Karnataka Times
Trending Stories, Viral News, Gossips & Everything in Kannada

Smartphones Under 10K: ಕೇವಲ 10 ಸಾವಿರ ರೂಪಾಯಿಯೊಳಗೆ ಸಿಗುವ ಅದ್ಭುತ ಸ್ಮಾರ್ಟ್ ಫೋನ್ ಗಳ ಲಿಸ್ಟ್ ಇಲ್ಲಿದೆ!

advertisement

ಇಂದು ಸ್ಮಾರ್ಟ್‌ಫೋನ್ ಗಳು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಅಗತ್ಯ. ಮೊಬೈಲ್ ಒಂದು ಇದ್ದರೆ ಸಾಕಷ್ಟು ವಿಚಾರಗಳನ್ನು , ಮಾಹಿತಿಗಳನ್ನು ನೀವು ಪಡೆದು ಕೊಳ್ಳಬಹುದು‌. ಮಾರುಕಟ್ಟೆ ಯಲ್ಲಿಯು ಇಂದು ವಿವಿಧ ಮಾಡೆಲ್ ನ ಮೊಬೈಲ್ ಗಳು ಲಗ್ಗೆ ಇಟ್ಟಿದ್ದು ಪ್ರತಿಯೊಂದು ಬೆಲೆ, ವೈಶಿಷ್ಟ್ಯ ವಿಭಾಗದಲ್ಲಿ ಬಹಳಷ್ಟು ಆಯ್ಕೆಗಳು ಇವೆ. ಇದೀಗ ಕಡಿಮೆ ಬಜೆಟ್‌ನಲ್ಲಿ ಕೆಲವೊಂದು ಪ್ರತಿಷ್ಟಿತ ಕಂಪನಿಯ ಮೊಬೈಲ್ ಪೋನ್ ಗಳನ್ನು ನೀವು ಖರೀದಿ ಮಾಡಬಹುದು.

ಯಾವೆಲ್ಲ ಮೊಬೈಲ್:

POCO M6 Pro 5G:

 

 

POCO M6 Pro 5G 90Hz ಉತ್ತಮ ವೈಶಿಷ್ಟ್ಯ ದೊಂದಿಗೆ ಬರಲಿದೆ‌.‌ ಇದರ ರಿಫ್ರೆಶ್ ದರ ಉತ್ತಮ ವಾಗಿದ್ದು 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.79-ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. POCO M6 Pro ಕೂಡ‌ ವಿಭಿನ್ನ ಫೀಚರ್ಸ್ ಅನ್ನು ಒಳಗೊಂಡಿದ್ದು ಇದರ ವಿನ್ಯಾಸವು ಉತ್ತಮ ವಾಗಿದೆ. ಈ ಫೋನ್ ತನ್ನ 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದ್ದು ಹತ್ತು ಸಾವಿರದ ಬೆಲೆ ಯೊಂದಿಗೆ ನೀವು ಖರೀದಿ ಮಾಡಬಹುದು.

Redmi 13C:

 

 

advertisement

ಅದೇ ರೀತಿ Redmi 13C ಕೂಡ ಮದ್ಯಮ ವರ್ಗದ ಜನತೆಗೆ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಪೋನು 6.74-ಇಂಚಿನ HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಹೊಂದಿದ್ದು ಈ ಫೋನ್ 8GB RAM ಮತ್ತು 256GB UFS 2.2 ಸಂಗ್ರಹಣೆಯ ಸಾಮರ್ಥ್ಯ ವನ್ನು ಪಡೆದುಕೊಂಡಿದ್ದು ಇದರ ಮೆಗಾ 5000mAh ಬ್ಯಾಟರಿ ಸಾಮರ್ಥ್ಯ ವಾಗಿದೆ. ಇದು 50MP ಡ್ಯುಯಲ್ ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿಕೊಂಡಿದೆ.

Realme Narzo 30A:

 

 

ಈ ಸ್ಮಾರ್ಟ್ಫೋನ್ ಕೂಡ ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ. ಇದು 6.5-ಇಂಚಿನ HD+ ಡಿಸ್ಪ್ಲೇ ಹೊಂದಿದ್ದು, ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಚಿಪ್‌ಸೆಟ್ ಅನ್ನು ಸಹ ಪಡೆದುಕೊಂಡಿದೆ. ಈ ಪೋನ್ 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ

Lava Blaze 5G:

 

 

ಲಾವಾ ಬ್ಲೇಜ್ ಕೂಡ 5G ಯೊಂದಿಗೆ ಮಾರುಕಟ್ಟೆ ಗೆ ಬಂದಿದ್ದು ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಆಗಿದೆ. ಇದು 6.5-ಇಂಚಿನ HD+ IPS LCD ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಈ ಪೋನ್ ಅನ್ನು ನೀವು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.