Karnataka Times
Trending Stories, Viral News, Gossips & Everything in Kannada

Gautam Gambhir: ಭಾರತದ ಕೋಚ್ ಆಗೋಕೂ ಮುನ್ನ ಈ 8 ಷರತ್ತು ಹಾಕಿದ ಗಂಭೀರ್! ಇಲ್ಲಿದೆ ಲಿಸ್ಟ್

advertisement

Gambhir’s 8 Conditions Before Accepting India’s Head Coach: ಸದ್ಯದ ಮಟ್ಟಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಸೋಲಿಸಿ ತನ್ನ ಸೆಮಿ ಫೈನಲ್ ಟಿಕೆಟ್ ಅನ್ನು ಪಕ್ಕ ಮಾಡಿಕೊಂಡಿದ್ದು ಇದೇ 27 ನೇ ದಿನಾಂಕದಂದು ನಡೆಯಲಿರುವಂತಹ ಸೆಮಿ ಫೈನಲ್ ಪಂದ್ಯಾಟದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತೀಯ ಕ್ರಿಕೆಟ್ ತಂಡ ಎದುರಿಸಲಿದೆ. ಸಾಕಷ್ಟು ವರ್ಷಗಳ ನಂತರ ಅಂದರೆ 2007ರ ನಂತರ ಮತ್ತೊಮ್ಮೆ ಟಿ20 ವಿಶ್ವಕಪ್ ಅನ್ನು ಗೆಲ್ಲುವಂತಹ ಭಾರತೀಯ ಕ್ರಿಕೆಟ್ ತಂಡದ ಕನಸು ಇನ್ನಷ್ಟು ಜೀವಂತವಾಗಿದೆ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

ಇನ್ನು ಈ ಟೂರ್ನಮೆಂಟ್ ರಾಹುಲ್ ದ್ರಾವಿಡ್ ರವರಿಗೆ ತಂಡದ ಕೋಚ್ ಆಗಿ ಕೊನೆಯ ಟೂರ್ನಮೆಂಟ್ ಆಗಿದ್ದು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೌಚ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದ್ದು ತಾವು ಕೋಚ್ ಆಗೋದಕ್ಕೆ ಕೆಲವೊಂದು ಕಂಡೀಶನ್ ಗಳನ್ನು ಕೂಡ ಗಂಭೀರವರು ಬಿಸಿಸಿಐ ಮುಂದೆ ಇಟ್ಟಿದ್ದು ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವ ಹಾಗೆ ಇಲ್ಲ ಎನ್ನುವಂತಹ ಕಟ್ಟುನಿಟ್ಟಿದ ನಿಯಮವನ್ನು ಜಾರಿಗೆ ತಂದಿದ್ದಾರೆ ಎಂಬುದಾಗಿ ತಿಳಿದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Gambhir's 8 Conditions Before Accepting India's Head Coach

ಗಂಭೀರವರ ಕಂಡೀಶನ್ ಗಳು

* ಗೌತಮ್ ಗಂಭೀರ್ ಕೋಚ್ ಆದನಂತರ ತಂಡವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಬಿಸಿಸಿಐ ಗಂಭೀರ್ ರವರ ಅಭಿಪ್ರಾಯವನ್ನು ತೆಗೆದು ಹಾಕಬಾರದು.
* 2027ರ ವಿಶ್ವಕಪ್ ತಂಡವನ್ನ ಖುದ್ದಾಗಿ ಗಂಭೀರ್ ಅವರೇ ಆಯ್ಕೆ ಮಾಡುತ್ತಾರೆ.
* ತಾವು ಮುಖ್ಯ ಕೋಚ್ ಆದ ನಂತರ ಯಾರು ಬೌಲಿಂಗ್ ಕೋಚ್ ಆಗಬೇಕು ಯಾರು ಬ್ಯಾಟಿಂಗ್ ಕೋಚ್ ಆಗಬೇಕು ಎನ್ನುವಂತಹ ಸಿಬ್ಬಂದಿ ವರ್ಗವನ್ನು ಕೂಡ ಗಂಭೀರವರೆ ಆಯ್ಕೆ ಮಾಡುತ್ತಾರೆ ಅನ್ನೋದಾಗಿ ತಿಳಿದು ಬಂದಿದೆ.

advertisement

* ಮುಂದೆ ಪಾಕಿಸ್ತಾನದಲ್ಲಿ ನಡೆಯಲಿರುವಂತಹ ಚಾಂಪಿಯನ್ ಟ್ರೋಫಿ ನಲ್ಲಿ ತಂಡದ ಹಿರಿ ಆಟಗಾರರಾಗಿರುವಂತಹ ಶಮ್ಮಿ ಜಡೇಜಾ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರಿಗೆ ಒಂದುವೇಳೆ ಸರಿಯಾದ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಲು ಸಾಧ್ಯವಾಗದೇ ಹೋದಲ್ಲಿ ಗಂಭೀರ್ ರವರು ಅವರನ್ನು ಯಾವುದೇ ಮುಲಾಜಿಲ್ಲದೆ ತಂಡದಿಂದ ತೆಗೆದುಹಾಕಲಿದ್ದಾರಂತೆ.
* ಯಾವುದೇ ರೀತಿಯ ಒತ್ತಡವನ್ನ ಗಂಭೀರ್ ರವರ ಮೇಲೆ ಈ ಸಂದರ್ಭದಲ್ಲಿ ಯಾರು ಕೂಡ ಹಾಕುವ ಹಾಗಿಲ್ಲ ಎನ್ನುವುದನ್ನ ಸ್ಪಷ್ಟಪಡಿಸಲಾಗಿದೆಯಂತೆ.

Gambhir's 8 Conditions Before Accepting India's Head Coach
Image Source: News18

* ಗೌತಮ್ ಗಂಭೀರ್ ರವರು ತಂಡದ ಪ್ರತಿಯೊಂದು ಆಗು ಹೋಗುಗಳನ್ನು ತಾವೇ ನಿರ್ಧಾರ ಮಾಡುತ್ತಾರೆ ಹಾಗೂ ಅದನ್ನು ಮೀರಿ ತಂಡದ ಕ್ಯಾಪ್ಟನ್ ಕೂಡ ನಡೆದುಕೊಳ್ಳುವ ಹಾಗಿಲ್ಲ.

ಇವಿಷ್ಟು ನಿಯಮಗಳನ್ನು ಗೌತಮ್ ಗಂಭೀರ್ ರವರು ಬಿಸಿಸಿಐ ಮುಂದೆ ಇಟ್ಟಿದ್ದಾರೆ ಹಾಗೂ ಸಂಸ್ಥೆ ಗಂಭೀರ್ ರವರು ಹೇಳುವಂತಹ ಪ್ರತಿಯೊಂದು ಸಲಹೆಗಳನ್ನು ಕೂಡ ಸರಿಯಾದ ರೀತಿಯಲ್ಲಿ ಪರಿಗಣಿಸಿ ಅದನ್ನು ಶೀಘ್ರ ರೂಪದಲ್ಲಿ ಜಾರಿಗೆ ತರುವಂತಹ ಕೆಲಸವನ್ನು ಮಾಡಬೇಕಾಗಿರುತ್ತದೆ ಅನ್ನೋದನ್ನ ಕೂಡ ಈ ಸಂದರ್ಭದಲ್ಲಿ ಹೇಳಲಾಗಿದ್ದು ಇದು ಎಷ್ಟರ ಮಟ್ಟಿಗೆ ಜಾರಿಗೆ ಆಗುತ್ತೆ ಗೌತಮ್ ಗಂಭೀರ್ ಕೋಚ್ ಹಾಕ್ತಾರ ಇಲ್ವೋ ಅನ್ನೋದನ್ನ ನಾವು ಜುಲೈ ತಿಂಗಳ ಆರಂಭದಲ್ಲಿ ಕಾಣಬಹುದಾಗಿದೆ.

advertisement

Leave A Reply

Your email address will not be published.