Karnataka Times
Trending Stories, Viral News, Gossips & Everything in Kannada

Pension: ವೃದ್ಧಾಪ್ಯ ಪಿಂಚಣಿಗೆ ಹೊಸ ನಿಯಮ ಜಾರಿ, ಈ ಕೆಲಸ ಕಡ್ಡಾಯ!

advertisement

ಜನರ ಸಾಮಾಜಿಕ ಭದ್ರತೆಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ. ಈಗಾಗಲೆ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಜನತೆಗೆ ಸಹಾಯ ಮಾಡುತ್ತಿದೆ. ಕೆಲ ಯೋಜನೆಗಳಲ್ಲಿ ಸರಕಾರವೇ ಉಚಿತವಾಗಿ ಹಣಕಾಸಿನ ನೆರವು ಕೂಡ ನೀಡುತ್ತಿದೆ. ಇದರಲ್ಲಿ ಮುಖ್ಯವಾಗಿ ವೃದ್ಧಾಪ್ಯ ವೇತನ ವಿಧವೆಯರು ವಿಧವಾ ಪಿಂಚಣಿ (Pension) ಯೋಜನೆ ಇತ್ಯಾದಿಯನ್ನು ಪಡೆಯುತ್ತಿದ್ದಾರೆ. ಇದೀಗ ಪಿಂಚಣಿ ಹಣದ ಕುರಿತಾಗಿ ಸರಕಾರ ಹೊಸ ನಿಯಮ ಜಾರಿಗೆ ತಂದಿದೆ.

ಸುಳ್ಳು ದಾಖಲೆ ಹೆಚ್ಚಳ:

 

 

ಸುಳ್ಳು ಮಾಹಿತಿ ನೀಡಿ ಸರಕಾರದ ಸೌಲಭ್ಯ ಪಡೆಯುವ ಸಂಖ್ಯೆ ಇಂದು ಹೆಚ್ಚಾಗಿದೆ. ಅದೇ ರೀತಿ ಸರಕಾರದ ಪಿಂಚಣಿ ಹಣ (Pension) ವನ್ನು ಕೂಡ ತಪ್ಪು ದಾಖಲೆಗಳನ್ನು ನೀಡಿ ಹಣ ಪಡೆಯುವ ಸಂಖ್ಯೆ ಯು ಇದ್ದು ಹೆಚ್ಚಾಗಿದ್ದು ಇದೀಗ ಹೊಸ ನಿಯಮಗಳನ್ನು ಜಾರಿಗೊಳಿಸಲು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಮುಂದಾಗಿದೆ.

advertisement

ಆಧಾರ್ ಲಿಂಕ್ ಕಡ್ಡಾಯ:

ಮಾಸಿಕ ಪಿಂಚಣಿ ಯೋಜನೆ (Pension Scheme) ಯ ಮೂಲಕ 60 ವರ್ಷ ಮೇಲ್ಪಟ್ಟವರು ವಯಸ್ಸಿನ ದೃಢೀಕರಣ ಪತ್ರದೊಂದಿಗೆ ಹಾಗೂ ವಿಧವಾ ವೇತನಕ್ಕಾಗಿ ಪತಿಯ ಮರಣಪ್ರಮಾಣ ಪತ್ರ, ಪಡಿತರ ಚೀಟಿಯೊಂದಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇತ್ತು ಆದರೆ, ಇವುಗಳ ಜೊತೆಗೆ ಇನ್ಮುಂದೆ ಆಧಾರ್ ಸಂಖ್ಯೆ (Aadhaar Number) ಯನ್ನು ಲಿಂಕ್‌ ಮಾಡುವುದು ಕಡ್ಡಾಯ ಮಾಡಲಾಗಿದೆ. ಅದೇ ರೀತಿ ಪಿಂಚಣಿ ಹಣ ಪಡೆಯಲು ಹೊಸ ಆದಾಯ ಪ್ರಮಾಣಪತ್ರ ಹಾಗೂ ಪಡಿತರ ಚೀಟಿ (Ration Card) ನೀಡಬೇಕಾಗಿದೆ. ಅದೇ ರೀತಿ ಹೊಸ ವ್ಯವಸ್ಥೆಯಲ್ಲಿ 32 ಸಾವಿರ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರ ಅರ್ಜಿಗಳು ತಿರಸ್ಕೃತ ಮಾಡಲಾಗುತ್ತದೆ.

ಅರ್ಜಿ ತಿರಸ್ಕಾರ:

ಕುಟುಂಬದ ವಾರ್ಷಿಕ ಆದಾಯ 32 ಸಾವಿರ ರೂ. ಮೀರಿದರೂ ಪಿಂಚಣಿಗೆ ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೆಶನಾಲಯ ಕ್ರಮ ಕೈಗೊಂಡಿದೆ. ಎಲ್ಲ ದಾಖಲೆಗಳ ಜತೆಗೆ ಆಧಾರ್‌ ಕಾರ್ಡ್‌ (Aadhaar Card) ಕೂಡ ಸಲ್ಲಿಕೆ ಕಡ್ಡಾಯ. ಆಧಾರ್‌ ಸಂಖ್ಯೆ ನಾನಾ ಇಲಾಖೆಯ ಹಲವು ಯೋಜನೆಗಳಿಗೆ ಜೋಡಣೆಯಾದಾಗ ಆದಾಯದ ಮಾಹಿತಿಯು ದೊರೆಯುತ್ತದೆ.

advertisement

Leave A Reply

Your email address will not be published.