Karnataka Times
Trending Stories, Viral News, Gossips & Everything in Kannada

Krishi Sinchai Scheme: ಹೆಚ್ಚಿನ ಇಳುವರಿಗಾಗಿ ರೈತರಿಗೆ ಸಿಗಲಿದೆ ಸಹಾಯಧನ, ಈ ರೀತಿಯಾಗಿ ಪಡೆದುಕೊಳ್ಳಿ.

advertisement

ಇಂದು ನಮ್ಮ ದೇಶ ಅಭಿವೃದ್ಧಿ ಯಾಗಬೇಕದರೆ ರೈತರ ಅಭಿವೃದ್ಧಿ ಸಹ ಅಷ್ಟೆ ಮುಖ್ಯವಾಗುತ್ತದೆ.‌ ರೈತರು ಆರ್ಥಿಕವಾಗಿ ಸಬಲರಾದರೆ ಮಾತ್ರ ದೇಶದ ಜನರು ಸದೃಢ ವಾಗಿ ಇರಲು ಸಾಧ್ಯ. ರೈತರಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಚ್ಚಿನ ಸೌಲಭ್ಯ ವನ್ನು ಜಾರಿಗೆ ತರುತ್ತಲೆ ಇದೆ. ಮೊನ್ನೆಯಷ್ಟೆ ಮುಖ್ಯ ಮಂತ್ರಿಗಳು ಬೆಳೆ ನಷ್ಟ ಪರಿಹಾರದ ಮೊತ್ತವನ್ನು ಜಮೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ರೈತರು ಕೃಷಿಯಲ್ಲಿ ಹೆಚ್ಚಿನ‌ ಇಳುವರಿ ಕಾಣ ಬೇಕಾದರೆ ನೀರಿನ ಅವಶ್ಯಕತೆ ಹೆಚ್ಚು ಇದೆ.‌ ಇದಕ್ಕಾಗಿ ರೈತರಿಗೆ ಹನಿ ನೀರಾವರಿ ಘಟಕ ನಿರ್ಮಾಣಕ್ಕಾಗಿ ಕೃಷಿ ಸಿಂಚಾಯಿ ಯೋಜನೆ (Krishi Sinchai Scheme) ಯನ್ನು ಜಾರಿಗೆ ತರಲಾಗಿದೆ.

ಸಹಾಯಧನ ದೊರೆಯುತ್ತದೆ:

ಕೇಂದ್ರ ಸರ್ಕಾರ ಯೊಜನೆಯ ಅನ್ವಯ ಎಲ್ಲಾ ವರ್ಗದ ರೈತರಿಗೆ 5 ಹೆಕ್ಟೇರ್ ಕೃಷಿ ಜಾಗ ಇದ್ದರೆ ಸಹಾಯಧನ ನೀಡುತ್ತದೆ.‌ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ 2 ಹೆಕ್ಟೇರ್ ಪ್ರದೇಶಕ್ಕೆ ಶೇ.90ರ ಸಹಾಯಧನ (Subsidy) ಹಾಗೂ ಇತರೆ ರೈತರಿಗೆ ಶೇ.75ರ ಸಹಾಯಧನವನ್ನು ನೀಡುತ್ತದೆ. ಒಂದುವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ರೈತರು ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ‌ ಕಂದಾಯ ಇಲಾಖೆಯಿಂದ RD Number ಇರುವಂತಹ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ.

Krishi Sinchai Scheme:

 

advertisement

 

ಈ ಯೋಜನೆ ಮೂಲಕ ರೈತರಿಗೆ ನೀರಿನ ಸಮಸ್ಯೆ ಯಾಗದಂತೆ ನೋಡಿಕೊಳ್ಳಲು ರೈತರಿಗಾಗಿ ಐವತ್ತು ಸಾವಿರ ಕೋಟಿ ರೂ. ಸ್ಪ್ರಿಂಕ್ಲರ್ ವಿಧಾನದ ನೀರಾವರಿಗೆ ಸರಕಾರ ಸುಮಾರು 80 ರಿಂದ 90 ರಷ್ಟು ಸಹಾಯಧನ ನೀಡುತ್ತದೆ. ಗುತ್ತಿಗೆ ಆದಾರದ ಮೂಲಕ ಬೇಸಾಯ ಮಾಡುವ ರೈತರೂ, ಈ ಯೋಜನೆಯ ಲಾಭ ಪಡೆಯಲು ಅವಕಾಶ ಇದೆ.ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಕೊಳ್ಳಲು pmksy.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.

ಅರ್ಜಿ ಹಾಕಬಹುದು:

ಇದೀಗ ರೈತರಿಗೆ ಹನಿ ನೀರಾವರಿ ಘಟಕ ನಿರ್ಮಾಣಕ್ಕಾಗಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಬಹುದಾಗಿದೆ. ರೈತರು ಈ ಯೋಜನೆಗೆ ಬೇಕಾದ ಅಗತ್ಯ ದಾಖಲಾತಿಗಳೊಂದಿಗೆ ತೋಟಗಾರಿಕೆ ಇಲಾಖೆಗೆ ನೀಡಬೇಕು. ಈ ಬಗ್ಗೆ ಏನಾದರೂ ಮಾಹಿತಿ ಬೇಕಾದ್ದಲ್ಲಿ ತೋಟಗಾರಿಕೆ ಅಧಿಕಾರಿಗಳು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು.

advertisement

Leave A Reply

Your email address will not be published.