೆ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಬೀಗಿರೋದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ ಎಂದು ಹೇಳಬಹುದಾಗಿದೆ. ಅಲ್ಲಿಂದಲೇ ಭಾರತದ ಪ್ರತಿಯೊಂದು ಮನೆಗಳಲ್ಲಿ ಕೂಡ ತಾನು ಒಬ್ಬ ಕ್ರಿಕೆಟರ್ ಆಗಬೇಕು ಅನ್ನೋದಾಗಿ ಮಕ್ಕಳಲ್ಲಿ ಆಸೆ ಮೂಡೋವುದಕ್ಕೆ ಪ್ರಾರಂಭವಾಗಿದ್ದು.

1983 ರಲ್ಲಿ ವಿಶ್ವಕಪ್ ಗೆದ್ದ ಕ್ರಿಕೆಟ್ ತಂಡಕ್ಕೆ ಎಷ್ಟು ಸಿಕ್ತಾ ಇತ್ತು ಗೊತ್ತಾ?

ಅಂದಿನ ಕಾಲದಲ್ಲಿ ಭಾರತೀಯ ಕ್ರಿಕೆಟ್ ಸಂಸ್ಥೆ ಹಾಗೂ ಭಾರತೀಯ ಕ್ರಿಕೆಟ್ ಅಷ್ಟೊಂದು ಶ್ರೀಮಂತವಾಗಿರಲಿಲ್ಲ ಹೀಗಾಗಿ ನಿಜಕ್ಕೂ ಕೂಡ ಅಂದಿನ ಕ್ರಿಕೆಟಿಗರ ಸಂಭಾವನೆ ಅತ್ಯಂತ ಶೋಚನೀಯವಾಗಿತ್ತು ಎಂದು ಹೇಳಬಹುದಾಗಿದೆ. ಅಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟಿಗರಿಗೆ 200 ರೂಪಾಯಿಗಳ ಅಲೋವೆನ್ಸ್ ಹಾಗೂ 1500 ರೂಪಾಯಿಗಳನ್ನು ಒಂದು ಮ್ಯಾಚ್ ಆಡೋದಕ್ಕಾಗಿ ಆಟಗಾರರಿಗೆ ನೀಡಲಾಗಿತ್ತು ಹಾಗೂ ತಂಡದ ನಾಯಕ ಆಗಿರುವಂತಹ ಕಪಿಲ್ ದೇವ್ ಅವರಿಗೂ ಕೂಡ ಒಂದು ಮ್ಯಾಚ್ ಆಡೋದಕ್ಕೆ ಕ್ರಿಕೆಟ್ ಸಂಸ್ಥೆ ಇದ್ದಿದ್ದು 1500. ಇಂದಿನ ಆಟಗಾರರಿಗೆ ಒಂದು ಏಕದಿನ ಪಂದ್ಯವನ್ನು ಆಡೋದಕ್ಕಾಗಿ ಬರೋಬ್ಬರಿ 6 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ.

advertisement

T20 CUPS

ಇನ್ನು ಅಂದಿನ ದಿನಗಳಲ್ಲಿ ವಿಶ್ವಕಪ್ ಗೆದ್ದಿರುವಂತಹ ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಬಹುಮಾನದ ರೀತಿಯಲ್ಲಿ ನೀಡುವುದಕ್ಕೆ ಕೂಡ ಬಿಸಿಸಿಐ ಬಳಿ ಹಣ ಇರ್ಲಿಲ್ಲ. ಆ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ರವರು ತಮ್ಮ ಹಾಡಿನ ಕಾರ್ಯಕ್ರಮದ ಮೂಲಕ ಒಟ್ಟಾದ 20 ಲಕ್ಷ ರೂಪಾಯಿ ಹಣವನ್ನು ಆಟಗಾರರಿಗೆ ತಲಾ ಒಂದು ಲಕ್ಷ ರೂಪಾಯಿಗಳ ರೀತಿಯಲ್ಲಿ ಹಂಚಿಕೆ ಮಾಡುವುದಕ್ಕೆ ಸಹಾಯ ಮಾಡುತ್ತಾರೆ ಹಾಗೂ ಈ ಹಾಡಿನ ಕಾರ್ಯಕ್ರಮಕ್ಕಾಗಿ ಲತಾ ಮಂಗೇಶ್ಕರ್ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಳ್ಳುವುದಿಲ್ಲ. ಇವತ್ತಿಗೂ ಕೂಡ ಅವರ ಹೆಸರಿನಲ್ಲಿ ಪ್ರತಿಯೊಂದು ಪಂದ್ಯಗಳಲ್ಲಿ ಪ್ರತಿಯೊಂದು ಸ್ಟೇಡಿಯಂ ನಲ್ಲಿ ಕೂಡ ಒಂದು ಸೀಟ್ ಅನ್ನು ಮೀಸಲಿರಿಸಲಾಗುತ್ತದೆ.

ಇಂದಿನ ಆಟಗಾರರಿಗೆ ಬೇರೆ ಬೇರೆ ಕ್ಯಾಟಗರಿಯಲ್ಲಿ ವಿಂಗಡಿಸಿ ಹಣವನ್ನು ನೀಡಲಾಗುತ್ತದೆ. ಸೀ ಗ್ರೇಡ್ ನಲ್ಲಿ ಆಡುವಂತಹ ಆಟಗಾರರಿಗೆ ವಾರ್ಷಿಕ ಒಂದು ಕೋಟಿ ರೂಪಾಯಿ ನೀಡಲಾಗುತ್ತದೆ. ಬಿ ಗ್ರೇಡ್ ನಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ ವಾರ್ಷಿಕ 3 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. ಎ ಗ್ರೇಡ್ ನಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ 5 ಕೋಟಿ ಹಾಗೂ ಎ ಪ್ಲಸ್ ಗ್ರೇಡ್ನಲ್ಲಿ ಕಾಣಿಸಿಕೊಳ್ಳುವಂತಹ ಆಟಗಾರರಿಗೆ ವಾರ್ಷಿಕವಾಗಿ ಏಳು ಕೋಟಿ ಹಣವನ್ನು ಬಿಸಿಸಿಐ ನೀಡುತ್ತದೆ.T20 CUP 1983

ಇದರಲ್ಲಿ ನಾವು ನೋಡಬಹುದಾಗಿದೆ ನಮ್ಮ ಕ್ರಿಕೆಟ್ ಸಂಸ್ಥೆ ಎಷ್ಟು ಶ್ರೀಮಂತವಾಗಿದೆ ಎನ್ನುವುದನ್ನು. ಇನ್ನು ಈ ಬಾರಿ ವಿಶ್ವಕಪ್ ಗೆದ್ದಿರುವಂತಹ ಆಟಗಾರರಿಗೆ ಬಿಸಿಸಿಐ ಒಟ್ಟಾರೆ 125 ಕೋಟಿ ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿರುವುದು ಮಾತ್ರವಲ್ಲದೆ ಐಸಿಸಿನಿಂದ ಕೂಡ ಇಪ್ಪತ್ತು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣ ಸಿಗುತ್ತಿದೆ.

advertisement

Leave A Reply

Your email address will not be published.