Karnataka Times
Trending Stories, Viral News, Gossips & Everything in Kannada

Ashwamedha Bus: ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ!

advertisement

ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆ ಮೂಲಕ ಸರಕಾರಿ ಬಸ್ ಗಳಿಗೆ ಅಧಿಕ ಬೇಡಿಕೆ ಬರುತ್ತಿದ್ದಂತೆ ಸರಕಾರಿ ಬಸ್ ಸಂಖ್ಯೆ ಕೂಡ ಹೆಚ್ಚಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಕೆಎಸ್ ಆರ್ಟಿಸಿ ಈಗಾಗಲೇ ಹೊಸ ಬಸ್ ವಿನೂನತವಾಗಿ ಬಿಡುಗಡೆ ಮಾಡಲಾಗುತ್ತಿದ್ದು ಈ ಸಾಲಿನಲ್ಲಿ ಅಶ್ವಮೇಧ ಬಸ್ (Ashwamedha Bus) ಕೂಡ ಸೇರಿಕೊಂಡಿದೆ. ಇದು ಎಲ್ಲಿ ಪ್ರಯಾಣಿಸಲಿದೆ. ಈ ಬಸ್ ನಲ್ಲಿ ಯಾವೆಲ್ಲ ವಿಶೇಷತೆ ನಿಮಗೆ ಕಾಣ ಸಿಗಲಿದೆ ಇನ್ನು ಅನೇಕ ವಿಧದ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ಸರಕಾರಿ ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಸರಕಾರಿ ಬಸ್ ನ ಬೇಡಿಕೆ ಕೂಡ ಅಧಿಕವಾಗುತ್ತಿದೆ ರಾಜ್ಯದ ಅನೇಕ ಭಾಗದಲ್ಲಿ ಸರಕಾರಿ ಬಸ್ ನಲ್ಲಿ ನೂಕು ನುಗ್ಗಲು ಆರಂಭ ಆಗುತ್ತಿದ್ದು ಈ ನೆಲೆಯಲ್ಲಿ ಸರಕಾರಿ ಬಸ್ ಗೆ ಬಲು ಬೇಡಿಕೆ ಬಂದಿದೆ. ಕೆಎಸ್ ಆರ್ಟಿಸಿ (KSRTC) ಒಂದು ಸಾವಿರ ಹೊಸ ಬಸ್ ಬಿಡುಗಡೆ ಮಾಡಲಾಗುತ್ತಿದ್ದು ಅದರ ಮೊದಲ ಹಂತದ 100 ಬಸ್ ಬಿಡುಗಡೆ ಮಾಡಲಾಗಿದೆ.

ಅದ್ಧೂರಿ ಚಾಲನೆ:

ಮುಖ್ಯ ಮಂತ್ರಿ ಸಿದ್ದ ರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಹೊಸದಾಗಿ ನೂರು ಕ್ಲಾಸಿಕಲ್ ಬಸ್ ಗಳನ್ನು ವಿಧಾನ ಸೌದದ ಮುಂಭಾಗದಲ್ಲಿ ಬಿಡುಗಡೆಗೆ ಮಾಡಿ ಸಿಎಂ ಅವರು ಚಾಲನೆ ನೀಡಿದ್ದಾರೆ. ಈ ಒಂದು ಬಸ್ ಗೆ ಅಶ್ವಮೇಧ ಎಂದು ಈ ಬಸ್ ಗೆ ಹೆಸರಿಸಲಾಗಿದೆ. ಈ ಒಂದು ಬಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ವಕ್ತಾರರು, ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

advertisement

ಈ ಬಸ್ ನಲ್ಲಿ ಯಾವೆಲ್ಲ ವಿಶೇಷತೆ ಇದೆ?

 

 

ಈ ಒಂದು Ashwamedha Bus ನಲ್ಲಿ ಮಹಿಳೆಯರ ಸುರಕ್ಷತೆಗೆ ಅತೀ ಹೆಚ್ಚು ಕ್ರಮ ತೆಗೆದುಕೊಳ್ಳಲಾಗಿದೆ. ಮಹಿಳೆಯರಿಗೆ ಈ ಒಂದು ಬಸ್ ಉಚಿತ ಸೇವೆ ನೀಡುವ ಜೊತೆಗೆ ಅಧಿಕ ಸುರಕ್ಷತೆ ಸಹ ನೀಡಲಿದೆ. ಇದರಲ್ಲಿ ಸಿಸಿ ಕ್ಯಾಮರಾ, ಜಿಪಿಎಸ್ ವ್ಯವಸ್ಥೆ, ಮೊಬೈಲ್ ಫೋನ್ ಚಾರ್ಜಿಂಗ್, 12 ಪ್ಯಾನಿಕ್ ಬಟನ್, ಬಸ್ ಒಳಗೆ ಮತ್ತು ಹೊರಗಡೆ LED ಫಲಕ, 52ಸುರಕ್ಷಿತ ಸೀಟ್ ಗಳು, ಲಗೆಜ್ ಇಡಲು ಪ್ಯತ್ಯೇಕ ಜಾಗ ಕೂಡ ಇಡಲಾಗಿದೆ. ಹೀಗೆ ಅನೇಕ ವಿಚಾರದಿಂದ ಈ ಒಂದು ಅಶ್ವಮೇಧ ಬಸ್ ಬಹಳ ಜನಪ್ರಿಯವಾಗಿದೆ.

ಉಚಿತ ಘೋಷಣೆ:

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಚುನಾವಣೆ ಪೂರ್ವದಲ್ಲಿ ತಿಳಿಸಿದಂತೆ ಉಚಿತ ಪ್ರಯಾಣದ ಸಾಲಿನಲ್ಲಿ ಅಶ್ವಮೇಧ ಬಸ್ ಗೆ ಕೂಡ ಅನುಮತಿ ಸೂಚಿಸಿದೆ. ಮೊದಲೇ ತಿಳಿಸಿದಂತೆ ಅಂಬಾರಿ, ಐರಾವತ ದಂತಹ ಲಕ್ಶೂರಿ ಬಸ್ ಹೊರತು ಪಡಿಸಿ ಉಳಿದಂತ ಎಲ್ಲ ಸಾಮಾನ್ಯ KSRTC ಬಸ್ ಗಳಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಅನುಮತಿ ನೀಡಿದ್ದು ಹೊಸದಾದ ಅಶ್ವಮೇಧ ಬಸ್ (Ashwamedha Bus) ನಲ್ಲಿ ಕೂಡ ಇದೇ ಸೇವೆ ನೀವು ಪಡೆಯಬಹುದು. ಈಗಾಗಲೇ ಮೊದಲ ಹಂತದ ನೂರು ಬಸ್ ಗೆ ಚಾಲನೆ ಸಿಕ್ಕಿದ್ದು ಉಳಿದ 900 ಬಸ್ ಶೀಘ್ರ ಬರಲಿದ್ದು ಇದೇ ವ್ಯವಸ್ಥೆಯನ್ನು ಜಿಲ್ಲಾವಾರು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿಂತಿಸಲಾಗುತ್ತಿದೆ.

advertisement

Leave A Reply

Your email address will not be published.