Karnataka Times
Trending Stories, Viral News, Gossips & Everything in Kannada

CrossOver GX250: 111KM ಮೈಲೇಜ್ ಹಾಗೂ ಕೆಲವೇ ಸೆಕೆಂಡುಗಳಲ್ಲಿ ಚಾರ್ಜಿಂಗ್ ಬ್ಯಾಟರಿ ಬದಲಾಯಿಸಬಲ್ಲ EV ಸ್ಕೂಟರ್ ಬಿಡುಗಡೆ.

advertisement

ಇತ್ತೀಚೆಗಿನ ದಿನಗಳಲ್ಲಿ ವಾಹನ ಪ್ರಿಯರ ಅಭಿರುಚಿಗೆ ತಕ್ಕಂತೆ ವಾಹನ ತಯಾರಕ ಕಂಪೆನಿಗಳು ಇವಿ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಡಿಸೆಂಬರ್ 12 ರಂದು ಗೊಗೊರೊ ಕಂಪೆನಿ (Gogoro Company) ಯೂ ಬ್ಯಾಟರಿ ಸ್ವಾಪಿಂಗ್ ಇಕೊ ಸಿಸ್ಟಮ್  (Battery Swapping Eco System) ಮತ್ತು ಸ್ಮಾರ್ಟ್‌ಸ್ಕೂಟರ್ ಆದ ಕ್ರಾಸ್‌ಓವರ್ GX250 (CrossOver GX250) ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಗೊಗೊರೋದ (Gogoro) ಮೊದಲ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆಗಳು ಹಾಗೂ ಬೆಲೆಯ ಕುರಿತಾದ ಮಾಹಿತಿಗಾಗಿ ಈ ಲೇಖನವನ್ನು ಓದಿ.

ಕ್ರಾಸ್‌ಓವರ್ ಸರಣಿಗಳು ಗ್ರಾಹಕರಿಗೆ ಯಾವಾಗ ಲಭ್ಯ

ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಸ್‌ಓವರ್ GX250, ಕ್ರಾಸ್‌ಓವರ್ 50 ಮತ್ತು ಕ್ರಾಸ್‌ಓವರ್ S ಎಂಬ ಮೂರು ಮಾದರಿಗಳನ್ನು ನೀಡಲಾಗುತ್ತಿದೆ. ಈ ಕ್ರಾಸ್‌ಓವರ್ ಸರಣಿಯನ್ನು ಆಲ್-ಟೆರೈನ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದ್ದು, ಗ್ರಾಹಕರಿಗೆ ಇಷ್ಟವಾಗುವುದರಲ್ಲಿ ಯಾವುದೇ ಡೌಟ್ ಇಲ್ಲ. ಆದರೆ ಗ್ರಾಹಕರಿಗೆ ಕ್ರಾಸ್‌ಓವರ್ GX250 ತಕ್ಷಣವೇ ಲಭ್ಯವಿರಲಿದ್ದು, 2024ರ ನಂತರದಲ್ಲಿ ಕ್ರಾಸ್‌ಓವರ್ 50 ಹಾಗೂ ಕ್ರಾಸ್‌ಓವರ್ S ಶಿಪ್ಪಿಂಗ್‌ನೊಂದಿಗೆ ಗ್ರಾಹಕರಿಗೆ ಲಭ್ಯವಿರಲಿದೆ. ಆದರೆ ಆರಂಭದಲ್ಲಿಯೇ ಹೊಸ ಕ್ರಾಸ್‌ ಓವರ್ ಸ್ಕೂಟರ್ ದೆಹಲಿ ಮತ್ತು ಗೋವಾದಲ್ಲಿ B2B ಗ್ರಾಹಕರಿಗೆ ಸಿಗಲಿದೆ. ಉಳಿದಂತೆ ಮುಂಬೈ ಮತ್ತು ಪುಣೆಯಲ್ಲಿ 2024 ರ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ತರಲು ನಿರ್ಧಾರ ಮಾಡಿದೆ.

advertisement

ಕ್ರಾಸ್‌ಓವರ್ GX250 (CrossOver GX250)ವಿಶೇಷತೆಗಳೇನು

ಕ್ರಾಸ್‌ಓವರ್ GX250, ಗೊಗೊರೊ ಅವರ ಮೊದಲ ಭಾರತ-ನಿರ್ಮಿತ ಸ್ಮಾರ್ಟ್‌ಸ್ಕೂಟರ್ ಗಳಲ್ಲಿ ಒಂದಾಗಿದ್ದು ಎಲ್ಲಾ ರೀತಿಯ ರಸ್ತೆಗಳಿಗೂ ಹೊಂದಿಕೊಳ್ಳುತ್ತವೆ. ಈ ಇವಿಯಲ್ಲಿ 176mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಅದಲ್ಲದೇ ಹೆಡ್‌ಲೈಟ್, ಕಾಲುಗಳು ಇಡಲು ಜಾಗ, ಆಸನ ಮತ್ತು ಹಿಂಭಾಗದ ಸರಕು ಸ್ಥಳವನ್ನು ಒಳಗೊಂಡಿದ್ದು, ಹೆಚ್ಚು ಸ್ಥಳವಕಾಶವನ್ನು ಕಾಣಬಹುದು. ವಾಹನ ಸವಾರನು ಹೆಚ್ಚಿನ ಸರಕನ್ನು ಸಾಗಿಸಲು, ಬೇಕಾದರೆ ಹಿಂದಿನ ಸೀಟನ್ನು ಮಡಚುವ ಅಥವಾ ತೆಗೆಯುವ ಅವಕಾಶವು ಇದೆ. ಹೀಗೆ ಸರಕುಗಳನ್ನು ಇಡಲು ಹೆಚ್ಚು ಸ್ಥಳವನ್ನು ಮಾಡಿಕೊಳ್ಳಬಹುದಾಗಿದೆ. ಈ ಕ್ರಾಸ್‌ಓವರ್ GX250 2.5 kW ಡೈರೆಕ್ಟ್ ಡ್ರೈವ್ ಅನ್ನು ಹೊಂದಿದ್ದು, ಇದು 60 ಕಿ.ಮೀ ಗಿಂತ ಹೆಚ್ಚಿನ ಗರಿಷ್ಠ ವೇಗ ಮತ್ತು 111km ಪ್ರಮಾಣೀಕೃತ ರೇಂಜ್ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೆ, ಕೆಲವೇ ಸೆಕೆಂಡ್‌ಗಳಲ್ಲಿ ಬ್ಯಾಟರಿಗಳನ್ನು ಬದಲಿಸಿಕೊಂಡು ರೇಂಜ್ ಬಗ್ಗೆ ಯಾವುದೇ ಟೆನ್ಶನ್ ಯಿಲ್ಲದೇ ಈ ಇವಿಯನ್ನು ಓಡಿಸಬಹುದು.

advertisement

Leave A Reply

Your email address will not be published.