Karnataka Times
Trending Stories, Viral News, Gossips & Everything in Kannada

CSR 762: 190 ಕಿಲೋಮೀಟರ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕ್; ಬುಕ್ ಮಾಡಿ ಕೇವಲ ಒಂದು ರೂಪಾಯಿಗೆ!

advertisement

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗಿಂತ ಇದು ಬಾರಿ ಆಗಿದ್ದರು ಕೂಡ, ಒಮ್ಮೆ ಖರೀದಿ ಮಾಡಿದ ಮೇಲೆ ಅದರ ವೆಚ್ಚ ಕಡಿಮೆ ಎನ್ನುವ ಕಾರಣಕ್ಕೆ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಜನ ಖರೀದಿ ಮಾಡುತ್ತಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ದರಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಇದರಿಂದಾಗಿ ಸರ್ಕಾರವು ಕೂಡ ಬೆಂಬಲ ನೀಡಿದೆ ಬೇರೆ ಬೇರೆ ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.

ಇದೀಗ ಅಹಮದಾಬಾದಿನ ವಾಹನ ತಯಾರಿಕಾ ಸ್ಟಾರ್ಟ್ ಅಫ್ ಕಂಪನಿ CSR 762 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದೆ. ಅತ್ಯುತ್ತಮವಾದ ಈ ಮೋಟಾರ್ ಸೈಕಲ್ ಹೆಚ್ಚು Mileage ಕೊಡುವುದರ ಜೊತೆಗೆ ಅತಿ ಕಡಿಮೆ ವೆಚ್ಚದಲ್ಲಿ ನೀವು ಈ ಬೈಕ್ ನಿರ್ವಹಿಸಬಹುದು.

CSR 762 Electric Bike Features:

 

 

advertisement

ಕಳೆದ ವರ್ಷ ಅಂದರೆ 2023 ಅಕ್ಟೋಬರ್ ತಿಂಗಳಿನಲ್ಲಿ ಈ ಬೈಕ್ ಅನ್ನು ಕಂಪನಿ ಮಾರುಕಟ್ಟೆಗೆ ಪರಿಚಯಿಸಿತು. ಈ ಬೈಕ್ ನಲ್ಲಿ ಪವರ್ ಚಾರ್ಜ್ ಹೋಲ್ಡರ್, ಮತ್ತು ಆಂಡ್ರಾಯ್ಡ್ ಸಂಪರ್ಕಕ್ಕೆ ಸುಲಭವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಆರು ರೈಡಿಂಗ್ ಮೋಡ್ ಅಳವಡಿಸಿರುವುದು ವಿಶೇಷ.

CSR 762 Electric Bike Battery and Power:

 

 

CSR 762 ಎಲೆಕ್ಟ್ರಿಕ್ ಬೈಕ್ ನ ಬ್ಯಾಟರಿ ಬಗ್ಗೆ ಮಾತನಾಡುವುದಾದರೆ ಮೂರು 3.6 kWh ಲೀಥಿಯಂ ಅಯಾನ್ ಸ್ವಾಪ್ ಬ್ಯಾಟರಿ ಅಳವಡಿಸಲಾಗಿದೆ. ಒಮ್ಮೆ ಚಾರ್ಜ್ ಮಾಡಿದ್ರೆ 190 ಕಿಲೋಮೀಟರ್ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೂ ಕಿಲೋಮೀಟರ್ ಗೆ 120 ಕೆ ಎಮ್ ಪಿ ಎಲ್ ಮೈಲೇಜ್ ನೀಡುತ್ತದೆ. 3800 RPM ನಲ್ಲಿ ಗರಿಷ್ಠ 10 kw ಅಂದ್ರೆ 13.4 bhp ಪವರ್ ಉತ್ಪಾದಿಸುವ ಸಾಮರ್ಥ್ಯ ಇರುವ, PMS ಎಲೆಕ್ಟ್ರಿಕಲ್ ಮೋಟಾರ್ ಅಳವಡಿಸಲಾಗಿದೆ.

CSR 762 Electric Bike Price:

ಈ ಹೊಸ ಎಲೆಕ್ಟ್ರಿಕ್ ಬೈಕ್, ಎಕ್ಸ್ ಶೋರೂಮ್ ಬೆಲೆ 1.90 ಲಕ್ಷ ರೂಪಾಯಿ. ಇದೀಗ ಕಂಪನಿ ಉತ್ತಮ ಆಫರ್ ನೀಡುತ್ತಿದ್ದು ಕೇವಲ ಒಂದು ರೂಪಾಯಿಗೆ ಬುಕ್ ಮಾಡಿಕೊಳ್ಳಲು ಸಾಧ್ಯವಿದೆ. ಕಂಪನಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಈಗಾಗಲೇ 12,000 ಬುಕಿಂಗ್ ಗಳು ಆಗಿವೆ. ಹೆಚ್ಚಿನ ಮಾಹಿತಿಗಾಗಿ ನೀವು ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಗತ್ಯ ಇರುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.

advertisement

Leave A Reply

Your email address will not be published.