Karnataka Times
Trending Stories, Viral News, Gossips & Everything in Kannada

Ayushman Card: ಆಯುಷ್ಮಾನ್ ಕಾರ್ಡ್‌ ನಿಂದ ರಾಜ್ಯದ ಜನತೆಗೆ ಸಿಗಲಿದೆ ಗುಡ್ ನ್ಯೂಸ್, 5 ಲಕ್ಷ ಮೌಲ್ಯದ ಉಚಿತ ಚಿಕಿತ್ಸೆ ಲಭ್ಯ!

advertisement

ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಆರೋಗ್ಯ ಸರಿ ಇದ್ದರೆ ಮಾತ್ರ ಜೀವನದಲ್ಲಿ ನಾವು ಅಂದುಕೊಂಡಂತೆ ಇರಲು ಸಾಧ್ಯ. ಇಂದು ಈ ಆಧುನಿಕ ಯುಗದಲ್ಲಿ ಸರಿಯಾದ ಆಹಾರ ಕ್ರಮ ಪಾಲಿಸದೇ ಹೆಚ್ಚು ಜನರು ಆರೋಗ್ಯ ಹಾಳು ಗೆಡವುತ್ತಿದ್ದಾರೆ. ಅದರಲ್ಲೂ ತುರ್ತು ಅನಾರೋಗ್ಯ ಸಂದರ್ಭದಲ್ಲಿ ಮದ್ಯಮ ವರ್ಗದ ಜನತೆಗೆ ಇಂದು ಆಸ್ಪತ್ರೆ ಚಿಕಿತ್ಸಾ ಮೊತ್ತ ವನ್ನು ವಿಧಿಸುವುದು ಕಷ್ಟ ಸಾಧ್ಯ. ಹಾಗಾಗಿ ಬಡ ವರ್ಗದ ಜನತೆಗೆ ಆರೋಗ್ಯ ಸೌಲಭ್ಯ ಸಿಗಲಿ ಎಂಬ ಉದ್ದೇಶ ‌ದಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಕಾರ್ಡ್ (Ayushman Bharat Card) ಆರಂಭಿಸಿದೆ.

Get Free Treatment:

ಈ ಯೋಜನೆ ಮೂಲಕ ಉಚಿತ ಚಿಕಿತ್ಸೆ ಲಭ್ಯವಿದ್ದು ತುರ್ತು ಸಂದರ್ಭಗಳಲ್ಲಿ ಸುಮಾರು 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಈ ಯೋಜನೆಯಡಿಯಲ್ಲಿ ಬಿಪಿಎಲ್‌ ಪಡಿತರ ಚೀಟಿ (BPL Ration Card) ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವು ವ್ಯಕ್ತಿಗಳು ಆದ್ಯತೆ ಆಧಾರದ ಮೇಲೆ ಬಳಸಿಕೊಳ್ಳಬಹುದು.‌

ಬದಲಾವಣೆ ತರಲಾಗಿದೆ:

 

advertisement

 

ಈ Ayushman Card ನಲ್ಲಿ ಇದೀಗ ಕೆಲ ಬದಲಾವಣೆ ತರಲಾಗಿದ್ದು, ಈ Ayushman Bharat Pradhan Mantri Jan Arogya National Portal ಗೆ ನೂತನ ಹೆಲ್ತ್ ಕಾರ್ಡ್ (Health Card) ಗಳನ್ನು ಸೇರಿಸಲಾಗಿದ್ದು ರಾಜ್ಯದ ಬಿಪಿಎಲ್ ಕಾರ್ಡುದಾರರು ದೇಶದ ಇತರೆ ರಾಜ್ಯಗಳಲ್ಲಿ ಹೆಲ್ತ್ ಕಾರ್ಡ್ ನ ಅಡಿ ಚಿಕಿತ್ಸೆ ಪಡೆಯಲು ಸಹ ಅವಕಾಶ ‌ಇದೆ.

Make Ayushman Card for Free:

ಈ ಕಾರ್ಡ್ ಅನ್ನು‌ ನೀವು ಹತ್ತಿರದ ಗ್ರಾಮ ಒನ್‌ (Gram One) ಕೇಂದ್ರದಲ್ಲಿ ಬೇಕಾದ ದಾಖಲೆಗಳನ್ನು ನೀಡಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ ರಾಜ್ಯದ ಬಿಪಿಎಲ್ ಕಾರ್ಡುದಾರರು (BPL Card Holders) ದೇಶದ ಇತರೆ ರಾಜ್ಯಗಳಲ್ಲಿ ಕೂಡ ಹೆಲ್ತ್ ಕಾರ್ಡ್ ನ ಅಡಿ ಚಿಕಿತ್ಸೆ ಪಡೆಯಬಹುದಾಗಿದೆ. ಸಾರ್ವಜನಿಕರು ತಮ್ಮ ಸ್ಮಾರ್ಟ್ ಮೊಬೈಲ್‍ಗಳ ಮೂಲಕ ಯಾವುದೇ ವೆಚ್ಚವಿಲ್ಲದೇ ಸರ್ಕಾರದ ಆಯುಷ್ಮಾನ್ ಆರೋಗ್ಯ ಸೌಲಭ್ಯ ಕ್ಕೆ ಅರ್ಜಿ‌ಸಲ್ಲಿಕೆ ಮಾಡಬಹುದು. ಈಗಾಗಲೇ ರಾಜ್ಯದ 5.9 ಕೋಟಿ ಜನರಿಗೆ ಹೆಲ್ತ್ ಕಾರ್ಡ್ ಗಳನ್ನ ವಿತರಿಸುವ ಗುರಿಯನ್ನ ಆರೋಗ್ಯ ಇಲಾಖೆ ಹೊಂದಿದೆ.

advertisement

Leave A Reply

Your email address will not be published.