Karnataka Times
Trending Stories, Viral News, Gossips & Everything in Kannada

Ind vs SA: ಕೊಹ್ಲಿ,ರೋಹಿತ್, ಬುಮ್ರಾ ಅಲ್ಲ ಈ ಸಲ ಕಪ್ ಗೆದ್ದರೆ ಈ ವ್ಯಕ್ತಿಯ ಫಾರ್ಮ್ ಕಾರಣ ಎಂದ ಅಭಿಮಾನಿಗಳು.

advertisement

T20 World Cup 2024 final SA vs IND: ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಈ ಬಾರಿಯ ಟಿ 20 ವಿಶ್ವಕಪ್ ಫೈನಲ್ ಗೆ ತಲುಪಿರೋದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಸಂತೋಷದ ಆಕಾಶವನ್ನು ತಲುಪುವ ಹಾಗೆ ಮಾಡಿದೆ ಎಂದು ಹೇಳಬಹುದಾಗಿದೆ. ಕಳೆದ ಬಾರಿ ಏಕದಿನ ವಿಶ್ವಕಪ್ ನಲ್ಲಿ ಕೂಡ ಫೈನಲ್ ಗೆ ತಲುಪಿದ್ದ ಭಾರತ ಆಸ್ಟ್ರೇಲಿಯಾ ವಿರುದ್ಧ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರೋಚಿತ ಸೋಲನ್ನು ಕಂಡಿತ್ತು. ಆದರೆ ಈ ಬಾರಿ ಇವತ್ತು ಸೌತ್ ಆಫ್ರಿಕಾ ತಂಡದ ವಿರುದ್ಧ ಫೈನಲ್ ಪಂದ್ಯವನ್ನ ಭಾರತೀಯ ಕ್ರಿಕೆಟ್ ತಂಡ ಆಡಲಿದೆ. ನಿಜಕ್ಕೂ ಕೂಡ 2007ರ ನಂತರ ಮತ್ತೆ ಈ ಬಾರಿ ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಅನ್ನು ಎತ್ತಲಿ ಅನ್ನೋದಾಗಿ ಪ್ರತಿಯೊಬ್ಬ ಭಾರತೀಯ ಕೂಡ ಪ್ರಾರ್ಥಿಸುತ್ತಿದ್ದಾನೆ.

WhatsApp Join Now
Telegram Join Now

ಇನ್ನು ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ನಾಯಕ ರೋಹಿತ್ ಶರ್ಮ ಅತ್ಯುತ್ತಮವಾದ ಬ್ಯಾಟಿಂಗ್ ಪ್ರದರ್ಶನ ಮಾಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ವಿರಾಟ್ ಕೊಹ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತಾದರೂ ಕೂಡ ಅವರು ತಮ್ಮ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಹಾಗಿದ್ರೂ ಕೂಡ ಬುಮ್ರಾ ರವರ ಬಾವುಲಿ ಪ್ರದರ್ಶನ ಬೌಲಿಂಗ್ ವಿಭಾಗದಲ್ಲಿ ಭಾರತ ಕ್ರಿಕೆಟ್ ತಂಡ ಅತ್ಯುತ್ತಮವಾಗಿ ಪ್ರದರ್ಶನ ನೀಡುವಂತೆ ಮಾಡಿತು ಅಂದ್ರೆ ತಪ್ಪಾಗಲ್ಲ.

T20 World Cup 2024 final SA vs IND
Image Source: NDTV Sports

advertisement

ಬಹುತೇಕ ಎಲ್ಲಾ ಪ್ರಮುಖ ಪಂದ್ಯಗಳಲ್ಲಿ ಬುಮ್ರಾ ರವರೆ ಪ್ರಮುಖವಾದ ಬೌಲಿಂಗ್ ಪ್ರದರ್ಶನವನ್ನು ತೋರ್ಪಡಿಸಿ ಭಾರತೀಯ ಕ್ರಿಕೆಟ್ ತಂಡ ಗೆಲ್ಲೋದಕ್ಕೆ ಕಾರಣವಾಗುತ್ತಿದ್ದಾರೆ ಎಂದು ತಪ್ಪಾಗಲಾರದು. ಆದರೆ ಇವರಿಬ್ಬರನ್ನು ಹೊರತುಪಡಿಸಿ ಕೂಡ ಮತ್ತೊಬ್ಬ ಆಟಗಾರನಿಂದಲೇ ಈ ಬಾರಿ ವಿಶ್ವಕಪ್ ಗೆಲ್ಲುವುದಕ್ಕೆ ಸಾಧ್ಯ ಆಗ್ತಿರದು ಅನ್ನೋದಾಗಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ತಮ್ಮ ವಾದವನ್ನು ಮಂಡಿಸಿದ್ದು ಬನ್ನಿ ಆ ಆಟಗಾರ ಯಾರು ಅನ್ನೋದನ್ನು ತಿಳಿದುಕೊಳ್ಳೋಣ.

ಇವರಿಂದಾನೆ ಟೀಮ್ ಇಂಡಿಯ ಗೆಲ್ತಾ ಇರೋದಂತೆ!

ಹೌದು ಹಾರ್ದಿಕ್ ಪಾಂಡ್ಯ ರವರು ಈ ಬಾರಿ ಮರಳಿ ಫಾರಂ ಗೆ ಬಂದಿರುವುದೇ ಭಾರತೀಯ ಕ್ರಿಕೆಟ್ ತಂಡಕ್ಕೆ ಗೆಲುವಿನ ದಾರಿ ಸಿಗುವುದಕ್ಕೆ ಕಾರಣ ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ಬಾರಿ ಭಾರತೀಯ ಕ್ರಿಕೆಟ್ ತಂಡ ಈ ಬಾರಿಯ t20 ವಿಶ್ವಕಪ್ ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸೋತಾಗ ಹಾರ್ದಿಕ್ ಪಾಂಡ್ಯ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡ ಗೆಲುವಿನ ದಡವನ್ನು ಸೇರೋದಕ್ಕೆ ಕಾರಣವಾಗಿದ್ದಾರೆ ಹಾಗೂ ಬೌಲಿಂಗ್ ನಲ್ಲಿ ಕೂಡ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎಂಬುದಾಗಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರ ಪಾತ್ರವನ್ನು ಈ ಬಾರಿ ವಿಶ್ವಕಪ್ ನಲ್ಲಿ ಕೊಂಡಾಡಿದ್ದಾರೆ. ಫೈನಲ್ ಪಂದ್ಯವನ್ನು ಕೂಡ ಇದೇ ರೀತಿ ಆಟವಾಡಿ ಗೆಲ್ಲಿಸಲಿ ಎಂಬುದೇ ಪ್ರತಿಯೊಬ್ಬರ ಆಶಯವಾಗಿದೆ.

T20 World Cup 2024 final SA vs IND
Image Source: Firstpost

advertisement

Leave A Reply

Your email address will not be published.