Karnataka Times
Trending Stories, Viral News, Gossips & Everything in Kannada

SIM Card: ಸಿಮ್ ಕಾರ್ಡ್ ಇರುವ ಎಲ್ಲರಿಗೂ ಬೆಳ್ಳಂಬೆಳಿಗ್ಗೆ ಮಹತ್ವದ ಸೂಚನೆ ಕೊಟ್ಟ ಹೊಸ ಸರ್ಕಾರ

advertisement

Beware of SIM Swap Fraud & Stay Protected: ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶದಲ್ಲಿ ಟೆಕ್ನಾಲಜಿ ವೇಗವಾಗಿ ಬೆಳೆಯುತ್ತಿದೆ ನಿಜ ಆದರೆ ಇದನ್ನೇ ಬಳಸಿಕೊಂಡು ಮೋಸ ಮಾಡುವವರ ಸಂಖ್ಯೆ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಅನ್ನೋದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ಒಂದು ಸಿಮ್ ಕಾರ್ಡ್(SIM Card) ಅನ್ನು ಬಳಸಿಕೊಂಡು ಇನ್ನೊಂದು ಸಿಮ್ ಕಾರ್ಡ್ ಗೆ ಫೋನ್ ನಂಬರ್ ಅನ್ನು ಟ್ರಾನ್ಸ್ಫರ್ ಮಾಡುವಂತ ಸ್ಕ್ಯಾಮ್ ಗಳು ಬೆಳಕಿಗೆ ಬರುತ್ತಿದ್ದು ನೀವು ಕೂಡ ಇಂತಹ ಸ್ಕ್ಯಾಮ್ ಗಳಿಂದ ದೂರ ಇರಬಹುದಾಗಿದೆ. ಈ ರೀತಿಯ ಸ್ಕ್ಯಾನ್ ಗಳಲ್ಲಿ ಅಪರಾಧಿಗಳು ಪೀಡಿತರ ಫೋನ್ ನಂಬರ್ ಮೇಲೆ ಕಂಟ್ರೋಲ್ ಪಡೆದುಕೊಂಡು ಟು ಸ್ಟೆಪ್ ವೆರಿಫಿಕೇಶನ್ ಅನ್ನು ಮುರಿಯುವಂತಹ ಕೆಲಸಗಳಿಗೆ ಇವುಗಳನ್ನು ಬಳಸಿಕೊಳ್ಳುತ್ತಾರೆ ಎಂಬುದಾಗಿ ತಿಳಿದುಬಂದಿದೆ.

WhatsApp Join Now
Telegram Join Now

ಹೀಗಿರುತ್ತೆ ನೋಡಿ ಸ್ಕ್ಯಾಮ್

* ಸ್ಕ್ಯಾಮರ್ ಗಳು ನಿಮ್ಮ ಡೇಟಾ ಅನ್ನು ಕದಿಯಲು ಸಾಕಷ್ಟು ದಾರಿಗಳನ್ನು ಉಪಯೋಗಿಸುತ್ತಾರೆ. ಅವುಗಳಲ್ಲಿ ಫಿಶಿಂಗ್ e-mail ಸೋಶಿಯಲ್ ಇಂಟರ್ನೆಟ್ ಸೇರಿದಂತೆ ಸಾಕಷ್ಟು ವಿಧಾನಗಳನ್ನು ಅವರು ಹಿಂಬಾಲಿಸುತ್ತಾರೆ.
* ಮೊದಲಿಗೆ ಆ ಸ್ಕ್ಯಾಮರ್ಸ್ ಗಳು ನಿಮ್ಮ ವೈಯಕ್ತಿಕ ದಾಖಲೆಗಳಿಗೆ ಸಂಬಂಧಪಟ್ಟಂತೆ ಕೆಲವೊಂದು ಮಾಹಿತಿಗಳನ್ನು ನೀಡಿ ತಾವು ಫೋನ್ ಆಪರೇಟರ್ಗಳು ಎಂಬಂತಹ ರೀತಿಯಲ್ಲಿ ಮಾತನಾಡಿ ನಿಮ್ಮನ್ನ ನಿಮ್ಮ ಸಿಮ್ ಕಾರ್ಡ್ ನಿಂದ ಇನ್ನೊಂದು ಸಿಮ್ ಕಾರ್ಡ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳುವಂತೆ ಮಾತನಾಡುತ್ತಾರೆ.

Beware of SIM Swap Fraud & Stay Protected
Image Source: Gadgets 360

advertisement

* ಅವರು ಬಳಿ ನಿಮ್ಮ ಸಿಮ್ ಕಾರ್ಡ್ ಒಂದು ಬಾರಿ ಬಂದರೆ ಸಾಕು ನಿಮ್ಮ ವೈಯಕ್ತಿಕ ಮಾಹಿತಿಗಳಾಗಿರುವಂತಹ ಡೇಟಾ ಸೇರಿದಂತೆ ಬ್ಯಾಂಕಿಂಗ್ ಪೇಮೆಂಟ್ಸ್ ಎಲ್ಲವನ್ನು ಕೂಡ ಅವರು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ನಿಮ್ಮ ಬ್ಯಾಂಕಿನಿಂದ ಹಣ ಕೂಡ ಖಾಲಿಯಾಗುತ್ತೆ ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಗಳು ಕೂಡ ಲೀಕ್ ಆಗುತ್ತೆ ಇದು ನಿಜಕ್ಕೂ ಕೂಡ ಸಾಕಷ್ಟು ಗಂಭೀರವಾದ ಪ್ರಕರಣವಾಗಿದೆ.

ಇದರಿಂದ ಬಚಾವ್ ಆಗೋದು ಹೇಗೆ?

* ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನ ಯಾರಿಗೂ ಬಿಟ್ಟು ಕೊಡಬೇಡಿ ನಿಮ್ಮ ಜನ್ಮ ದಿನಾಂಕ ಹೆಸರು ಹಾಗೂ ಫೋನ್ ನಂಬರ್ ಅಂತ ಮಾಹಿತಿಗಳು ಕೂಡ ಗೌಪ್ಯವಾಗಿರೋದು ಒಳ್ಳೆಯದು.
* ನಿಮ್ಮ ಪ್ರತಿಯೊಂದು ಆನ್ಲೈನ್ ಖಾತೆಗಳಲ್ಲಿ ಕೂಡ ಬಲಿಷ್ಠವಾಗಿರುವಂತಹ ಪಾಸ್ವರ್ಡ್ ನಿಂದ ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
* ನಿಮ್ಮ ಮೊಬೈಲ್ ಆಪರೇಟ್ರಿಗೆ ನೀವು ಖುದ್ದಾಗಿ ಮಾಹಿತಿಯನ್ನು ನೀಡಬೇಕಾಗಿರುವುದು ಏನೆಂದರೆ ನಿಮ್ಮ ಒಪ್ಪಿಗೆ ಇಲ್ಲದೆ ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ಸಿಮ್ ಕಾರ್ಡ್ ಸ್ವಾಪ್ ಆಗಬಾರದು ಎನ್ನುವಂತಹ ಮಾಹಿತಿಯನ್ನು ನೀಡಬೇಕು.

Image Source: IndiaToday

* ಟು ಫ್ಯಾಕ್ಟರ್ ಅಥೆಂಟಿಕೇಷನ್ ಅನ್ನು ಆನ್ ಮಾಡಿ ಹಾಗೂ ನಿಮ್ಮ ಫೋನ್ ಹಾಗೂ ಇನ್ನಿತರ ಮಾಹಿತಿ ಗಳಿಗೆ ಡಬಲ್ ಲೇಯರ್ ಪ್ರೊಟೆಕ್ಷನ್ ನೀಡಬಹುದಾಗಿದೆ.
* ನಿಮ್ಮ ಬ್ಯಾಂಕ್ ಹಾಗೂ ಆನ್ಲೈನ್ ಸೇವೆಗಳನ್ನು ನೀಡುವ ವಿಚಾರದ ಬಗ್ಗೆ ಆಗಾಗ ಪರೀಕ್ಷೆ ಮಾಡುತ್ತಲೇ ಇರಿ ಎಲ್ಲಾದರೂ ಲೋಪದೋಷ ಕಂಡು ಬಂದರೆ ಬ್ಯಾಂಕಿನವರನ್ನು ಕೂಡಲೇ ಸಂಪರ್ಕಿಸಿ ಹಾಗೂ ಆ ಸಮಸ್ಯೆಗೆ ಪರಿಹಾರವನ್ನು ಸುರಕ್ಷಿತ ರೂಪದಲ್ಲಿ ಪಡೆದುಕೊಳ್ಳಿ.

advertisement

Leave A Reply

Your email address will not be published.