Karnataka Times
Trending Stories, Viral News, Gossips & Everything in Kannada

Siddaramaiah: ಮನೆ ಹಾಗು ಅಂಗಡಿ ಮಳಿಗೆಗಳನ್ನು ಬಾಡಿಗೆ ನೀಡುವವರಿಗೆ ಹೊಸ ರೂಲ್ಸ್! ಸಿಎಂ ನಿರ್ಧಾರ

advertisement

How is police verification done for tenants?: ಇತ್ತೀಚಿನ ದಿನದಲ್ಲಿ ಸ್ವಂತ ಮನೆಯ ವಾಸ್ತವ್ಯಕ್ಕಿಂತಲೂ ಬಾಡಿಗೆ ಮನೆಯಲ್ಲಿ ವಾಸ ಮಾಡುವವರ ಸಂಖ್ಯೆ ಅಧಿಕ ಆಗಿದೆ ಎಂದು ಹೇಳಬಹುದು. ಶಿಕ್ಷಣ ಉದ್ಯೋಗ ಎಂದು ನಗರ ಭಾಗಕ್ಕೆ ವಲಸೆ ಹೋಗುವವರ ಪ್ರಮಾಣ ಅಧಿಕ ಆದಂತೆ ಮನೆ ಬಾಡಿಗೆ ನೀಡುವವರ ಸಂಖ್ಯೆ ಕೂಡ ಅಧಿಕ ಆಗುತ್ತಿದೆ. ಹಾಗಾಗಿ ಮನೆ ಬಾಡಿಗೆಗೆ ಒಪ್ಪಂದ , ಷರತ್ತು ಇತರ ಸಾಮಾನ್ಯ ನಿಯಮ ಪಾಲನೆ ಕೂಡ ಕಡ್ಡಾಯ ಎಂದು ಹೇಳಬಹುದು. ಮನೆ ಅಥವಾ ಇತರ ವಾಣಿಜ್ಯ ಕಟ್ಟಡವನ್ನು ಇನ್ನು ಮುಂದೆ ನೀವು ಬಾಡಿಗೆ ಪಡೆಯಬೇಕು ಅಥವಾ ಬಾಡಿಗೆಗೆ ನೀಡಬೇಕು ಎಂದಾದರೆ ಸರಕಾರದ ಕೆಲವು ಸಾಮಾನ್ಯ ನಿಯಮಗಳು ಅನ್ವಯ ಆಗಲಿದೆ ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ಸ್ವ ಉದ್ಯೋಗ ಮಾಡುವವರು ಅಂಗಡಿ ಮುಂಗಟ್ಟನ್ನು ಕೂಡ ಬಾಡಿಗೆ ಪಡೆಯುತ್ತಾರೆ. ಅದೇ ರೀತಿ ಬಾಡಿಗೆ ಮನೆ, ಲೀಸ್ ಹಾಕಿಕೊಳ್ಳುವವರ ಸಂಖ್ಯೆ ಕೂಡ ಅಧಿಕ ಇದೆ. ಅಧಿಕ ಹಣದಾಸೆಗೆ ಗೊತ್ತು ಗುರಿ ಇಲ್ಲದವರಿಂದ ಅಡ್ವಾನ್ಸ್ ಪಡೆದು ಬಾಡಿಗೆ ಮನೆ ಅಥವಾ ಅಂಗಡಿ, ಇತರ ವಾಣಿಜ್ಯ ಕಟ್ಟಡ ನೀಡುವವರಿಗೆ ಈಗ ಸರಕಾರದ ಈ ನಿಯಮ ಕಡ್ಡಾಯವಾಗಿ ಪಾಲಿಸಲೇ ಬೇಕು ಎಂಬ ನಿಯಮ ಅನ್ವಯ ಆಗಲಿದೆ. ಹಾಗಾಗಿ ಹೊಸದಾಗಿ ಬಾಡಿಗೆ ಮನೆ ನೀಡಬೇಕು ಎಂದವರು ಪೊಲೀಸ್ ಇಲಾಖೆಯ ಕೆಲವು ಉಪಯುಕ್ತ ಸಲಹೆಯನ್ನು ಇನ್ನು ಮುಂದೆ ಕಡ್ಡಾಯವಾಗಿ ಪಾಲಿಸಲೇ ಬೇಕು.

Image Source: India TV News

ಕಾರಣ ಏನು?
ಬಾಡಿಗೆ ಮನೆ ಅಥವಾ ಇತರ ವಾಣಿಜ್ಯ ಕಟ್ಟಡ ನೀಡಲು ಅನೇಕ ನಿಯಮ ಪೊಲೀಸ್ ಇಲಾಖೆ ಮೂಲಕ ಸಲಹೆ ಸೂಚನೆ ಬರಲು ಕೂಡ ಮುಖ್ಯ ಕಾರಣ ಇದೆ. ಇತ್ತೀಚಿನ ದಿನದಲ್ಲಿ ಅಧಿಕ ಬಾಡಿಗೆ ಪಡೆಯುವ ಹಣದಾಸೆಯಿಂದ ಯಾವುದೆ ಪೂರ್ವ ಪರ ಹಿನ್ನೆಲೆ ಸರಿಯಾಗಿ ತಿಳಿಯದೇ ಮನೆ, ಕಟ್ಟಡ ಬಾಡಿಗೆ ನೀಡುವ ಪ್ರಮಾಣ ಅಧಿಕ ಆಗಿದೆ. ಅನೇಕ ಕಡೆ ಅಪರಾಧ, ಅನೈತಿಕ , ದೇಶ ದ್ರೋಹಿ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು ಅವರ ಕೆಲಸ ಮುಗಿದ ಬಳಿಕ ಹೇಳದೆ ಕೇಳದೆ ತೆರಳುತ್ತಿದ್ದಾರೆ.

ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಮಾಡಲು ಹೊರಟರೆ ಮನೆ ಖಾಲಿ ಮಾಡಿ 4 ತಿಂಗಳಾಯ್ತು ಅವರ ವ್ಯವಹಾರ , ಊರು ಗೊತ್ತಿಲ್ಲ ಎಂದು ಬಾಡಿಗೆ ನೀಡುವವರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.ಹಾಗಾಗಿ ಇದಕ್ಕೆ ಪರಿಹಾರಾರ್ಥವಾಗಿ ಇನ್ನು ಮುಂದೆ ಬಾಡಿಗೆ ಮನೆ, ವಾಣಿಜ್ಯ ಕಟ್ಟಡ ನೀಡುವ ಮಾಲಕರು ಸರಕಾರದ ಕೆಲವು ಸಲಹೆ ಕಡ್ಡಾಯವಾಗಿ ಪಾಲಿಸಲೇ ಬೇಕು ಎಂದು ಪೊಲೀಸ್ ಇಲಾಖೆ ಮೂಲಕ ಸಲಹೆ ಸೂಚನೆ ನೀಡಿದೆ.

advertisement

Image Source: The News Minute

ಈ ಮಾಹಿತಿ ಕಡ್ಡಾಯವಾಗಿ ಪಡೆಯಿರಿ
*ಬಾಡಿಗೆ ಮನೆ ಅಥವಾ ಅಂಗಡಿ , ಇತರ ವಾಣಿಜ್ಯ ಕಟ್ಟಡ ನೀಡುವಾಗ ಕಡ್ಡಾಯವಾಗಿ ಅವರ ವೈಯಕ್ತಿಕ ಮಾಹಿತಿ ಕಲೆಹಾಕಬೇಕು.
*ಬಾಡಿಗೆ ಪಡೆಯುವವರ ಸ್ವಂತ ಊರು ಇತರ ಹಿನ್ನೆಲೆ ತಿಳಿದಿರಬೇಕು.
*ವಿದೇಶಿಗರಿಗೆ ಬಾಡಿಗೆ ನೀಡುವ ಮುನ್ನ ಅವರ ಪಾಸ್ ಪೋರ್ಟ್ , ವೀಸಾ ಇತರ ದಾಖಲೆ ಪ್ರತಿ ಪಡೆಯುವುದು ಕಡ್ಡಾಯ.
*ಬಾಡಿಗೆ ನೀಡುವ ಮುನ್ನ ಬಾಡಿಗೆ ಪಡೆಯುವವರ ಆಧಾರ್ ಕಾರ್ಡ್, ಇತರ ಗುರುತು ಚೀಟಿ ಪ್ರತಿ ಹಾಗೂ ಅವರ ಮೊಬೈಲ್ ಸಂಖ್ಯೆ ಪಡೆಯಬೇಕು‌. ಅವರು ನೀಡಿರುವ ಎಲ್ಲ ಗುರುತು ಪ್ರತಿ ಸರಿ ಇದೆಯೋ ಅಥವಾ ನಕಲಿಯೊ ಎಂಬುದನ್ನು ಸಹ ತಿಳಿಯಬೇಕು.
*ಅಂಗಡಿ ಅಥವಾ ವಾಣಿಜ್ಯ ಮಳಿಗೆ ಬಾಡಿಗೆ ನೀಡುವಾಗ ಬಾಡಿಗೆ ಪಡೆಯುವವರು ಅಲ್ಲಿ ಯಾವ ವ್ಯವಹಾರ ಮಾಡುತ್ತಾರೆ ಎಂಬ ಬಗ್ಗೆ ಕೂಡ ಕಡ್ಡಾಯವಾಗಿ ತಿಳಿಯಬೇಕು.

Image Source: The South First
Image Source: ANI News

*ಬಾಡಿಗೆ ಮನೆ ವಾಸ್ತವ್ಯ ಮಾಡುವವರು ಎಷ್ಟು ಜನ, ಅವರು ಯಾವ ಯಾವ ವಾಹನ ಹೊಂದಿದ್ದಾರೆ ಎಂಬ ವಾಹನದ ಸಂಖ್ಯೆಯ ಮಾಹಿತಿ ಸಹ ಪಡೆಯಬೇಕು.
*ಬಾಡಿಗೆ ನೀಡುವ ಮುನ್ನ ಅವರ ಉದ್ಯೋಗ ಕ್ಷೇತ್ರ ಇತರ ಪೂರ್ವ ಪರ ಅಂಶ ತಿಳಿಯುವುದು ಅಗತ್ಯವಾಗಿದೆ.
*ಬಾಡಿಗೆ ಮನೆ, ವಾಣಿಜ್ಯ ಕಟ್ಟಡ ನೀಡುವ ಮುನ್ನ ಕಡ್ಡಾಯವಾಗಿ ಪೊಲೀಸ್ ಇಲಾಖೆಗೆ ತಿಳಿಸಬೇಕು.
*ಬಾಡಿಗೆ ಪಡೆಯುವವರ ನಡವಳಿಕೆ, ಕೆಲವು ಚಟುವಟಿಕೆ ನಿಮಗೆ ಅನುಮಾನ ತರಿಸಿದರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

 

ಒಟ್ಟಾರೆಯಾಗಿ ಈ ಎಲ್ಲ ನಿಯಮವನ್ನು ಬಾಡಿಗೆ ನೀಡುವ ಮುನ್ನ ಕಡ್ಡಾಯವಾಗಿ ಪಾಲಿಸಬೇಕಿದ್ದು ಇದು ಸಮಾಜದ ಸ್ವಾಸ್ಥ್ಯ ಕಾಪಾಡುವ ನೆಲೆಯಲ್ಲಿ ಬಹಳ ಅವಶ್ಯಕ ಎನ್ನಬಹುದು. ಇನ್ನು ಮುಂದೆ ಪೊಲೀಸ್ ತನಿಖೆ ವೇಳೆ ಬಾಡಿಗೆ ಮಾಲಕರು ಬಾಡಿಗೆ ಪಡೆದ ವ್ಯಕ್ತಿ ಬಗ್ಗೆ ಇಂತಹ ದಾಖಲೆ ಇತರ ಮಾಹಿತಿ ಹೊಂದಿರದಿದ್ದರೆ ನಿಯಮ ಉಲ್ಲಂಘನೆ ಎಂದು ಆಗಲಿದೆ. ಹಾಗಾಗಿ ರಾಜ್ಯಾದ್ಯಂತ ಈ ನಿಯಮ ಎಲ್ಲರೂ ಕಡ್ಡಾಯವಾಗಿ ಪಾಲಿಸಲೇ ಬೇಕು ಕೂಡ ಎನ್ನಬಹುದು.

advertisement

Leave A Reply

Your email address will not be published.