Karnataka Times
Trending Stories, Viral News, Gossips & Everything in Kannada

UPI: UPI ವಹಿವಾಟುಗಳಿಗೆ ಹೊಸ ನಿಯಮ ಅನ್ವಯ, ಇನ್ಮುಂದೆ ವಹಿವಾಟು ಮಿತಿಯು ಹೆಚ್ಚಳ!

advertisement

ಇಂದು ಪ್ರತಿಯೊಬ್ಬರು ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ.‌ಯಾಕಂದ್ರೆ ಇಂದು ಬ್ಯಾಂಕ್ ಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವ ಸಂಖ್ಯೆ ಕಡಿಮೆ ಯಾಗಿದೆ. ಮೊಬೈಲ್ ಇದ್ದರೆ ಸಾಕು ಇದ್ದಲ್ಲಿಯಿಂದಲೇ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿದೆ. ದೇಶದಲ್ಲಿ ಯುಪಿಐ ವಹಿವಾಟುಗಳು ಬಹಳಷ್ಟು ಹೆಚ್ಚುತ್ತಿದೆ. 2023 ರ ಕೊನೆಯ ತಿಂಗಳಿನಲ್ಲಿಯೂ ಯುಪಿಐ ವಹಿವಾಟುಗಳಲ್ಲಿ (UPI Transactions) ದಾಖಲೆಯ ಮಟ್ಟ ಏರಿದೆ.ಈ ಹಿಂದೆ ಹೆಚ್ಚಾಗಿ ಬಳಕೆಯಾಗುತ್ತಿದ್ದ ಡೆಬಿಟ್ ಕಾರ್ಡ್‌ಗಳ (Debit Card) ಬಳಕೆ ಕ್ಷೀಣಿಸುತ್ತಿದ್ದು ಇದೀಗ ಯುಪಿಐ ಬಳಕೆಯೇ ಹೆಚ್ಚಾಗಿದೆ.

ಇದೀಗ UPI ಹೊಸ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಬಳಕೆ ಹೆಚ್ಚಾದಂತೆ ಸಮಯಕ್ಕೆ ತಕ್ಕಂತೆ ನಿಯಮಗಳಲ್ಲಿಯು ನಿರಂತರ ಬದಲಾವಣೆ ಆಗುತ್ತ ಇರುತ್ತದೆ.

ವಹಿವಾಟಿನ ಮಿತಿ ಹೆಚ್ಚಳ:

ಇದೀಗ ವಹಿವಾಟಿನ ಮಿತಿಯನ್ನು ಹೆಚ್ಚಿಸುವ ಕುರಿತು ಸಹ ಬದಲಾವಣೆಯನ್ನು ಮಾಡಲಾಗಿದೆ. ಹೌದು ಇದೀಗ ನೀವು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ 5 ಲಕ್ಷದವರೆಗೆ ಪಾವತಿ ಮಾಡಲು ಸಹ ಅವಕಾಶ ಇದೆ. ಆದರೆ ಮೊದಲು ಈ ಮಿತಿ 1 ಲಕ್ಷದವರೆಗೆ ಮಾತ್ರ ಇತ್ತು. ಇದೀಗ ಈ ಮಿತಿ ಹೆಚ್ಚಳ ದಿಂದಾಗಿ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದಂತಾಗಿದೆ.

advertisement

QR Code ಬಳಸಲು ಅವಕಾಶ:

 

 

ಅದೇ ರೀತಿ QR Code ಸಹಾಯದಿಂದ ATM ನಿಂದ ಹಣವನ್ನು ಹಿಂಪಡೆಯಲು ಅವಕಾಶ ಕೂಡ ಇನ್ಮುಂದೆ ಇರಲಿದೆ. ಸದ್ಯ ನೀವು QR Code ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ATM ಯಂತ್ರದ ಸಹಾಯದಿಂದ ಹಣವನ್ನು ಪಡೆಯುವ ಸೌಲಭ್ಯ ಹೊಂದಲಿದ್ದೀರಿ.ಎಟಿಎಂಗಳಲ್ಲಿ QR Code Scan ಮಾಡಿ ಹಣವನ್ನು ವಿತ್​ಡ್ರಾ ಮಾಡುವ ಸೌಲಭ್ಯವನ್ನ ದೇಶಾದ್ಯಂತ ಹಲವು ಎಟಿಎಂಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದೆ.

ಈ ನಿಯಮ ಅಗತ್ಯ ಇಲ್ಲ:

ಅದೇ‌ ರೀತಿ ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಸಹಕಾರಿಯಾಗಿರುವ UPI ಅನ್ನು National Payments Corporation ಅಭಿವೃದ್ಧಿಪಡಿಸಿದೆ. ಇನ್ನು ಮುಂದೆ 1 ಲಕ್ಷದವರೆಗಿನ ಯುಪಿಐ ಪಾವತಿಗಳಿಗೆ (UPI Payments) ಅಡಿಷನಲ್​ ಫ್ಯಾಕ್ಟರ್​ ಅಥೆಂಟಿಫಿಕೇಶ್ ಬೇಕಾಗಿಲ್ಲ ಎಂದು RBI ಇತ್ತೀಚೆಗೆ ಘೋಷಣೆ ಮಾಡಿದೆ.

advertisement

Leave A Reply

Your email address will not be published.