Karnataka Times
Trending Stories, Viral News, Gossips & Everything in Kannada

T20 World Cup 2026: ರೋಹಿತ್, ಬುಮ್ರ, ಕೊಹ್ಲಿ ಪಾಂಡ್ಯ, ಅಲ್ಲ ಭಾರತ ಗೆಲ್ಲಲು ಕಾರಣ ಈ ಕ್ರಿಕೆಟಿಗ!

advertisement

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ (T20 World Cup) ಅನ್ನು ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ನಲ್ಲಿ‌ ಗೆದ್ದು ಬೀಗಿದೆ. ಕಳೆದ 17 ವರ್ಷಗಳಿಂದಲೂ ಕೂಡ ಟಿ20 ವಿಶ್ವಕಪ್ (T20 World Cup) ಗೆಲ್ಲುವಂತಹ ಕನಸನ್ನು ಕೊನೆಗೂ ಕೂಡ ಟೀಮ್ ಇಂಡಿಯಾ ನಿಜ ಮಾಡಿದೆ. ಕಳೆದ ಬಾರಿ ನಿಮಗೆಲ್ಲರಿಗೂ ತಿಳಿದಿರಬಹುದು 2023ರಲ್ಲಿ ಭಾರತದಲ್ಲಿ ವಿಶ್ವಕಪ್ ನಡೆದಾಗ ಏಕದಿನ ವಿಶ್ವ ಕಪ್ ಟ್ರೋಫಿಯನ್ನು ಗೆಲ್ಲುವಂತಹ ಅವಕಾಶ ಇದ್ದರೂ ಕೂಡ ಭಾರತೀಯ ಕ್ರಿಕೆಟ್ ತಂಡ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಕೊನೆಗೂ ಈಗ ವಿದೇಶ ನೆಲದಲ್ಲಿ ಈ ಸಾಧನೆಯನ್ನು ಮಾಡಿರುವಂತಹ ಭಾರತೀಯ ಕ್ರಿಕೆಟ್ ತಂಡ ಬಿಲಿಯನ್ ಭಾರತೀಯರ ಮನಸ್ಸನ್ನು ಗೆಲ್ಲುವಂತಹ ಕೆಲಸವನ್ನು ಮಾಡಿದೆ.

WhatsApp Join Now
Telegram Join Now

ಫೈನಲ್ ಪಂದ್ಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೌತ್ ಆಫ್ರಿಕಾ (South Africa) ತಂಡದ ವಿರುದ್ಧ ಸೋಲುವ ಪಂದ್ಯವನ್ನ ಭಾರತ ಗೆಲ್ಲುವುದಕ್ಕೆ ಸಾಕಷ್ಟು ಕಾರಣಗಳಿವೆ ಎಂದು ಹೇಳಬಹುದಾಗಿದೆ. ಮೊದಲನೇದಾಗಿ ಆರಂಭಿಕವಾಗಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿರುವ ವಿರಾಟ್ ಕೊಹ್ಲಿ (Virat Kohli). ಅದಾದ ನಂತರ ಇಡೀ ಟೂರ್ನಮೆಂಟ್ ಉದ್ದಕ್ಕೂ ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿರುವಂತಹ ನಾಯಕ ರೋಹಿತ್ ಶರ್ಮ. ಹಾರ್ದಿಕ್ ಪಾಂಡ್ಯ ತಮ್ಮ ಆಲ್ರೌಂಡರ್ ಪ್ರದರ್ಶನದಿಂದ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುವುದಕ್ಕೆ ಪ್ರಮುಖ ಕಾರಣವಾಗಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

 

Image Credit: News9live

 

ಇನ್ನು ಟೂರ್ನಮೆಂಟ್ ಉದ್ದಕ್ಕೂ ಬುಮ್ರಾ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಕ್ರಿಕೆಟ್ ಅಭಿಮಾನಿಗಳು ಭಾರತ ವಿಶ್ವ ಕಪ್ ಗೆಲ್ಲೋದಕ್ಕೆ ಇವ್ರ್ಯಾರು ಅಲ್ಲ ಆ ಒಬ್ಬ ಕ್ರಿಕೆಟಿಗ ಮಾತ್ರ ಕಾರಣ ಎಂಬುದಾಗಿ ಹೇಳೋದಕ್ಕೆ ಪ್ರಾರಂಭ ಮಾಡಿದ್ದಾರೆ.

ಆದರೆ ಮಜವಾದ ವಿಚಾರ ಏನಂದರೆ ಈ ಆಟಗಾರ ಇಡೀ ಟೂರ್ನಮೆಂಟ್ ನಲ್ಲಿ ಒಮ್ಮೆ ಕೂಡ ತಂಡದ ಪರವಾಗಿ ಆಡಿಲ್ಲ ಅನ್ನೋದು. ಒಬ್ಬ ಬ್ಯಾಟ್ಸ್ಮನ್ ಆಗಿ ಬ್ಯಾಟಿಂಗ್ ಕೂಡ ಮಾಡಿದರೆ ತಂಡದ ಗೆಲುವಿಗೆ ಕಾರಣವಾಗಿದ್ದಾರೆ ಅನ್ನೋದಕ್ಕೆ ನಿಜವಾದ ಕಾರಣ ಏನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

advertisement

ಸಂಜು ಸ್ಯಾಂಸನ್ ವಿಶ್ವ ಕಪ್ ಗೆಲ್ಲೋದಕ್ಕೆ ಕಾರಣವಂತೆ:

 

Image Credit: Onmanorama

 

ಇದುವರೆಗೂ ಭಾರತ ಗೆದ್ದಿರುವಂತಹ ವಿಶ್ವಕಪ್ ಟೂರ್ನಮೆಂಟ್ ಗಳಲ್ಲಿ ನೀವು ತಂಡವನ್ನು ಸರಿಯಾಗಿ ಗಮನಿಸಿದರೆ ಪ್ರತಿಬಾರಿ ಕೂಡ ಕೇರಳದ ಆಟಗಾರರು ಕಂಡು ಬರುತ್ತಾರೆ.

1983 ರಲ್ಲಿ ಕಪ್ ಗೆದ್ದಾಗ ಸುನಿಲ್ ವಲ್ಸನ್ ರವರು ಕೇರಳದ ಆಟಗಾರನಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಇದ್ದರು ಹಾಗಾಗಿ ಭಾರತೀಯ ಕ್ರಿಕೆಟ್ ತಂಡ ಗೆಲ್ತು. ಅದೇ ರೀತಿಯಲ್ಲಿ 2007ರ ಟಿ20 ವಿಶ್ವಕಪ್ ನಲ್ಲಿ ಹಾಗೂ 2011 ಏಕದಿನ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೇರಳ ಮೂಲದ ಆಟಗಾರ ಶ್ರೀಶಾಂತ್ ಇದ್ದರು ಹೀಗಾಗಿ ತಂಡ ಗೆಲುವು ಕಂಡಿತು.

ಇದೇ ರೀತಿಯಲ್ಲಿ ಈ ಬಾರಿ ವಿಶ್ವಕಪ್ (T20 World Cup 2026) ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡದೆ ಇದ್ದರೂ ಕೂಡ ತಂಡದಲ್ಲಿ ಮಾತ್ರ ಸಂಜು ಸ್ಯಾಮ್ಸನ್ (Sanju Samson) ರವರ ಹೆಸರು ಇತ್ತು ಹಾಗೂ ಇದೇ ಈಗ ಗೆಲುವಿಗೆ ಕಾರಣವಾಗಿದೆ ಹೀಗಾಗಿ ಪ್ರತಿ ವರ್ಷ ವಿಶ್ವಕಪ್ ಗೆ ಹೋಗುವಾಗ ಕೇರಳ ಮೂಲದ ಆಟಗಾರರನ್ನು ತಂಡದಲ್ಲಿ ಹಾಕಿಕೊಳ್ಳಿ ಖಂಡಿತವಾಗಿ ನಾವು ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳಲು ಪ್ರಾರಂಭ ಮಾಡಿದ್ದಾರೆ.

advertisement

Leave A Reply

Your email address will not be published.