Karnataka Times
Trending Stories, Viral News, Gossips & Everything in Kannada

Toyota Rumion: ಎರ್ಟಿಗಾ ಕಿಯಾ ಕಾರಿಗೆ ಟಕ್ಕರ್ ಕೊಡುತ್ತಿದೆ ಈ 7 ಸೀಟರ್ ಕಾರು, ಕಡಿಮೆ ಬೆಲೆ ಹಾಗೂ 26km ಮೈಲೇಜ್!

advertisement

ಹೊಸ ವಾಹನ ಖರೀದಿಸುವುದು ಬಹಳಷ್ಟು ಜನರ ಆಸೆ ಯಾಗಿರುತ್ತದೆ. ಇದು ಹೆಚ್ಚಿನವರ ದೊಡ್ಡ ಕನಸು ಎಂದರೆ ತಪ್ಪಗಲಾರದು. ಇಂದು ಮಾರುಕಟ್ಟೆ ಯಲ್ಲಿ ವಿವಿಧ ಮಾಡೆಲ್ ನ ವಾಹನಗಳು ಬಹಳಷ್ಟು ಬೇಡಿಕೆ ಸೃಷ್ಟಿಸಿದ್ದು ಖರೀದಿ ಮಾಡುವ ಗ್ರಾಹಕರ ಸಂಖ್ಯೆ ಯು ಬಹಳಷ್ಟು ಹೆಚ್ಚಾಗಿದೆ. ಕಳೆದ ವರ್ಷದಲ್ಲಿ ವಾಹನ ಖರೀದಿ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಅದೇ ರೀತಿ ಇಂದು ಸ್ವಂತ ವಾಹನ ಖರೀದಿ ಮಾಡುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಮಾರುಕಟ್ಟೆಯಲ್ಲಿ ಟೊಯೋಟಾ ರೂಮಿಯಾನ್ ‌(Toyota Rumion) ಆಕರ್ಷಕ ಬೆಲೆಯೊಂದಿಗೆ ಬಿಡುಗಡೆ ಮಾಡಿದ್ದು ವಿಶಿಷ್ಟ ವಿನ್ಯಾಸ ವನ್ನು ಸಹ ಒಳಗೊಂಡಿದೆ.

ಹೇಗಿದೆ ವೈಶಿಷ್ಟ್ಯ?

ಈ ಕಾರು ನೋಡಲು ಸಹ ಬಹಳ ಆಕರ್ಷಕ ವಾಗಿದ್ದು ಅತ್ಯುತ್ತಮ ಮೈಲೇಜ್ ಅನ್ನು ಒಳಗೊಂಡಿದೆ. ಈ ರೂಮಿಯನ್ ವಿನ್ಯಾಸ ಮಾರುತಿ ಎರ್ಟಿಗಾದಂತೆ ಇದ್ದು ಸುಧಾರಿತ ಫೀಚರ್ಸ್ ಅನ್ನು ಒಳಗೊಂಡಿದೆ. ಈ ರೂಮಿಯನ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ವಯಂಚಾಲಿತ ನಿಯಂತ್ರಣ, ಕ್ರೂಸ್ ಕಂಟ್ರೋಲ್, ಪ್ರೀಮಿಯಂ ಲೆದರ್ ಸೀಟ್‌ಗಳು ಇತ್ಯಾದಿಯನ್ನು ಒಳಗೊಂಡಿದೆ.

ಅದೇ ರೀತಿ ಪ್ರಯಾಣ ಮಾಡಲು ಆರಾಮದಾಯಕ ಅನುಭವವನ್ನು ಸಹ ನೀಡಲಿದೆ. ವಾಹನದಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸೆನ್ಸರ್‌ಗಳು ಇತ್ಯಾದಿಯನ್ನು ಸಹ ಒಳಗೊಂಡಿದೆ.

ಇದು 7-ಸೀಟರ್ ಕಾರ್ ಆಗಿದ್ದು ಇದರಲ್ಲಿ CNG ಆಯ್ಕೆಯೂ ಲಭ್ಯವಿದೆ.

advertisement

ಈ ರುಮಿಯಾನ್ ಕಾರನ್ನು ಒಟ್ಟು 3 ರೂಪಾಂತರಗಳು, 6 ಟ್ರಿಮ್‌ಗಳು ಮತ್ತು 5 ಬಣ್ಣಗಳಲ್ಲಿ ವಿವಿಧ ವೈಶಿಷ್ಟ್ಯ ಗಳೊಂದಿಗೆ ಮಾರುಕಟ್ಟೆ ಗೆ ಬರಲಿದೆ. ಅದೇ ರೀತಿ ಇದು ಹೊಸ ಸ್ಪೋಕ್ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಹೊಂದಿದೆ.

ಎಂಜಿನ್ ದಕ್ಷತೆ ಹೇಗಿದೆ?

ಈ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಸಾಮರ್ಥ್ಯ ಹೊಂದಿದ್ದು 103 BHP ಪವರ್ ಮತ್ತು 137 Nm ಟಾರ್ಕ್ ಅನ್ನು ನೀಡಲಿದೆ. ಅದೇ ರೀತಿ ಪ್ರತಿ ಲೀಟರ್‌ಗೆ 26.11 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯ ನೀಡುತ್ತದೆ.

ಬೆಲೆ ಹೇಗಿದೆ?

ಈ ಟೊಯೊಟಾ ರೂಮಿಯನ್ ಬೆಲೆ 10.19 ಲಕ್ಷ INR ನಿಂದ 13.68 ಲಕ್ಷ ವರಗೆ ಇದ್ದು ಈಗಾಗಲೇ ವಾಹನ ಪ್ರೀಯರಲ್ಲಿ ಇದರ ಕುತೂಹಲ ಬಹಳಷ್ಟು ಹೆಚ್ಚಾಗಿದೆ. ಈ ವಾಹನವನ್ನು ಬುಕ್ಕಿಂಗ್ ಮಾಡುದಾದ್ರೆ ಆನ್‌ಲೈನ್‌ನಲ್ಲಿ ಅಥವಾ ಹತ್ತಿರದ ಟೊಯೋಟಾ ಶೋರೂಮ್‌ನಲ್ಲಿ ಬುಕ್ಕಿಂಗ್ ಮಾಡಬಹುದು.

advertisement

Leave A Reply

Your email address will not be published.