Karnataka Times
Trending Stories, Viral News, Gossips & Everything in Kannada

Renault Car: ರೆನಾಲ್ಟ್ ಕಂಪನಿಯ 3 ಕಾರಿನ ಮೇಲೆ ಭರ್ಜರಿ 65,000 ರೂಪಾಯಿ ವರೆಗೂ ಡಿಸ್ಕೌಂಟ್, ಈ ದಿನದವರೆಗೆ ಮಾತ್ರ ಅವಕಾಶ!

advertisement

ಈಗಂತೂ ವರ್ಷಾಂತ್ಯವಾಗುತ್ತಿದೆ. ಹೊಸ ವರ್ಷ ಆಗಮನ ಆಗುವ ಜೊತೆ ಜೊತೆಗೆನೇ ಹಳೇ ವರ್ಷ ಕೂಡ ಕಳೆದುಹೋಗುತ್ತಿದೆ‌. ಹಾಗಾಗಿ ಹೊಸ ವರ್ಷಕ್ಕೆ ಹೊಸ ಕಾರು ಖರೀದಿ ಮಾಡಬೇಕು ಎಂದು ಕಾಯೋರಿಗೆ ನಾವಿಂದು ನೀಡುವ ಸುದ್ದಿ ಬಹಳ ಉಪಯುಕ್ತ ಆಗಲಿದೆ. ರೆನಾಲ್ಟ್ ಇಂಡಿಯಾವು ತನ್ನ ಕಾರಿನ ಮೇಲೆ ಅಧಿಕ ಆಫರ್ ನೀಡುತ್ತಲಿದ್ದು ಗ್ರಾಹಕರ ಮನಗೆಲ್ಲ ಹೊರಟಿದೆ.

ಭಾರತದಲ್ಲಿ ಪ್ರಬಲ ಕಾರು ಕಂಪೆನಿಯಲ್ಲಿ ಮಾನ್ಯತೆ ಪಡೆದ ರೆನಾಲ್ಟ್‌ ಕಾರು ಗ್ರಾಹಕರ ಮನವನ್ನು ಈಗಾಗಲೇ ಬಹಳ ಸೆಳೆಯುತ್ತಿದೆ. ರೆನಾಲ್ಟ್‌ ಕಂಪೆನಿಯಲ್ಲಿ ತಮ್ಮ ವಾಹನದ ಮೇಲೆ ಸ್ಕ್ರ್ಯಾಪೇಜ್ ಯೋಜನೆಯನ್ನು ಪಡೆಯಲು ಕೆಲ ನೀತಿ ರೂಪಿಸಲಾಗುತ್ತಿದೆ. ಹಾಗಾಗಿ ಗ್ರಾಹಕ ಸ್ನೇಹಿ, ಪರಿಸರ ಸ್ನೇಹಿ ನೆಲೆಯಲ್ಲಿ ಸಹ ಅನುಕೂಲಕರ ಆಗಿದೆ. ಸ್ಟಾಕ್ ಲಭ್ಯತೆ ಆಧಾರದ ಮೇಲೆ ರಿಯಾಯಿತಿ ಕೂಡ ವಿಭಿನ್ನವಾಗಲಿದೆ.

ರೆನಾಲ್ಟ್ ಕಿಗರ್ (Renault Kiger)

 • ರೆನಾಲ್ಟ್‌ ಕಿಗರ್ ಕಾರು ಕಾಂಪ್ಯಾಕ್ಟ್ SUV ನಲ್ಲಿ ಬಹಳ ಮಾನ್ಯತೆ ಪಡೆಯುತ್ತಲಿದ್ದು ಅನೇಕ ವಿಧವಾದ ಫೀಚರ್ಸ್ ಹೊಂದಿದೆ.
 • ಈ ಒಂದು ನಾಲ್ಕು ಮೀಟರ್ ವಾಹನವು 1.0ಲೀಟರ್ ಇಂಜಿನ್ ಆಯ್ಕೆ ನಿಮಗೆ ನೀಡಲಿದೆ.
 • ಟರ್ಬೋ , ಪೆಟ್ರೋಲ್ ಎರಡು ಇಂಜಿನ್ ಗಳನ್ನು ಹೊಂದಿದೆ.
 • 5ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿದೆ.
 • ನೈಸರ್ಗಿಕ ಪೆಟ್ರೋಲ್ ಗೆ AMT ಆಯ್ಕೆ, ಟರ್ಬೋ ಪೆಟ್ರೋಲ್ CVT ಆಯ್ಕೆ ಇದರಲ್ಲಿ ಇರಲಿದೆ.
 • ರೆನಾಲ್ಟ್ ಕಿಗರ್ ನಲ್ಲಿ 65,000 ದ ವರೆಗೆ ರಿಯಾಯಿತಿ ಸಿಗಲಿದೆ. RXZ ರೂಪಾಂತರದ ಮೇಲೆ 20,000ದ ವರೆಗೆ ರಿಯಾಯಿತಿ ಸಿಗಲಿದೆ. 12,000 ರದವರೆಗೆ ವಿಶೇಷ ಕಾರ್ಪೋರೆಟ್ ಪ್ರಯೋಜನ ಸಿಗಲಿದೆ. 6.5ಲಕ್ಷ ರೂಪಾಯಿಗೆ ಈ ಕಾರು ಲಭ್ಯವಾಗಲಿದೆ.

advertisement

ರೆನಾಲ್ಟ್‌ ಟ್ರೈಬರ್ (Renault Triber)

 • ಇದರಲ್ಲಿ ಏಳು ಆಸನದ ಅತ್ಯುತ್ತಮ ಆಯ್ಕೆ ಇದರಲ್ಲಿ ಇರಲಿದೆ.
 • ಡಿಸೆಂಬರ್ ಅಂತ್ಯದ ವೇಳೆಗೆ ಈ ಕಾರಿನ ಮೇಲೆ 50,000ದ ವರೆಗೆ ವಿಶೇಷ ರಿಯಾಯಿತಿ ಸಿಗಲಿದೆ. 20ಸಾವಿರದ ವರೆಗೆ ವಿನಿಮಯ ಪ್ರಯೋಜನ ಸಿಗಲಿದೆ. 12ಸಾವಿರದ ವರೆಗೆ ಕಾರ್ಪೋರೆಟ್ ವಿನಾಯಿತಿ ಸಿಗಲಿದೆ.
 • 72hp ಹಾಗೂ 96NM ಟಾರ್ಕ್ ಉತ್ಪಾದನೆ ಮಾಡಲಿದೆ.
 • 5ಸ್ಪೀಡ್ ಮ್ಯಾನುವಲ್ ಇರಲಿದ್ದು ನಗರ ವಾಸಿಗಳಿಗೆ ಈ ವಿಧಾನ ಬಹಳ ಅನುಕೂಲ ಆಗಲಿದೆ.
 • ಇದರ ಬೆಲೆಯೂ 6.34ಲಕ್ಷ ದಿಂದ ಆರಂಭ ಆಗಲಿದೆ.

ರೆನಾಲ್ಟ್‌ ಕ್ವಿಡ್ (Renault Kwid)

 • ಈ ಒಂದು ಕಾರು 50,000ರೂಪಾಯಿ ವರೆಗೆ ರಿಯಾಯಿತಿ ಹೊಂದಲಿದೆ.
 • 61HP ಹಾಗೂ 91NM ಟಾರ್ಕ್ ಉತ್ಪಾದಿಸಲಿದೆ.
 • 5ಸ್ಪೀಡ್ ಮ್ಯಾನುವಲ್ ಇರಲಿದೆ.
 • ಅತ್ಯಾಕರ್ಷಕ ಫೀಚರ್ಸ್ ಹಾಗೂ ರಕ್ಷಣಾ ವಿಚಾರದಲ್ಲಿ ಮುಖ್ಯ ಕಾರ್ಯ ನಿರ್ವಹಿಸಲಿದೆ.
 • ರೆನಾಲ್ಟ್‌ನ ಈ ಕಾರಿನಲ್ಲಿ ಕಾರ್ಪೋರೆಟ್ ಕಾರ್ಪೋರೆಟ್ ಮೌಲ್ಯದಲ್ಲಿ 12000ದ ವರೆಗೆ ವಿಶೇಷ ರಿಯಾಯಿತಿ ಸಿಗಲಿದೆ.
 • ಸುಜುಕಿ‌ ಮತ್ತು ಟಾಟಾ ಗೆ ಪ್ರತಿಸ್ಪರ್ಧಿಯಾಗಿ ಇದರ ಬೆಲೆ‌ 4.7ಲಕ್ಷ ರೂಪಾಯಿ ವರೆಗೆ ಇರಲಿದೆ.

advertisement

Leave A Reply

Your email address will not be published.