Karnataka Times
Trending Stories, Viral News, Gossips & Everything in Kannada

5 ಲಕ್ಷ ರೂ ಕಡಿಮೆ ವೆಚ್ಚದಲ್ಲಿ ಹೊಸ ರೂಪದಲ್ಲಿ ಬಂತು ಈ ಕಾರು! ಜನ ಮುಗಿಬಿಳೋದು ಖಚಿತ

advertisement

ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ಅತ್ಯಂತ ಜನಪ್ರಿಯ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವಂತಹ ಕಾರ್ ಕಂಪನಿಗಳಲ್ಲಿ ಒಂದಾಗಿರುವಂತಹ ಮಹಿಂದ್ರ ಸಂಸ್ಥೆ ಅತಿ ಶೀಘ್ರದಲ್ಲಿ Mahindra XUV 700 ಕಾರಿನ ಹೊಸ ವೇರಿಯಂಟ್ ಅನು ಲಾಂಚ್ ಮಾಡೋದಕ್ಕೆ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಈ ಕಾರು ಯಾವ ರೀತಿಯಲ್ಲಿ ಇರಲಿದೆ ಹಾಗೂ ಇದರ ಬೆಲೆ ಎಷ್ಟಾಗಿರಬಹುದು ಅನ್ನೋದ್ರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

Mahindra XUV 700 ಕಾರಿನ ವಿಶೇಷತೆಗಳು ಹಾಗೂ ಬೆಲೆ

Mahindra XUV 700 ನ ಹೊಸ ವೆರಿಯಂಟ್ ಆಟೋಮೆಟಿಕ್ ನಲ್ಲಿ ಬರಲಿದ್ದು ಇದರಲ್ಲಿ 5 ಸೀಟಿಂಗ್ ವ್ಯವಸ್ಥೆಯನ್ನು ನೀವು ಕಾಣಬಹುದಾಗಿದೆ. Mahindra XUV 700 ಆಟೋಮೆಟಿಕ್ ವೇರಿಯಂಟ್ ನಲ್ಲಿ 2.0 ಲೀ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಇಂಜಿನ್ ನೀವು ಕಾಣಬಹುದಾಗಿದೆ. ಈ ಮೂಲಕ ನೀವು ಈ ಕಾರಿನ ಮೂಲಕ ಪವರ್ಫುಲ್ ಪರ್ಫಾರ್ಮೆನ್ಸ್ ಅನ್ನು ಪಡೆದುಕೊಳ್ಳುವಂತಹ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು.

Image Source: CarDekho

advertisement

Mahindra XUV 700 ಹೊಸ ವೇರಿಯಂಟ್ ಕಾರ್ ನಲ್ಲಿ ಎಂಟು ಇಂಚಿನ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಕೂಡ ಕಾಣಬಹುದಾಗಿದೆ. ಯುಎಸ್ಬಿ ಪೋರ್ಟ್ ಅನ್ನು ಕೂಡ ನೀವು ಈ ಕಾರ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಅಡ್ಜಸ್ಟೇಬಲ್ ಸ್ಟೇರಿಂಗ್ ವೀಲ್ ಜೊತೆಗೆ ನಾಲ್ಕು ಸ್ಪೀಕರ್ ಇರುವಂತಹ ಸೌಂಡ್ ಸಿಸ್ಟಮ್ ಅನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಎಲ್ಇಡಿ ಟೈಲ್ ಲ್ಯಾಂಪ್ ಹಾಗೂ ಸ್ಮಾರ್ಟ್ ಡೋರ್ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಸುರಕ್ಷತೆಯ ದೃಷ್ಟಿಯಲ್ಲಿ ಕಾರಿನಲ್ಲಿ ಏನೆಲ್ಲಾ ಇದೆ ಅನ್ನೋದನ್ನ ತಿಳಿಯೋಣ ಬನ್ನಿ.

ಡ್ಯೂಯಲ್ ಏರ್ ಬ್ಯಾಗ್, ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್ ಜೊತೆಗೆ ಎಲೆಕ್ಟ್ರಾನಿಕ್ಸ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಕೂಡ ಈ ಕಾರ್ ನಲ್ಲಿ ನೀವು ಅಳವಡಿಸಿರುವುದನ್ನು ಕಾಣಬಹುದಾಗಿದೆ. ಗ್ಲೋಬಲ್ NCAP ನಿಂದ ಐದು ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಕೂಡ ಈ ಕಾರು ಪಡೆದುಕೊಂಡಿದೆ. ಇದು 17 km ಪ್ರತೀ ಲೀಟರ್ ಮೈಲೇಜ್ ನೀಡುವಂತಹ ಸಾಧ್ಯತೆ ಇದೆ.

Image Source: GoMechanic

ಇನ್ನು Mahindra XUV 700  ಸೆವೆನ್ ಸೀಟರ್ ಟಾಪ್ ಎಂಡ್ ನ ಬೆಲೆ ಸುಮಾರು 28 ಲಕ್ಷದವರೆಗೆ ಇದೆ ಆದರೆ ಅದಕ್ಕಿಂದ ಕಡಿಮೆ ದರದಲ್ಲಿ ಈ ಕಾರು ಸಿಗಲಿದೆ. Mahindra XUV 700 ಕಾರಿನ ಮ್ಯಾನುವಲ್ ವರ್ಷನ್ 5 seater  ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದರ ಬೆಲೆ 14 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ. ಇನ್ನು ಲೆಕ್ಕಾಚಾರಗಳ ಪ್ರಕಾರ ಈಗ ಹೊಸದಾಗಿ ಲಾಂಚ್ ಆಗ ಬಲ್ಲಂತಹ ಈ ಆಟೋಮೆಟಿಕ್ ಕಾರು ಕನಿಷ್ಠ ಪಕ್ಷ 15.80 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಮಾರುಕಟ್ಟೆಗೆ ಮಾರಾಟ ಆಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ.

advertisement

Leave A Reply

Your email address will not be published.