Karnataka Times
Trending Stories, Viral News, Gossips & Everything in Kannada

RCB: ಆರ್ ಸಿ ಬಿ ಸೋತ ಬೆನ್ನಲ್ಲೇ ಹೊರಬಂತು ನೋಡಿ ಹೊಸ ಸುದ್ದಿ! ಸೋತಿದ್ದಕ್ಕೆ ಕೆನ್ನೆಗೆ ಬಾರಿಸಿದ್ದರು ಎಂದ ಮಾಜಿ RCB ಆಟಗಾರ!

advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನಿನ್ನೆ ನಡೆದಿರುವಂತಹ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಡೆದಿರುವ ಎಲಿಮಿನೇಟರ್ ಬಂದಿದ್ದಲ್ಲಿ ಎಲಿಮಿನೇಟ್ ಆಗಿದೆ. ಚೆನ್ನೈ ತಂಡದ ವಿರುದ್ಧ ಗೆಲುವನ್ನು ಸಾಧಿಸಿ ವೀರೋಚಿತವಾಗಿ ಎಲಿಮಿನೇಟರ್ ತಲುಪಿದ್ದ ಬೆಂಗಳೂರು (RCB) ತಂಡ ಈಗ ರಾಜಸ್ಥಾನ ರಾಯಲ್ಸ್ (RR) ತಂಡದ ವಿರುದ್ಧ ಸೋತು ಟೂರ್ನಮೆಂಟ್ ನಿಂದ ಈ ಬಾರಿ ಹೊರ ಬಿದ್ದಿದೆ.

ನಿಜಕ್ಕೂ ಕೂಡ ಕೊನೆಯ ಆರಕ್ಕೆ ಆರು ಪಂದ್ಯಗಳನ್ನು ಗೆದ್ದು ರೋಮಾಂಚನಕಾರಿಯಾಗಿ ಪ್ಲೇ ಆಪ್ ಹಂತಕ್ಕೆ ಮೇಲ್ಗಡೆ ಆಗಿದ್ದ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೋತು ಹೊರ ಬಿದ್ದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಆರ್‌ಸಿಬಿ ಆಟಗಾರನಿಗೆ ಮಾಲೀಕನಿಂದ ಬಿದ್ದಿತ್ತು ಏಟು:

advertisement

ಆರ್‌ಸಿಬಿ (RCB) ಸೋತಿರುವಂತಹ ಸುದ್ದಿ ಹೊರ ಬರುತ್ತಿರುವ ಬೆನ್ನಲ್ಲೇ ಈಗ ಹೊಸ ಸುದ್ದಿ ಹೊರಬಂದಿದೆ. ಅದೇನೆಂದರೆ ಆರ್ಸಿಬಿ ತಂಡದ ಒಬ್ಬ ಆಟಗಾರನಿಗೆ ತಂಡದ ಮಾಲೀಕನಿಂದ ಕಪಾಳ ಮೋಕ್ಷ ಆಗಿತ್ತು ಎನ್ನುವುದಾಗಿ ತಿಳಿದು ಬಂದಿದೆ. ಹೌದು ನಾವ್ ಮಾತಾಡ್ತಿರೋದು ನ್ಯೂಜಿಲ್ಯಾಂಡ್ ಮೂಲದ ಆಟಗಾರ ಆಗಿರುವಂತಹ ರಾಸ್ ಟೇಲರ್ ಅವರ ಬಗ್ಗೆ. ರಾಸ್ ಟೇಲರ್ (Ross Taylor) ಆರಂಭಿಕ ಐಪಿಎಲ್ ಸೀಸನ್ ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ್ರು ಅನ್ನೋದನ್ನ ನಾವಿಲ್ಲಿ ನೆನಪಿಟ್ಟುಕೊಳ್ಳಬೇಕಾಗುತ್ತೆ.

 

Image Source: SportsAdda

 

ಆದರೆ ರಾಸ್ ಟೇಲರ್ (Ross Taylor) ಅವರಿಗೆ ಈ ಅವಮಾನ ಆಗಿರೋದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕರಿಂದ ಅಲ್ಲ ಬದಲಾಗಿ ಅವರು ಹಾಡಿರುವಂತಹ ರಾಜಸ್ಥಾನ ರಾಯಲ್ ತಂಡದ ಪರವಾಗಿ. ಹೌದು ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ಒಂದು ಪಂದ್ಯ ಸೋತ ಬೆನ್ನಲ್ಲಿ ಕ್ಲಬ್ನಲ್ಲಿ ಪಾರ್ಟಿ ಮಾಡುತ್ತಿದ್ದ ಸಮಯದಲ್ಲಿ ರಾಸ್ ಟೇಲರ್ ಅವರ ಬಳಿ ಬಂದು ನಾಲ್ಕು ಐದು ಬಾರಿ ಕೆನ್ನೆಗೆ ಬಾರಿಸಿ ನಿನಗೆ ನಾವು 0 ರನ್ನಿಗೆ ಔಟ್ ಆಗುವುದಕ್ಕೆ ಮಿಲಿಯನ್ ಡಾಲರ್ ಹಣವನ್ನು ನೀಡುತ್ತಿಲ್ಲ ಎನ್ನುವುದಾಗಿ ಗದರಿಸಿದ್ದ.

ಇದನ್ನು ರಾಸ್ ಟೇಲರ್ (Ross Taylor) ಅವರು ತಮ್ಮ ಆತ್ಮಕಥೆಯಲ್ಲಿ ಬರೆದಿಟ್ಟಿದ್ದಾರೆ. ಒಬ್ಬ ಅಂತರಾಷ್ಟ್ರೀಯ ಕ್ರಿಕೆಟಿಗನಿಗೆ ಈ ರೀತಿಯ ಅವಮರ್ಯಾದೆ ಮಾಡುವುದು ನಿಜಕ್ಕೂ ಕೂಡ ಎಲ್ಲಿಯ ನ್ಯಾಯ ಅನ್ನೋದನ್ನ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕೂಡ ಪ್ರಶ್ನೆ ಕೇಳುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಲಕ್ನೋ ತಂಡದ ಮಾಲೀಕ ಆಗಿರುವಂತಹ ಸಂಜೀವ್ ಗೋಯಂಕಾ ಕೆ ಎಲ್ ರಾಹುಲ್ ರವರಿಗೆ ಬೈದಿದ್ದ ಸಂದರ್ಭದಲ್ಲಿ ಕೂಡ ಈ ಸುದ್ದಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೊರಬಂದು ಸದ್ದು ಮಾಡಿತ್ತು. ಒಟ್ಟಾರೆಯಾಗಿ ಕ್ರಿಕೆಟಿಗರನ್ನು ಟೀಮ್ ಮಾಲೀಕರು ನೋಡಿಕೊಳ್ಳುವ ರೀತಿ ಸರಿಯಾಗಿರಬೇಕು ಅನ್ನೋದಾಗಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.