Karnataka Times
Trending Stories, Viral News, Gossips & Everything in Kannada

FASTag: ಫಾಸ್ಟ್ ಟ್ಯಾಗ್ ನಲ್ಲಿ ಹಣ ಇಲ್ಲದಿದ್ರೆ ಟೋಲ್ ಗೇಟ್ ದಾಟಲು ಸಾಧ್ಯವಿಲ್ಲ; ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು ಗೊತ್ತಾ?

advertisement

ಈಗ ನೀವು ಲಾಂಗ್ ಡ್ರೈವ್ ಹೋಗುವುದಾದರೆ ಅಥವಾ ಹೈವೇ ಗಳಲ್ಲಿ ಟೋಲ್ ಗೇಟ್ ಪಾಸ್ ಆಗುವುದು ಸಹಜ. ಇಂಥ ಸಮಯದಲ್ಲಿ ಫಾಸ್ಟ್ ಟ್ಯಾಗ್ (FASTag) ಕೊಂಡು ಹೋಗುವುದು ಕಡ್ಡಾಯವಾಗಿದೆ. ನಿಮ್ಮ ವಾಹನಕ್ಕೆ ಫಾಸ್ಟ್ ಟ್ಯಾಗ್ ಅಳವಡಿಸಲಾಗಿದ್ದು, ಅದರಲ್ಲಿ ಟೋಲ್ ಗೇಟ್ ಪಾಸ್ ಆಗಲು ಅಗತ್ಯ ಇರುವ ಮಿನಿಮಮ್ ಬ್ಯಾಲೆನ್ಸ್ ಇದ್ರೆ ಸಾಕು ನೀವು ಸುಲಭವಾಗಿ ಸೆಕೆಂಡ್ ಗಳಲ್ಲಿ ಟೋಲ್ ಗೇಟ್ (Toll Gate) ಪಾಸ್ ಆಗಬಹುದು. ರೇಡಿಯೋ ಆವರ್ತನ ತಂತ್ರಜ್ಞಾನ ಸಾಧನವನ್ನು (RFID) ಬಳಸಿ ಫಾಸ್ಟ್ಯಾಗ್ ಬಳಸಲಾಗುತ್ತದೆ.

NHAI New Rules:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2021 ರಲ್ಲಿ ಫಾಸ್ಟ್ ಟ್ಯಾಗ್ (FASTag) ನಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯ ಎನ್ನುವ ನಿಯಮ ಜಾರಿಗೆ ತಂದಿತ್ತು. ಇದೀಗ ವಾಣಿಜ್ಯ ವಾಹನಗಳಲ್ಲಿ ಮಾತ್ರ ಫಾಸ್ಟ್ ಟ್ಯಾಗ್ ಬಳಸುವವರು ತಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.

FASTag ನಲ್ಲಿ ಬ್ಯಾಲೆನ್ಸ್ ಕಡಿಮೆಯಾದರೆ ಟೋಲ್ ಗೇಟ್ ಪಾಸ್ ಆಗಬಹುದೇ?

ಒಂದು ಮಿತಿಯವರೆಗೆ ನೀವು ನಿಮ್ಮ ಫಾಸ್ಟ್ ಟ್ಯಾಗ್ (FASTag) ನಲ್ಲಿ ಬ್ಯಾಲೆನ್ಸ್ ಇಲ್ಲದೆ ಇದ್ದರೂ ಕೂಡ ಬಳಕೆ ಮಾಡಬಹುದು. ಆದರೆ ಈ ಬ್ಯಾಲೆನ್ಸ್ ಮಿತಿ ಮೀರಿದರೆ ನೀವು ಟೋಲ್ ಗೇಟ್ ಪಾಸ್ ಆಗಲು ಸಾಧ್ಯವಿಲ್ಲ ಆಗ ಮತ್ತೆ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಿಸಬೇಕು.

advertisement

ಪೊಲೀಸರು ನಿಮ್ಮ ವಾಹನವನ್ನು ಟ್ರ್ಯಾಕ್ ಮಾಡಬಹುದು:

ನಿಮ್ಮ ಫಾಸ್ಟ್ ಟ್ಯಾಗ್ ಸಕ್ರಿಯವಾಗಿದ್ದರೆ, ತುರ್ತು ಪರಿಸ್ಥಿತಿಯಲ್ಲಿ ಪೊಲೀಸರು ನೀವು ಇರುವ ಸ್ಥಳವನ್ನು ಫಾಸ್ಟ್ ಟ್ಯಾಗ್ ಮೂಲಕವೇ ಪೊಲೀಸರು ಟ್ರ್ಯಾಕ್ ಮಾಡಲು ಸಾಧ್ಯವಿದೆ. ಇದರಿಂದ ನೀವು ಇರುವ ಸ್ಥಳಕ್ಕೆ ಅವರು ವೇಗವಾಗಿ ತಲುಪಬಹುದು.

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಈ ವಿಷಯ ನೆನಪಿಟ್ಟುಕೊಳ್ಳಿ:

ನೀವು ಹೆದ್ದಾರಿಯಲ್ಲಿ ಪ್ರಯಾಣಿಸುವುದಾದರೆ ಈ ವಿಚಾರವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಯಾಕೆಂದರೆ ಹೆದ್ದಾರಿಯಲ್ಲಿ ನೀವು ಪ್ರಯಾಣಿಸುವುದಾದರೆ ಟೋಲ್ ಪ್ಲಾಜಾ ದಾಟಲೇಬೇಕು. ಎಷ್ಟೋ ಸಮಯದಲ್ಲಿ ಫಾಸ್ಟ್ ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇದ್ಯೋ ಇಲ್ವೋ ಎಂಬುದನ್ನು ಜನ ಚೆಕ್ ಮಾಡುವುದಿಲ್ಲ. ಹಾಗೆ ಗಾಡಿ ತೆಗೆದುಕೊಂಡು ಬಂದುಬಿಡುತ್ತಾರೆ. ಆದರೆ ಮಿನಿಮಮ್ ಬ್ಯಾಲೆನ್ಸ್ ಕೂಡ ಇಲ್ಲದೆ ಇದ್ದರೆ, ಅಥವಾ ಬ್ಲಾಕ್ ಲಿಸ್ಟ್ ಗೆ ಸೇರ್ಪಡೆಗೊಂಡಿದ್ದರೆ ನೀವು ಟೋಲ್ ಪ್ಲಾಜಾ ದಾಟಲು ಸಾಧ್ಯವಿಲ್ಲ. ಹಾಗಾಗಿ ದೂರದ ಪ್ರಯಾಣ ಮಾಡುವವರು ಫಾಸ್ಟ್ ಟ್ಯಾಗ್ ಬಗ್ಗೆ ಎಚ್ಚರ ವಹಿಸಿ.

advertisement

Leave A Reply

Your email address will not be published.