Karnataka Times
Trending Stories, Viral News, Gossips & Everything in Kannada

SIM Card Rules: ಎರಡಕ್ಕಿಂತ ಹೆಚ್ಚಿಗೆ ಸಿಮ್ ಕಾರ್ಡ್ ಇದ್ದವರು ಶುಲ್ಕ ಕಟ್ಟಬೇಕಾ? ಸರ್ಕಾರದ ನಿರ್ಧಾರ ಪ್ರಕಟ

advertisement

ಈ ಹಿಂದೆ ನಿಮಗೆಲ್ಲರಿಗೂ ತಿಳಿದಿರಬಹುದು TRAI ಇಲಾಖೆಯಿಂದ ಒಂದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಗಳನ್ನು (SIM Cards) ಹೊಂದಿರುವವರಿಗೆ ಹೆಚ್ಚಿನ ಸುಲ್ತಗಳನ್ನು ವಿಧಿಸಲಾಗುತ್ತದೆ ಎನ್ನುವಂತಹ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಅನ್ನೋದನ್ನ ಯಾರಿಂದಲೂ ಕೂಡ ತಿಳಿಯಲು ಸಾಧ್ಯವಾಗಿರಲಿಲ್ಲ ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಈ ವಿಚಾರದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

WhatsApp Join Now
Telegram Join Now

ಒಂದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಇಟ್ಕೊಂಡು ಅವರಿಗೆ ದಂಡ ಬೀಳುತ್ತಾ? ಸರ್ಕಾರ ಹೇಳಿದ್ದೇನು?

 

Image Source: The Indian Express

 

TRAI ಸಂಸ್ಥೆ ಭಾರತದ ಟೆಲಿಕಾಂ ನಿಯಮಗಳನ್ನ ಸರಿಯಾದ ರೀತಿಯಲ್ಲಿ ನಿಯಂತ್ರಣ ಮಾಡುವಂತಹ ಕೆಲಸವನ್ನು ಮಾಡಿಕೊಂಡು ಹೋಗುತ್ತದೆ ಹಾಗೂ ಸಂಸ್ಥೆ ಒಂದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ಗಳನ್ನು (SIM Cards) ಹೊಂದುವ ಬಗ್ಗೆ ಕೂಡ ತನ್ನದಾಗಿರುವಂತಹ ನಿಯಮವನ್ನು ಹೊಂದಿದ್ದು ಅದನ್ನು ಪ್ರತಿಯೊಬ್ಬರೂ ಕೂಡ ಪರಿಪಾಲಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ಎಲ್ಲರೂ ತಿಳಿದುಕೊಳ್ಳಬೇಕು.

advertisement

TRAI ಈ ವಿಚಾರದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸಿಮ್ ಕಾರ್ಡ್ (SIM Card) ಹಂಚಿಕೆ ಪ್ರಕ್ರಿಯೆ ಹಾಗೂ ಉಪಯೋಗವನ್ನ ಇನ್ನಷ್ಟು ಉತ್ತಮವಾಗಿಸುವಂತಹ ನಿಯಮಗಳನ್ನು ಕೂಡ ಜಾರಿಗೆ ತರಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ ಎಂಬುದಾಗಿ ಹೇಳಿದೆ. ಟೆಲಿಕಾಂ ಸೇವೆಗಳನ್ನ ಉತ್ತಮವಾಗಿ ಉಪಯೋಗಿಸಿಕೊಳ್ಳುವುದಕ್ಕಾಗಿ ಅದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ನಿಯಮಗಳನ್ನು ಕೂಡ ಜಾರಿಗೆ ತರುವುದಕ್ಕೆ TRAI ಸಂಸ್ಥೆ ಸಿದ್ಧವಾಗಿದೆ ನಿಜ ಆದ್ರೆ ಒಂದುಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ಗಳನ್ನು (SIM Cards) ಹೊಂದಿರುವಂತಹ ಬಳಕೆದಾರರ ಮೇಲೆ ಹೆಚ್ಚುವರಿ ಚಾರ್ಜಸ್ ಗಳನ್ನ ವಿಧಿಸುತ್ತದೆ ಎನ್ನುವಂತಹ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವಂತಹ ಮಾಹಿತಿಗಳು ಸತ್ಯಕ್ಕೆ ದೂರವಾಗಿರುವುದು ಎನ್ನುವಂತಹ ಸ್ಪಷ್ಟನೆ ನೀಡಿದೆ.

 

Image Source: Gizbot

 

ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಖಾತೆಗಳು ಟೆಲಿಕಾಂ ನಿಯಮಗಳ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಡುವಂತಹ ಕೆಲಸಗಳನ್ನು ಮಾಡ್ತಾ ಇದ್ದು ಬಳಕೆದಾರರಿಗೂ ಕೂಡ ಇದು ಸಾಕಷ್ಟು ಕನ್ಫ್ಯೂಸಿಂಗ್ ಆಗಿದೆ ಎಂದು ಹೇಳಬಹುದಾಗಿದೆ.

ಭಾರತದ ಟೆಲಿಕಾಂ ಇಂಡಸ್ಟ್ರಿಯ ಪ್ರತಿಯೊಂದು ಕೆಲಸವನ್ನು ಮಾನಿಟರ್ ಮಾಡುವಂತಹ TRAI ಅಧಿಕೃತವಾಗಿ ನಿಯಮಗಳನ್ನು ಹೊರಡಿಸಿದರೆ ಮಾತ್ರ ಅದನ್ನು ನಂಬಬೇಕಾಗಿ ಕೋರಿಕೊಳ್ಳಲಾಗಿದೆ. ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಅನ್ನು ನಿಯಮದ ಒಳಗೆ ಹೊಂದಿರಬೇಕಾಗುತ್ತದೆ ಅನ್ನೋದನ್ನ ತಿಳಿಸಲಾಗಿದೆ.

ಇನ್ನು ಸೈಬರ್ ಕ್ರೈಂ ಅನ್ನು ತಡೆಗಟ್ಟುವುದಕ್ಕಾಗಿ ಬೇಕಾಗುವಂತಹ ಪ್ರತಿಯೊಂದು ನಿಯಮಗಳನ್ನು ಕೂಡ ಜಾರಿಗೊಳಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಯಾರಾದ್ರೂ ತಪ್ಪು ಕೆಲಸಗಳಿಗಾಗಿ ಸಿಮ್ ಕಾರ್ಡ್ (SIM Card) ಅನ್ನು ಬಳಕೆ ಮಾಡ್ತಾ ಇದ್ರೆ ಅಂತವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದ್ದು ಅದನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ಗಳನ್ನು ಯಾರಾದರೂ ಹೊಂದಿದ್ದರೆ ಅವರಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ ಎನ್ನುವಂತಹ ಮಾಹಿತಿ ಸಂಪೂರ್ಣವಾಗಿ ಸುಳ್ಳಾಗಿದೆ.

advertisement

Leave A Reply

Your email address will not be published.