Karnataka Times
Trending Stories, Viral News, Gossips & Everything in Kannada

Govt Service: ಇನ್ಮುಂದೆ ಸರ್ಕಾರೀ ಸೌಲಭ್ಯ ಪಡೆಯಲು ಕಚೇರಿ ಅಲೆದಾಟುವಂತಿಲ್ಲ, ಇಂತವರಿಗೆ ಮನೆಯಲ್ಲಿ ಕುಳಿತಲ್ಲೇ ಆಗುತ್ತೆ ಎಲ್ಲ ಕೆಲಸ!

advertisement

ಸರಕಾರ ಪಂಚ ಯೋಜನೆ ಬಲಿಷ್ಟವಾಗಿ ಜಾರಿಗೆ ತರುವ ಜೊತೆಗೆ ಮಹಿಳೆಯರ, ಮಕ್ಕಳ, ಹಿರಿಯನಾಗರಿಕರ ಮತ್ತು ವಿಕಲಚೇತನರಿಗಾಗಿ ಕೂಡ ಪ್ರತ್ಯೇಕ ನೀತಿ ನಿರೂಪಣೆ ಜಾರಿಗೆ ತರುತ್ತಲಿದೆ. ಅದೇ ರೀತಿ ಇದೀಗ ಸರಕಾರಿ ಇಲಾಖೆಯ ಯೋಜನೆಯನ್ನು (Govt Schemes) ಸಮರ್ಪಕವಾಗಿ ಜಾರಿಗೆ ತರಲು ನೂತನ ಪರಿಕಲ್ಪನೆ ರೂಪಿಸಲಾಗಿದೆ. ವಿಕಲಚೇತನರು (Disabled People) ಹಾಗೂ ಹಿರಿಯ ನಾಗರಿಕರಿಗೆ (Senior Citizens) ನೆರವಾಗಬೇಕು ಎಂಬ ಉದ್ದೇಶದಿಂದಲೇ ವಿನೂತನ ಕ್ರಮ ಜಾರಿಗೆ ತರಲು ಮುಂದಾಗಿದ್ದು ಇದರಿಂದಾಗಿ ಅನೇಕ ಸೇವಾ ಸೌಲಭ್ಯ ಮನೆ ಬಾಗಿಲಿಗೆ ಬಂದು ತಲುಪಲಿದೆ.

ವಿನೂತನ ಪರಿಕಲ್ಪನೆ:

ಗ್ರಾಮೀಣ ಮಟ್ಟದಿಂದ ನಗರ ಮಟ್ಟದ ವರೆಗೆ ಮನೆ ಬಾಗಿಲಿಗೆ ಸರಕಾರಿ ಸೇವೆ (Govt Service) ಎಂಬ ಪರಿಕಲ್ಪನೆ ಆಧಾರಿತ ಸೇವೆಯನ್ನು ಗ್ರಾಮದ ವಯೋವೃದ್ಧರಿಗೆ ಮತ್ತು ವಿಕಲಚೇತನರಿಗೆ ಒದಗುವ ಸರಕಾರಿ ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪುವಂತೆ ಮಾಡಲಾಗುವುದು. ಹೀಗಾಗಿ ಸರಕಾರಿ ಪ್ರಯೋಜನ ಪಡೆಯಲು ಕಚೇರಿ ಅಲೆದಾಟ ಮತ್ತು ಇತರ ಸಮಸ್ಯೆಯಿಂದ ಜನರಿಗೆ ಉಪಯುಕ್ತ ಆಗಲೆಂಬ ಉದ್ದೇಶಕ್ಕಾಗಿ ಈ ಯೋಜನೆ ರೂಪುಗೊಂಡಿದೆ.

ಈ ಎಲ್ಲ ಸೇವೆಗಳು ವಿಕಲಚೇತನರಿಗೆ ಸಿಗಲಿದೆ:

advertisement

  • ವಿಕಲ ಚೇತನರ ಅಭಿವೃದ್ಧಿಗಾಗಿ ಗ್ರಾಮೀಣ ಮಟ್ಟದಲ್ಲಿ ಪಂಚಾಯತ್ ಸಹಯೋಗದ ಮುಖೇನ ಸಂಘದ ರಚನೆ ಮಾಡಿ ಉಳಿತಾಯ ಇತರ ಕೌಶಲ್ಯ ಅಭಿವೃದ್ಧಿ ಕಾರ್ಯಚಟುವಟಿಕೆ ಬಗ್ಗೆ ತರಬೇತಿ ನೀಡುವುದು.
  • ವಿಕಲಚೇತನರ ಗುರುತಿನ ಚೀಟಿ (Identity Card) ಯನ್ನು ಮನೆ ಬಾಗಿಲಿಗೆ ನೀಡುವ ವ್ಯವಸ್ಥೆ ಬರಲಿದೆ.
  • ಮನೋ ವೈಕಲ್ಯದ ಪ್ರಮಾಣದ ಆಧಾರದ ಮೇಲೆ ಪೋಷಣಾಭತ್ಯೆ ನೀಡಲಾಗುವುದು. 40-74% ವರೆಗೆ ಅಂಗವಿಕಲರಿಗೆ ಮಾಸಿಕ 800 ರೂ., 75%ಅಧಿಕ ಇದ್ದವರಿಗೆ 1,400, 80% ಅಧಿಕ ಮನೋವೈಕಲ್ಯ ಇದ್ದರೆ 2000 ರೂಪಾಯಿ ವರೆಗೆ ಪೋಷಣೆ ಭತ್ಯೆ ಸಿಗಲಿದ್ದು ಅದು ಕೂಡ ಡಿಜಿಟಲ್ ಪೇ (Digital Pay) ಮೂಲಕ ಮನೆ ಬಾಗಿಲಿಗೆ ಸೇವೆ ಸಿಗಲಿದೆ.
  • ಅಂಗವಿಕಲರ ಸಲಕರಣೆ ಗಾಲಿ ಕುರ್ಚಿ, ಕೃತಕ ಅಂಗಾಗ ಇತರ ಸೌಲಭ್ಯ ಸರಕಾರದಿಂದ ನೀಡಲ್ಪಟ್ಟರೆ ಮನೆ ಬಾಗಿಲಿಗೆ ಸೇವೆ ಸಿಗಲಿದೆ.
  • ಯಂತ್ರ ಚಾಲಿತ ದ್ವಿಚಕ್ರ ಸೇವಾ ಸೌಲಭ್ಯ ಅರ್ಹರಿಗೆ ನೀಡಲಾಗುವುದು.

 

 

  • ಸ್ವ ಉದ್ಯೋಗ ಮಾಡುವವರಿಗೆ ಒಂದು ಲಕ್ಷದ ವರೆಗೆ ಸಾಲ (Loan) ಸೌಲಭ್ಯ ಹಾಗೂ 50 ಸಾವಿರದ ವರೆಗೆ ಸಹಾಯಧನ ಸೌಲಭ್ಯ ಸಿಗಲಿದೆ.
  • ವಿಕಲ ಚೇತನರಿಗೆ ಎದ್ದೇಳಲು ಸಾಧ್ಯವೇ ಇಲ್ಲದ ಅಂಗವೈಕಲ್ಯ, ಬೆನ್ನುಹುರಿ ಸಮಸ್ಯೆ ಇದ್ದರೆ ಆಗ ಅವರಿಗೆ ಪರಿಹಾರ ಮೊತ್ತ ನೀಡಲಾಗುತ್ತಿದ್ದು ಅದನ್ನು ಮನೆ ಬಾಗಿಲಿಗೆ ತಲುಪುವಂತೆ ಯೋಜನೆ ರೂಪಿಸಲಾಗಿದೆ.
  • ವಿದ್ಯಾಭ್ಯಾಸಕ್ಕೆ ನೀಡಲಾಗುವ ಪ್ರೋತ್ಸಾಹಧನ ವಿದ್ಯಾರ್ಥಿ ವೇತನವನ್ನು ಕೂಡ ಶಾಲೆ(School), ಕಾಲೇಜು (Collage) ಅಥವಾ ಮನೆ ಬಾಗಿಲಿಗೆ ಸೇವೆ ನೀಡಲಾಗುವುದು. ಇದನ್ನು ಶೈಕ್ಷಣಿಕ ಅರ್ಹತೆ ಮೇಲೆ ಪ್ರೋತ್ಸಾಹಧನ ನೀಡಲಾಗುವುದು. SSLC 3000, PUC 5000, Degree 8000 ಹಾಗೂ Pg Course ಗೆ 10 ಸಾವಿರದವರೆಗೆ ನೀಡಲಾಗುವುದು.
  • ವಿಕಲಚೇತನರ ಮದುವೆ, ಅಂಧತ್ವ ಸೇರಿದಂತೆ ವಿವಿಧ ವಿಧವಾಗಿ ಪ್ರತ್ಯೇಕ ಸೇವೆ ಸಿಗಲಿದೆ.

ಹಿರಿಯ ನಾಗರಿಕರ ಸೇವೆ:

  • ಹಿರಿಯ ನಾಗರಿಕರಿಗೆ 60ವರ್ಷ ಮೇಲ್ಪಟ್ಟವರಿಗೆ ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಗುರುತು ಚೀಟಿ ನೀಡುವುದು.
  • ಹಿರಿಯ ನಾಗರಿಕರಿಗೆ ಕಿರಿಕಿರಿ ಇತ್ಯಾದಿ ಸಹಾಯಕ್ಕೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಮೂಲಕ ಆಸರೆ ಒದಗಿಸುವುದು.
  • ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಮೂಲಕ ಆರೋಗ್ಯ, ಆರ್ಥಿಕ, ಕೌಟುಂಬಿಕ ಮತ್ತು ಕಾನೂನಾತ್ಮಕ ಸೇವೆ ನೀಡಲಾಗುವುದು.
  • ಅವರಿಗಾಗಿ ಹಗಲು ಯೋಗ ಕ್ಷೇಮ ಕೇಂದ್ರ ಸ್ಥಾಪನೆ.
  • ವೃದ್ಧಾಪ್ಯ ಪಿಂಚಣಿ ಸೇವೆ ಮನೆಬಾಗಿಲಿಗೆ ತಲುಪುವಂತೆ ಮಾಡಲಾಗುವುದು. ಈ ಎಲ್ಲ ಸೌಲಭ್ಯ ಇನ್ನು ಮುಂದೆ ಮನೆ ಬಾಗಿಲಿಗೆ ಸರಕಾರಿ ಸೇವೆ ಅಡಿಯಲ್ಲಿ ಸೇವೆಯನ್ನು ಕ್ಲಪ್ತವಾಗಿ ಜಾರಿಗೆ ತರಲಾಗುವುದು.

advertisement

Leave A Reply

Your email address will not be published.