Karnataka Times
Trending Stories, Viral News, Gossips & Everything in Kannada

Safe Investment: ಈ 3 ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ದುಪ್ಪಟ್ಟಾಗುತ್ತೆ!

advertisement

ಸಾಮಾನ್ಯವಾಗಿ ದುಡಿಯುವ ಎಲ್ಲರೂ ಕೂಡ ತಮ್ಮ ಭವಿಷ್ಯದ ದೃಷ್ಟಿಯಿಂದ ಒಂದಲ್ಲ ಒಂದು ರೀತಿಯಲ್ಲಿ ಹೂಡಿಕೆ ಮಾಡಿ ಹಣ ಉಳಿತಾಯ ಮಾಡಲು ಬಯಸುತ್ತಾರೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆಯಾದರೂ ಇದರಲ್ಲಿ ಮಾರುಕಟ್ಟೆ ಅಪಾಯ ಜಾಸ್ತಿ. ಹಾಗಾಗಿ ಎಲ್ಲರೂ ಈ ಅಪಾಯವನ್ನು ಎದುರಿಸಿ ಹೂಡಿಕೆ ಮಾಡಲು ಸಿದ್ಧರಿರುವುದಿಲ್ಲ. ಅಂತವರಿಗಾಗಿಯೇ ಕೆಲವು ಸರ್ಕಾರಿ ಯೋಜನೆಗಳು (Govt Schemes) ಕೂಡ ಲಭ್ಯವಿದ್ದು ಆ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮವಾದ ಲಾಭ ಸಿಗುತ್ತದೆ. ಜೊತೆಗೆ ಯಾವುದೇ ಮಾರುಕಟ್ಟೆ ಅಪಾಯದ ಭಯವು ಇರುವುದಿಲ್ಲ. ಅಂತಹ ಪ್ರಮುಖವಾದ ಹೂಡಿಕೆ ಯೋಜನೆಗಳ ಬಗ್ಗೆ ಇಲ್ಲಿದೆ ವಿವರ.

Kisan Vikas Patra:

 

 

ಈ ಯೋಜನೆಯ ಅಡಿಯಲ್ಲಿ ಕೋಟ್ಯಾಂತರ ಜನ ಹೂಡಿಕೆ ಮಾಡಿದ್ದಾರೆ. ಅಂಚೆ ಕಚೇರಿ (Post Office) ಯಲ್ಲಿ ಕಿಸಾನ್ ವಿಕಾಸ ಪತ್ರ ಯೋಜನೆಯನ್ನು ಆರಂಭಿಸಬಹುದು. ಇದರಲ್ಲಿ ಹೂಡಿಕೆ ಮಾಡುವವರಿಗೆ ಶೇಕಡ 7.5% ನಷ್ಟು ಬಡ್ಡಿ ನೀಡಲಾಗುವುದು. ಕಿಸಾನ್ ವಿಕಾಸ ಪತ್ರ ಯೋಜನೆ (Kisan Vikas Patra Yojana) ಯಲ್ಲಿ ಕನಿಷ್ಠ ಸಾವಿರ ರೂಪಾಯಿ ನಿಂದ ಹೂಡಿಕೆ ಆರಂಭವಾಗುತ್ತದೆ ಗರಿಷ್ಠ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಬಹುದು.

ಕಿಸಾನ್ ವಿಕಾಸ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣ ದ್ವಿಗುಣಗೊಳ್ಳಲು 9 ವರ್ಷದ ಒಂದು ತಿಂಗಳ ಅವಧಿ ಬೇಕು. ಉದಾಹರಣೆಗೆ ನೀವು ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 115 ತಿಂಗಳುಗಳಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು.

Public Provident Fund:

 

advertisement

 

ಪಿ ಪಿ ಎಫ್ ಹೂಡಿಕೆ (PPF Fund) ಅತ್ಯಂತ ಭದ್ರತೆಯನ್ನು ನೀಡುವ ಯೋಜನೆಯಾಗಿದೆ. ಹಣ ದುಪ್ಪಟ್ಟಾಗಲು 15 ವರ್ಷಗಳ ಅವಧಿ ಬೇಕು. 15 ವರ್ಷಗಳ ಮೆಚ್ಯುರಿಟಿ ಅವಧಿಯ ನಂತರ ಮತ್ತೆ ಐದು ವರ್ಷಗಳ ಕಾಲ ನೀವು ಯೋಜನೆಯನ್ನು ಮುಂದುವರಿಸಬಹುದು. PPF ನಲ್ಲಿ ವಾರ್ಷಿಕವಾಗಿ 1.5 ಲಕ್ಷ ಹೂಡಿಕೆ ಮಾಡಿದರೆ ಸಿಗುವ ಬಡ್ಡಿ 7.1% ನಷ್ಟು. ನೀವು ಮಾಸಿಕವಾಗಿ ಡಿವೈಡ್ ಮಾಡಿಕೊಂಡು ಒಂದು ಪಾಯಿಂಟ್ ಐದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ಅವಕಾಶವಿದೆ.

ಉದಾಹರಣೆಗೆ ಈ ಯೋಜನೆಯಲ್ಲಿ ನೀವು ವರ್ಷಕ್ಕೆ ರೂ.10,000 ಹೂಡಿಕೆ ಮಾಡುತ್ತೀರಿ ಎಂದಾದರೆ 15 ವರ್ಷಗಳಲ್ಲಿ 1,50,000 ಠೇವಣಿ ಆಗುತ್ತದೆ. ಅದಕ್ಕೆ 1,21,214 ಬಡ್ಡಿ ಪಡೆಯಬಹುದು. ಅಲ್ಲಿಗೆ ಈ ಯೋಜನೆಯ ಮೆಚ್ಚುರಿಟಿ ಹಂತದಲ್ಲಿ ನಿಮಗೆ 2.71 ಲಕ್ಷ ರೂಪಾಯಿಗಳು ಸಿಗುತ್ತವೆ.

Post Office Time Deposit:

 

 

ಅಂಚೆ ಕಚೇರಿ (Post Office) ಯಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳನ್ನು ಪರಿಚಯಿಸಲಾಗಿದ್ದು, ಹೆಚ್ಚು ಬಡ್ಡಿ ದರವನ್ನು ಕೂಡ ನೀವು ನಿಮ್ಮ ಠೇವಣಿಯ ಮೇಲೆ ಪಡೆಯಬಹುದು. ಅಂಚೆ ಕಚೇರಿಯ ಒಂದು ಉತ್ತಮ ಹಣ ಗುಣಗಳಿಸಿಕೊಳ್ಳುವಂತಹ ಯೋಜನೆ ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆ (Post Office Time Deposit). ಹೂಡಿಕೆ ಮಾಡುವವರಿಗೆ 7.5% ನಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ನೀವು ಒಂದು ವರ್ಷಕ್ಕೆ 5 ಲಕ್ಷ ಹೂಡಿಕೆ ಮಾಡಿದ್ದೀರಿ ಎಂದಾದರೆ ಐದು ವರ್ಷಗಳ ಮೆಚುರಿಟಿ ಅವಧಿಯಲ್ಲಿ 1,44,829 ರೂಪಾಯಿಗಳನ್ನು ಸಂಗ್ರಹಿಸುತ್ತೀರಿ. ಐದು ವರ್ಷಗಳ ವರೆಗೆ ಹೂಡಿಕೆ ಮುಂದುವರಿಸಿದರೆ, 7.5% ಬಡ್ಡಿ ದರದೊಂದಿಗೆ ಒಟ್ಟು 2,89,658 ರೂಪಾಯಿಗಳನ್ನು ಹಿಂಪಡೆಯಬಹುದು.

ಮೇಲಿನ ಮೂರು ಯೋಜನೆಗಳು ಅಪಾಯ ಮುಕ್ತ ಹೂಡಿಕೆ ಯೋಜನೆಗಳಾಗಿದ್ದು ಕೆಲವೇ ವರ್ಷಗಳಲ್ಲಿ ನೀವು ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತದೆ. ಈಗಿನಿಂದಲೇ ಹೂಡಿಕೆ ಆರಂಭಿಸಿ ಹಾಗೂ ಭವಿಷ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇಲ್ಲದೆ ಜೀವನ ನಡೆಸುವಂತೆ ನೋಡಿಕೊಳ್ಳಿ.

advertisement

Leave A Reply

Your email address will not be published.