Karnataka Times
Trending Stories, Viral News, Gossips & Everything in Kannada

Jio: ಜಿಯೋ ಉಚಿತ ನೀಡಿದ್ದ ಅಂಬಾನಿಯಿಂದ ಇದೀಗ ಬಳಕೆದಾರರಿಗೆ ಕಹಿಸುದ್ದಿ

advertisement

ಭಾರತ ಟೆಲಿಕಾಂ ಇಂಡಸ್ಟ್ರಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅತ್ಯಂತ ದೊಡ್ಡ ಕಂಪನಿ ಯಾವುದು ಅಂತ ಕೇಳಿದರೆ ಪ್ರತಿಯೊಬ್ಬರೂ ಕೂಡ ಹೇಳುವಂತಹ ಒಂದೇ ಒಂದು ಉತ್ತರ ಅದು ರಿಲಯನ್ಸ್ (Reliance) ಒಡೆತನದ Jio ಕಂಪನಿ. ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಯಾವ ರೀತಿಯಲ್ಲಿ ಬೆಳೆದು ನಿಂತಿದೆ ಹಾಗೂ ಈಗ ಯಾವ ಮಟ್ಟವನ್ನು ತಲುಪಿದೆ ಅನ್ನೋದನ್ನ ನೀವೆಲ್ಲರೂ ಕಣ್ಣಾರೆ ನೋಡಿದ್ದೀರಿ ಹೀಗಾಗಿ ವಿಶೇಷವಾಗಿ ವಿವರಿಸ ಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ.

WhatsApp Join Now
Telegram Join Now

ಜುಲೈ ತಿಂಗಳು ಆರಂಭವಾಗುತ್ತಿದ್ದಂತೆ ಜಿಯೋ (Jio) ಗ್ರಾಹಕರಿಗೆ ಇನ್ಮುಂದೆ ರಿಚಾರ್ಜ್ ಮಾಡುವಂತಹ ಬೆಲೆಯ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ನಿರಾಸೆ ಕಾದಿದೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಏನಿದು ವಿಚಾರ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಹೆಚ್ಚಾಗಲಿದೆ ಜಿಯೋ ರಿಚಾರ್ಜ್ ಬೆಲೆ:

 

Image Source: informalnewz

 

advertisement

ಜುಲೈ 3 ರಿಂದ ಪ್ರಾರಂಭವಾಗಿ ಜಿಯೋ (Jio) ಸಂಸ್ಥೆ ತನ್ನ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು 20 ಪ್ರತಿಶತ ಹೆಚ್ಚು ಗಳಿಸುವಂತಹ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ.

  • 155 ರೂಪಾಯಿಗಳ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ಎರಡು ಜಿಬಿ ಇಂಟರ್ನೆಟ್ ಡೇಟಾ ಪ್ಯಾಕ್ ಸಿಗುವಂತಹ ರಿಚಾರ್ಜ್ ಪ್ಲಾನ್ ಅನ್ನು ನೀವು ಇನ್ಮುಂದೆ 189 ರೂಪಾಯಿ ಪಾವತಿ ಮಾಡಿ ರಿಚಾರ್ಜ್ ಮಾಡಿಸಿಕೊಳ್ಳಬೇಕು.
  • 209 ರೂಪಾಯಿಗಳ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ಪ್ರತಿದಿನ ಒಂದು ಜಿಬಿ ಇಂಟರ್ನೆಟ್ ಡೇಟಾ ಪಡೆದುಕೊಳ್ಳುವಂತಹ ರಿಚಾರ್ಜ್ ಪ್ಲಾನ್ ಅನ್ನು ಇನ್ಮುಂದೆ 249 ರೂಪಾಯಿ ನೀಡಿ ಖರೀದಿ ಮಾಡಬೇಕು.
  • 299 ರೂಪಾಯಿಗಳ ಎರಡು ಜಿಬಿ ಇಂಟರ್ನೆಟ್ ಡೇಟಾ ಪ್ಯಾಕ್ ಇನ್ಮುಂದೆ 399 ರೂಪಾಯಿ ಆಗಲಿದೆ.
  • 399 ರೂಪಾಯಿಗಳ 3 ಜಿಬಿ ಇಂಟರ್ನೆಟ್ ಡೇಟಾ ಪ್ಯಾಕ್ ಅನ್ನು ನೀಡುವಂತಹ ರೀಚಾರ್ಜ್ ಪ್ಲಾನ್ ಇನ್ ಮುಂದೆ 499 ರೂಪಾಯಿ ಆಗಲಿದೆ.
  • 479 ರೂಪಾಯಿಗಳ ಪ್ರತಿದಿನ 1.5 ಜಿಬಿ ಇಂಟರ್ನೆಟ್ ಸೌಲಭ್ಯವನ್ನು ನೀಡುವಂತಹ ರೀಚಾರ್ಜ್ ಪ್ಲಾನಿನ ಬೆಲೆ ಹೆಚ್ಚಾಗಿ 579 ರೂಪಾಯಿ ಮಾಡಲಾಗಿದೆ.

 

Image Source: Catch News

 

  • ಎರಡು ಜಿಬಿ ಇಂಟರ್ನೆಟ್ ನೀಡುವಂತಹ 533 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು 629 ರೂಪಾಯಿಗಳನ್ನು ಪಾವತಿ ಮಾಡಬೇಕಾಗಿರುತ್ತದೆ.
  • ಇನ್ನು ವಾರ್ಷಿಕ ರಿಚಾರ್ಜ್ ಪ್ಲಾನ್ ವಿಚಾರಕ್ಕೆ ಬರೋದಾದ್ರೆ 336 ದಿನಗಳ ವರೆಗಿನ ಅನ್ಲಿಮಿಟೆಡ್ ಕಾಲಿಂಗ್ ಒಟ್ಟಾರೆ 24 ಜಿಬಿ ಇಂಟರ್ನೆಟ್ ಡೇಟಾ ಇರುವಂತಹ ರಿಚಾರ್ಜ್ ಪ್ಲಾನಿನ ಬೆಲೆ 1559 ರೂಪಾಯಿ ಆಗಿತ್ತು ಆದರೆ ಅದನ್ನ ಈಗ ಹೆಚ್ಚು ಮಾಡಿ 1899 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
  • ಒಂದು ವರ್ಷಕ್ಕೆ ಪ್ರತಿದಿನ 2.5 ಜಿಬಿ ಇಂಟರ್ನೆಟ್ ಡೇಟ ನೀಡುವಂತಹ 2999 ರೂಪಾಯಿಗಳ ರಿಚಾರ್ಜ್ ಪ್ಲಾನ್ ಬೆಲೆಯನ್ನು ಏರಿಕೆ ಮಾಡಿ 3599 ಮಾಡಲಾಗಿದೆ.

ಇದೇ ರೀತಿಯಲ್ಲಿ ಸಾಕಷ್ಟು ಬೆಲೆ ಏರಿಕೆ ನಡೆದಿದ್ದು ನೀವು ಅಧಿಕೃತ ವೆಬ್ಸೈಟ್ನಲ್ಲಿ ಅಥವಾ ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಇದನ್ನ ನೋಡಬಹುದಾಗಿದೆ.

advertisement

Leave A Reply

Your email address will not be published.