Karnataka Times
Trending Stories, Viral News, Gossips & Everything in Kannada

Home Loan: ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಗೃಹಸಾಲ ನೀಡುವ ಪ್ರತಿಷ್ಠಿತ ಬ್ಯಾಂಕುಗಳು ಯಾವುದು ಗೊತ್ತಾ?

advertisement

ಹಣವನ್ನು ಉಳಿತಾಯ ಮಾಡುವುದು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಹಾಗಾಗಿ ಅನೇಕ ವಿಧವಾದ ಉಳಿತಾಯ ಯೋಜನೆಯನ್ನು ಪ್ರೋತ್ಸಾಹ ಮಾಡುತ್ತಲೇ ಬರಲಾಗುತ್ತಿದೆ. ಈ ಮೂಲಕ ಶಿಕ್ಷಣ, ಆರೋಗ್ಯ, ಮನೆ, ಕಟ್ಟಡ ಎಂಬ ಅನೇಕ ಕಾರಣಕ್ಕೆ ಸಾಲ ಮಾಡುವವರು ಇದ್ದಾರೆ ಅದರಲ್ಲೂ ಗೃಹಸಾಲ ಮಾತ್ರ ಅನೇಕ ಬ್ಯಾಂಕುಗಳು ವೈಪರಿತ್ಯದ ಬಡ್ಡಿದರ ಅನುಸರಿಸುವ ಮೂಲಕ ವಿಧಿಸಲಾಗುವುದು. ಹಾಗಾದರೆ ಗೃಹಸಾಲ (Home Loan) ವಿಚಾರದಲ್ಲಿ ಯಾವ ಬ್ಯಾಂಕು ಯಾವ ರೀತಿ ಕಾರ್ಯ ನಿರ್ವಹಿಸಲಿದೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಎಷ್ಟು ಬಡ್ಡಿ ಅನ್ವಯವಾಗಲಿದೆ ಎಂಬ ಇತ್ಯಾದಿ ಮಾಹಿತಿಯನ್ನು ನಾವಿಂದು ನೀಡಲಿದ್ದೇವೆ.

SBI Bank:

 

 

SBI ಬ್ಯಾಂಕಿನಲ್ಲಿ ಗೃಹಸಾಲ (Home Loan) ಎನ್ನುವುದು ಅರ್ಜಿ ಸಲ್ಲಿಸಿದ್ದವರ ಕ್ರೆಡಿಟ್ ಸ್ಕೊರ್ ಆಧಾರದ ಮೇಲೆ 8.6 ಪ್ರತಿ ಶತ ಹಾಗೂ 9.65ಪ್ರತಿಶತದಷ್ಟು ಬದಲಾಗುವ ಬಡ್ಡಿದರವನ್ನು ಇಲ್ಲಿ ವಿಧಿಸಲಾಗುವುದು. 750 ರಷ್ಟು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ ಪಡೆಯುವವರಿಗೆ ಶೀಘ್ರ ಸಾಲ ಮತ್ತು ಬಡ್ಡಿ ಕಡಿಮೆ ವಿಧಿಸುವ ಸಾಧ್ಯತೆ ಕೂಡ ಇದೆ. 700 ಮತ್ತು 749ರ ನಡುವಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರನಿಗೆ 8.7% ಬಡ್ಡಿದರದಲ್ಲಿ ಸಾಲ ನೀಡಲಾಗುವುದು. 650ರಿಂದ 699ರ ವ್ಯಾಪ್ತಿಯಲ್ಲಿ 9.45% ಬಡ್ಡಿದರದಲ್ಲಿ ಸಾಲ ನೀಡಲಾಗುವುದು. 649 ರಿಂದ 550 ವ್ಯಾಪ್ತಿಯಲ್ಲಿ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ 9.65% ಬಡ್ಡಿದರದಲ್ಲಿ ಗೃಹಸಾಲ ಸಿಗಲಿದೆ. ಅಂದರೆ ಕ್ರೆಡಿಟ್ ಸ್ಕೋರ್ ಉತ್ತಮ ಇದ್ದಂತೆ ಬಡ್ಡಿ ದರದಲ್ಲೂ ಮಹಾ ಉಳಿತಾಯ ನಿಮಗೆ ಸಿಗುವುದು ಕಾಣಬಹುದು.

Bank of Baroda:

 

ಈ ಒಂದು ಬ್ಯಾಂಕಿನಲ್ಲಿ ಸಾಲದ ಮಿತಿ ಮತ್ತು Credit Score ಆಧಾರದ ಮೇಲೆ ಗೃಹಸಾಲ ನೀಡಲಾಗುವುದು. ಇಲ್ಲಿ 8.60% ನಿಂದ 10.60% ವರೆಗೆ ಗೃಹಸಾಲದ (Home Loan) ಮೇಲಿನ ಬಡ್ಡಿದರ ಕಾಣಬಹುದು. ಈ ಒಂದು ಬಡ್ಡಿದರವು ಉದ್ಯೋಗ ಪಡೆದು ಸಂಬಳ ಪಡೆದವರಿಗೆ ಹಾಗೂ ಪಡೆಯದೆ ಸ್ವ ಉದ್ಯೋಗ ಮಾಡುವವರಿಗೆ ಬೇರೆ ಬೇರೆ ಬಡ್ಡಿದರ ವಿಧಿಸಲಾಗುವುದು.

ICICI Bank:

 

advertisement

 

ಇಲ್ಲಿ ಕೂಡ Credit Score ಆಧಾರದ ಮೇಲೆ 9% ರಿಂದ 9.10% ದಷ್ಟು ಬಡ್ಡಿದರ ಸಾಲದ ಪ್ರಮಾಣಾಧಾರಿತ ಬದಲಾಗಲಿದೆ. 800 ಕ್ರೆಡಿಟ್ ಸ್ಕೋರ್ ಇದ್ದರೆ 9% ಬಡ್ಡಿದರ ವಿಧಿಸಲಾಗುವುದು. 750 ರಿಂದ 800 ಕ್ರೆಡಿಟ್ ಸ್ಕೋರ್ ಇದ್ದರೆ 9.10% ನಷ್ಟು ಬಡ್ಡಿದರ ವಿಧಿಸಲಾಗುವುದು.

HDFC Bank:

 

 

HDFC ಬ್ಯಾಂಕಿನ ಮೂಲಕ ವಿಶೇಷ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುವುದು. 8.50% ನಿಂದ 9.15% ಕ್ರೆಡಿಟ್ ಸ್ಕೋರ್ ಮೇಲೆ ಸಾಲ (Loan) ವಿಧಿಸಲಾಗುವುದು. ಇದು ಉದ್ಯೋಗಿ ಆಗಿದ್ದು ಕೆಲಸ ಮಾಡುವವರಾಗಿದ್ದರೆ ಕ್ರೆಡಿಟ್ ಸ್ಕೋರ್ ಅಧಿಕವಾಗಲಿದೆ.

Punjab National Bank:

 

 

ರಾಜ್ಯ ಸಾಲದಾತನು ಗೃಹಸಾಲ (Home Loan) ಗಳನ್ನು ವಾರ್ಷಿಕ 8.40 ರಿಂದ 10.10 ನಡುವಿನ ಬಡ್ಡಿಯಲ್ಲಿ ಗೃಹಸಾಲ ನೀಡಲಾಗಿದೆ. ಇಲ್ಲಿ ಕೂಡ ಸಾಲದ ಲಭ್ಯತೆ ಮತ್ತು Credit Score ಆಧಾರದ ಮೇಲೆ ಬಡ್ಡಿದರ ಹೆಚ್ಚು ಕಡಿಮೆ ಆಗಲಿದೆ ಎಂದು ಹೇಳಬಹುದು. ಒಟ್ಟಾರೆ ಈ ಎಲ್ಲ ಬ್ಯಾಂಕುಗಳು ಆಯಾ ಬ್ಯಾಂಕಿನ ಶ್ರೇಷ್ಠತೆ ಮತ್ತು ಸಾಮಾನ್ಯ ನಿಯಮದ ಆಧಾರದ ಮೇಲೆ ಬಡ್ಡಿದರ ವಿಧಿಸಲಾಗುವುದು.

advertisement

Leave A Reply

Your email address will not be published.