Karnataka Times
Trending Stories, Viral News, Gossips & Everything in Kannada

Maruti Suzuki Brezza: ಮಾರುತಿ ಸುಜುಕಿ ಬ್ರೆಜ್ಜಾ ಬೆಲೆ ಏರಿಕೆ, ಯಾವ ವೇರಿಯೆಂಟ್ ಗೆ ಎಷ್ಟು?

advertisement

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ಕಳೆದ ತಿಂಗಳು ವಿವಿಧ ಮಾದರಿಗಳ ದರವನ್ನು ಹೆಚ್ಚಳ ಮಾಡಿತ್ತು. ಸದ್ಯ, ಮಧ್ಯಮ ವರ್ಗದವರ ನೆಚ್ಚಿನ ಬ್ರೆಜ್ಜಾ (Brezza) ಕಾರಿನ ರೂಪಾಂತರಗಳಿಗೆ ಎಷ್ಟು ಬೆಲೆ ಏರಿಕೆಯಾಗಿ ಗ್ರಾಹಕರ ಜೇಬು ಸುಡುತ್ತಿದೆ.

ದರ ಏರಿಕೆ ಕಂಡಿರುವ ವೇರಿಯೆಂಟ್ ಗಳು:

ಮಾರುತಿ ಸುಜುಕಿ ಬ್ರೆಜ್ಜಾ (Maruti Suzuki Brezza) ಕಾರಿನ ದರಗಳು ರೂ.10,000 ವರೆಗೆ ಹೆಚ್ಚಾಗಿದೆ. ಇದು ಝಡ್ಎಕ್ಸ್ಐ, ಝಡ್ಎಕ್ಸ್ಐ ಡುಯಲ್ ಟೋನ್, ಝಡ್ಎಕ್ಸ್ಐ ಸಿಎನ್‌ಜಿ, ಝಡ್ಎಕ್ಸ್ಐ ಸಿಎನ್‌ಜಿ ಡುಯಲ್ ಟೋನ್, ಝಡ್ಎಕ್ಸ್ಐ ಪ್ಲಸ್, ಝಡ್ಎಕ್ಸ್ಐ ಪ್ಲಸ್ ಡುಯಲ್ ಟೋನ್ ಒ ವೇರಿಯೆಂಟ್ ಗಳಿಗೆ ಅನ್ವಯಿಸುತ್ತದೆ.

ಮೊದಲಿನ ದರ ಕಾಯ್ದುಕೊಂಡಿರುವ ಕಾರ್ ಗಳು:

 

 

ಆದರೆ, ZXI AT, ZXI AT Dual Tone, ZXI Plus AT, ZXI Plus AT Dual Tone ದರಗಳು ಹೆಚ್ಚಳಗೊಂಡಿಲ್ಲ. ಮಾರುತಿ ಸುಜುಕಿ ಬ್ರೆಜ್ಜಾ ಎಸ್‌ಯುವಿಯ ಎಲ್ಎಕ್ಸ್ಐ, ಎಲ್ಎಕ್ಸ್ಐ ಸಿಎನ್‌ಜಿ, ವಿಎಕ್ಸ್ಐ ಸಿಎನ್‌ಜಿ ರೂಪಾಂತರಗಳ ದರ ರೂ.5,000 ವೆರೆಗೆ ಏರಿಕೆಯಾಗಿದ್ದು, ವಿಎಕ್ಸ್ಐ ಎಟಿ ರೂಪಾಂತರದ ಬೆಲೆ ಮಾತ್ರ ರೂ.5,000 ಇಳಿಕೆಯಾಗಿದೆ.

advertisement

Maruti Suzuki Brezza Features:

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಬ್ರೆಜ್ಜಾ (Maruti Suzuki Brezza), ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಪರ್ಲ್ ಮಿಡ್ನೈಟ್ ಬ್ಲಾಕ್, ಮ್ಯಾಗ್ಮಾ ಗ್ರೇ, ಒಳಗೊಂಡಂತೆ 7-ಮೊನೊಟೋನ್, 3-ಡುಯಲ್ ಟೋನ್ ಬಣ್ಣಗಳೊಂದಿಗೆ ಲಭ್ಯವಿದ್ದು, ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ.
ಈ ಬ್ರೆಜ್ಜಾ, ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೇನ್ ಆಯ್ಕೆಯಲ್ಲಿ ಸಿಗಲಿದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಪಿಎಸ್ ಗರಿಷ್ಠ ಪವರ್, 137 ಎನ್ಎಂ ಪೀಕ್ ಟಾರ್ಕ್, ಸಿಎನ್‌ಜಿ ಚಾಲಿತ ಕಾರು ಸಹ ಇದೇ ಎಂಜಿನ್ ಪಡೆದಿದೆ. ಆದರೆ, 88 ಪಿಎಸ್ ಪವರ್, 121.5 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

Maruti Suzuki Brezza Mileage:

 

 

ಮಾರುತಿ ಸುಜುಕಿ ಬ್ರೆಜ್ಜಾ ವೇರಿಯೇಂಟ್ ಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, ಪೆಟ್ರೋಲ್ ರೂಪಾಂತರಗಳು 17.38 ಕೆಎಂಪಿಎಲ್ – 19.8 ಕೆಎಂಪಿಎಲ್, ಸಿಎನ್‌ಜಿ ರೂಪಾಂತರಗಳು 25.51 ಕಿ.ಮೀ/ಕೆಜಿ ಮೈಲೇಜ್ ಕೊಡುತ್ತವೆ.
ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್‌, ಸಿಂಗಲ್ – ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Maruti Suzuki Brezza ಕಿಯಾ ಸೋನೆಟ್ ಗೆ ಎದುರಾಳಿ:

ಸುರಕ್ಷತೆಯ ವಿಚಾರದಲ್ಲಿಯೂ ಮಾರುತಿ ಸುಜುಕಿ ಬ್ರೆಜ್ಜಾ ಅತ್ಯಾಧುನಿಕವಾಗಿದೆ. 6 ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್-ಹೋಲ್ಡ್ ಅಸಿಸ್ಟ್, ಸೀಟ್ ಬೆಲ್ಟ್ ರಿಮೈಂಡರ್‌, ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಪಡೆದಿದೆ. ಈ ಕಾರಿಗೆ ಕಿಯಾ ಸೋನೆಟ್, ರೆನಾಲ್ಟ್ ಕಿಗರ್ ದೊಡ್ಡ ಎದುರಾಳಿಯಾಗಿವೆ.

advertisement

Leave A Reply

Your email address will not be published.