Karnataka Times
Trending Stories, Viral News, Gossips & Everything in Kannada

Hero Xtreme 125R: ಸದ್ದಿಲ್ಲದೆ ಬಿಡುಗಡೆ ಆಯ್ತು ಹೀರೋ ಸ್ಪೋರ್ಟಿ ಬೈಕ್; 66 km ಮೈಲೇಜ್ ಹಾಗೂ ಬೆಲೆ ಕೇವಲ 95,000ರೂಪಾಯಿ!

advertisement

ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಮೋಟೋ ಕಾರ್ಪ್ ನಿಜಕ್ಕೂ ಹೀರೋ ಎನಿಸಿಕೊಂಡಿದೆ. ಯಾಕಂದ್ರೆ ಒಂದಾದ ಮೇಲೆ ಒಂದರಂತೆ ಅದ್ಭುತ ದ್ವಿಚಕ್ರ ವಾಹನಗಳನ್ನು ತಯಾರಿಸುವ ಹೀರೋ, ಎಲೆಕ್ಟ್ರಿಕ್ ವಾಹನಗಳನ್ನು ಕೂಡ ತಯಾರಿಸಿ ಗ್ರಾಹಕರ ಮೆಚ್ಚುಗೆ ಪಡೆದುಕೊಂಡಿದೆ. ಗದ್ದಲ ಇಲ್ಲದೆ ಅದ್ಭುತ ಬೈಕ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು 95,000 ಬೆಲೆಯಲ್ಲಿ ಈ ಬೈಕ್ ಖರೀದಿ ಮಾಡಬಹುದು.

ಹಿರೋದ ಎಕ್ಸ್‌ಟ್ರೀಮ್ 125 ಆರ್ ಬೈಕ್ ಬಿಡುಗಡೆ!

ಕೈಗೆಟುಕುವ ಬೆಲೆಯಲ್ಲಿ ನೀವು ಬೈಕ್ ಖರೀದಿ ಮಾಡಲು ಬಯಸಿದರೆ ಈ ಬೈಕ್ ಅತ್ಯುತ್ತಮ ಆಯ್ಕೆಯಾಗಿದೆ. ಅದ್ಭುತ ವಿನ್ಯಾಸ ಹಾಗೂ ಅತ್ಯುತ್ತಮ ಮೈಲೇಜ್ ಕೂಡ ಹೊಂದಿರುವ ಎಕ್ಸ್‌ಟ್ರೀಮ್ 125 ಆರ್, ಸಂಪೂರ್ಣ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದೆ.

ಎಕ್ಸ್‌ಟ್ರೀಮ್ 125 ಆರ್ ಬೈಕ್ ನಲ್ಲಿ ಇದೆ ವೈಶಿಷ್ಟ್ಯತೆ!

advertisement

Hero Xtreme 125R ಬೈಕ್ ಅತ್ಯುತ್ತಮ ವಿನ್ಯಾಸ ಹಾಗೂ ವೈಶಿಷ್ಟತೆಯನ್ನು ಹೊಂದಿದೆ. ಎಲ್ಇಡಿ ಲೈಟಿಂಗ್, ಸಿಂಗಲ್ ಚಾನೆಲ್ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಮೊದಲಾದ ವೈಶಿಷ್ಟ್ಯತೆಗಳನ್ನು ಕಾಣಬಹುದು. ಕೆಲವು ತಿಂಗಳುಗಳಿಂದ Hero Xtreme 125R ಬಗ್ಗೆ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಈ ಬೈಕ್ನ ಚಿತ್ರಗಳು ಕೂಡ ಬಿಡುಗಡೆ ಆಗಿದ್ದು, ಜನರಿಗೆ ಕುತೂಹಲ ಮೂಡಿಸಿತ್ತು. ಇದೀಗ ಅಧಿಕೃತವಾಗಿ ಹೀರೋ ಎಕ್ಸ್ಟ್ರೀಮ್ ಬೈಕ್ ಬಿಡುಗಡೆ ಮಾಡಿದ್ದು, ಜನರು ಖರೀದಿ ಮಾಡಲು ಮುಗಿಬಿದ್ದಿದ್ದಾರೆ.

Hero Xtreme 125R ಎಂಜಿನ್!

  • 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಇಂಜಿನ್ ಅಳವಡಿಸಲಾಗಿದೆ. 8000RPM ನಲ್ಲಿ 11.5 BHP ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪಿಕ್ ಅಪ್ ವಿಷಯದಲ್ಲಿಯೂ ಕೂಡ ಬಹಳ ಮುತುವರ್ಜಿಯಿಂದ ಸಿಸ್ಟಮ್ ವಿನ್ಯಾಸಗೊಳಿಸಲಾಗಿದ್ದು, ವಿಶೇಷ ಎಂಜಿನ್ ಬ್ಯಾಲೆನ್ಸರ್ ತಂತ್ರಜ್ಞಾನ ಅಳವಡಿಸಲಾಗಿದೆ.
  • 5.9 ಸೆಕೆಂಡ್ ಗಳಲ್ಲಿ ಜೀರೋದಿಂದ 60 ಕಿಲೋಮೀಟರ್ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಮೈಲೇಜ್ ವಿಚಾರಕ್ಕೆ ಬಂದ್ರೆ ಪ್ರತಿ ಲೀಟರ್ ಗೆ 66 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.
  • i3S ಐಡಿಯಲ್ ಸ್ಟಾಪ್ ಹಾಗೂ ಸ್ಟಾರ್ಟ್ ತಂತ್ರಜ್ಞಾನವನ್ನು ಇದರಲ್ಲಿ ಒದಗಿಸಲಾಗಿದೆ. ಮುಂಭಾಗದಲ್ಲಿ ಮೋನೋ ಶಾಕ್ ಸಸ್ಪೆನ್ಷನ್ ಕೊಡಲಾಗಿದ್ದು, ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ.
  • ಸಿಂಗಲ್ ಚಾನೆಲ್ ಆಂಟಿ ಬ್ರೇಕಿಂಗ್ ಸಿಸ್ಟಮ್ ಟಾಪ್ ಎಂಡ್ ಮಾಡೆಲ್ ನಲ್ಲಿ ಮಾತ್ರ ನೀಡಲಾಗುವುದು. Hero Xtreme 125R ಬೈಕ್ ನ ಬೆಲೆ ನೋಡುವುದಾದರೆ, ಇದರ ಎಕ್ಸ್ ಶೋರೂಮ್ ಬೆಲೆ 95,000 ಗಳಿಂದ ಆರಂಭವಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

advertisement

Leave A Reply

Your email address will not be published.