Karnataka Times
Trending Stories, Viral News, Gossips & Everything in Kannada

Ayushman Card: ಆಯುಷ್ಮಾನ್ ಕಾರ್ಡ್ ಕಳೆದುಹೋಗಿದೆಯೇ? ಹಾಗಿದ್ದಲ್ಲಿ ಅದನ್ನು ಮನೆಯಲ್ಲಿಯೇ ಕುಳಿತು ಡೌನ್‌ಲೋಡ್ ಮಾಡುವ ವಿಧಾನ‌ ಇಲ್ಲಿದೆ!

advertisement

ಇಂದು ಹಣ, ಆಸ್ತಿ ,ಉದ್ಯೋಗ ಎಲ್ಲಕ್ಕಿಂತ ಹೆಚ್ಚು ಆರೋಗ್ಯ‌. ಆರೋಗ್ಯ ಸಮಸ್ಯೆ ಉಂಟಾದರೆ ಬಡ ವರ್ಗದ ಜನತೆ ಆಸ್ಪತ್ರೆ ಯ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಕಷ್ಟ. ಇದಕ್ಕಾಗಿ ಕೇಂದ್ರ ಸರಕಾರ ಆಯುಷ್ಮಾನ್ ಕಾರ್ಡ್ (Ayushman Card) ಜಾರಿಗೆ ತಂದಿದೆ. ಆಯುಷ್ಮಾನ್‌ ಯೋಜನೆ, ಆರೋಗ್ಯ ಕರ್ನಾಟಕ ಯೋಜನೆ ಕೇಂದ್ರ ಸರಕಾರದ ಮುಖ್ಯ ಯೋಜನೆಯಾಗಿದ್ದು, ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಇದು ಪ್ರಯೋಜನಕಾರಿ ಯಾದ ಯೋಜನೆ ಯಾಗಿದೆ.

ಯೋಜನೆಯ ಗುರಿ ಏನು?

ಮುಖ್ಯವಾಗಿ, ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಆರೋಗ್ಯ ಸೇವೆಯ ಗುಣಮಟ್ಟದ ಸುಧಾರಣೆಗಾಗಿ, ಆರೋಗ್ಯ ಸೇವೆ ಉಚಿತ ವಾಗಿ ಸಿಗಬೇಕು ಎಂಬ ದೃಷ್ಟಿಯಿಂದ ಈ ಯೋಜನೆ ಆರಂಭ ಮಾಡಿದೆ.‌ ಆಸ್ಪತ್ರೆಯಲ್ಲಿ ದಾಖಲಾಗುವ ಮುನ್ನ ಅಲ್ಲಿ ತಗುಲುವ ಖರ್ಚು, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಬಳಿಕ ನೀಡಲಾಗುವ ಚಿಕಿತ್ಸೆಯ ಖರ್ಚು ಮೊದಲಾದ ವುಗಳನ್ನು ನಿಭಾಯಿಸುತ್ತದೆ.

ಎಷ್ಟು ಉಚಿತ ಸೌಲಭ್ಯ?

ಆಯುಷ್ಮಾನ್ ಕಾರ್ಡ್ ಇದ್ದರೆ ಸುಮಾರು 5 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಜನರು ಪಡೆಯಬಹುದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಕಾರ್ಡ್ ಎಲ್ಲೋ ಮಿಸ್ ಆದ್ರೆ ಅದನ್ನು ಯಾವ ರೀತಿ ವಾಪಸ್ಸು ಪಡೆಯುದು ಎಂಬ ಸಂದೇಹ ನಿಮ್ಮಲ್ಲಿ ಇದ್ದರೆ ಇಲ್ಲಿದೆ ಮಾಹಿತಿ.

advertisement

ಕಾರ್ಡ್ ಕಳೆದು ಹೋಗಿದ್ದರೆ ಹೀಗೆ ಮಾಡಿ:

 

 

ಒಂದು ವೇಳೆ ಆಯುಷ್ಮಾನ್ ಕಾರ್ಡ್ ಕಳೆದು ಹೋದರೆ, ಹತ್ತಿರದ ಆಯುಷ್ಮಾನ್ ಕೇಂದ್ರ ಅಥವಾ ಆರೋಗ್ಯ ಇಲಾಖೆ ಕಚೇರಿಗೆ ತರಳಿಯು ಹೊಸ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದ್ದು ಆನ್‌ಲೈನ್ ಮೂಲಕವು ಕಾರ್ಡ್ ಡೌನ್‌ಲೋಡ್ ಮಾಡಲು, ಅವಕಾಶ ಇದೆ. ಮೊದಲಿಗೆ ನೀವು https://beneficiary.nha.gov.in ಇಲ್ಲಿ ಲಾಗಿನ್ ಆಗಿ ಈಗ ನಿಮ್ಮ ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಹಾಕುವ ಮೂಲಕ ಮತ್ತು ಮೊಬೈಲ್‌ನಲ್ಲಿ ಸ್ವೀಕರಿಸಿದ OTP ನಮೂದಿಸಿ ತದನಂತರ, ನೀವು ನಿಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ PMJAY ಆಪ್ಚನ್ ಅನ್ನು ಆಯ್ಕೆ ಮಾಡಿ.

ತದನಂತರ ಆಧಾರ್ ಸಂಖ್ಯೆ (Aadhaar Card), ಹೆಸರು, ಸ್ಥಳ ವಿಳಾಸ ನಮೂದಿಸಿ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ಆಧಾರ್ ಐಡಿಗೆ ಲಿಂಕ್ ಮಾಡಲಾಗಿರುತ್ತದೆ. ಆಗ ನಿಮ್ಮ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬೇಕಾದ್ರೆ ಡೌನ್‌ಲೋಡ್ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ.ನಿಮ್ಮ ಆಯುಷ್ಮಾನ್ ಕಾರ್ಡ್ PDF ರೂಪದಲ್ಲಿ ಡೌನ್‌ಲೋಡ್ ಆಗುತ್ತದೆ. ಅದರ ಪ್ರಿಂಟೌಟ್ ತೆಗೆದುಕೊಳ್ಳುವ ಮೂಲಕ, ನೀವು ಅದನ್ನು ಹಾರ್ಡ್ ಕಾಪಿಯಾಗಿ ಮಾಡಬಹುದು‌.

ಈ ದಾಖಲೆ ಕಾರ್ಡ್ ಮಾಡಿಸಲು ಅಗತ್ಯ:

  • Aadhaar Card/PAN Card
  • Caste Certificate
  • Ration Card
  • Income Certificate

advertisement

Leave A Reply

Your email address will not be published.