Karnataka Times
Trending Stories, Viral News, Gossips & Everything in Kannada

Maruti Fronx: 30Km ಮೈಲೇಜ್ ಹಾಗೂ ಆರು ಏರ್ ಬ್ಯಾಗ್ ಇರುವ ಈ ಮಾರುತಿ ಕಾರು ಕೊಳ್ಳಲು ಕ್ಯೂ ನಿಂತ ಜನ, ಬೆಲೆ ಎಷ್ಟು?

advertisement

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಾಕಷ್ಟು ಉತ್ತಮ ಬೆಲೆಗೆ ಐಷಾರಾಮಿ ಕಾರುಗಳಿಂದ ಹಿಡಿದು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಕಾರುಗಳನ್ನು ಕೂಡ ಬಿಡುಗಡೆ ಮಾಡಿದೆ. ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಹ್ಯಾಚ್ಬ್ಯಾಕ್ ಕಾರುಗಳನ್ನು ಮಾರುತಿ ಸುಜುಕಿ ಒದಗಿಸಿದೆ. ವರ್ಷದ ಆರಂಭದಲ್ಲಿ ಅಂದ್ರೆ 2023ರ ಆರಂಭದಲ್ಲಿ ಅತ್ಯಂತ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಕಾಂಪ್ಯಾಕ್ಟ್ ಎಸ್ಯುವಿ ಒಂದನ್ನು ಸಿ ಎನ್ ಜಿ ವಿಭಾಗದಲ್ಲಿ ಮಾರುತಿ ಬಿಡುಗಡೆ ಮಾಡಿದೆ. ಇಂದು ಹೆಚ್ಚು ಪ್ರಚಲಿತದಲ್ಲಿರುವ ಈ ಕಾರನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ ಎನ್ನಬಹುದು.

Maruti Suzuki Fronx compact SUV!

ಮಾರುತಿ ಸುಜುಕಿ ಹೈಬ್ರಿಡ್ ಎಂಜಿನ್ ಹೊಂದಿರುವ Fronx Compact SUV ಕಾರನ್ನು ಬಿಡುಗಡೆ ಮಾಡಿದೆ. ಕೈಗೆ ಉತ್ತಮ ಶ್ರೇಣಿಯ ಕಾರನ್ನು ಖರೀದಿ ಮಾಡಬೇಕು ಎಂದುಕೊಳ್ಳುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಸಿ ಎನ್ ಜಿ ಎಂಜಿನ್ (CNG Engine)ನಲ್ಲಿ 30kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಬಲೆನೋಗಿಂತ ಸ್ವಲ್ಪ ದುಬಾರಿಯಾಗಿದೆ ಎನ್ನಬಹುದು. 1.2 ಲೀಟರ್ ಎಂಜಿನ್ ನೀಡಲಾಗಿದೆ.

Fronx Compact SUV ರೂಪಾಂತರಗಳು!

ಈ ಕಾರು ಹೆಚ್ಚು ವಿಭಿನ್ನವಾಗಿದೆ ಹಾಗೂ ವೈಶಿಷ್ಟ್ಯತೆಗಳನ್ನು ಹೊಂದಿದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಝೀಟಾ ಹಾಗೂ ಅಲ್ಫಾ ಈ ಐದು ವಿಭಿನ್ನ ರೂಪಾಂತರಗಳನ್ನು ಈ ಕಾರ್ಯದಲ್ಲಿ ಪಡೆಯಬಹುದು ಜೊತೆಗೆ ಎರಡು ಇಂಜಿನ್ ಆಯ್ಕೆಯೊಂದಿಗೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, ಒಂದು ಲೀಟರ್ ಟರ್ಬೋ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ 100 ಬಿ ಎಚ್ ಪಿ ಪವರ್ ಹಾಗೂ 148 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಇದೆ. ಅದೇ ರೀತಿ 1.2 ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಎಂಜಿನ್ ನಲ್ಲಿ 90 ಬಿ ಎಚ್ ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಇದೆ. ಇನ್ನು ಸದ್ಯ ಸಿ ಎನ್ ಜಿ ಎಂಜಿನ್ ಅನ್ನು ಸಿಗ್ಮಾ ಹಾಗೂ ಡೆಲ್ಟಾ ಟ್ರಿಮ್ ಗಳಲ್ಲಿ ಕಾಣಬಹುದು.

advertisement

Fronx compact SUV ವೈಶಿಷ್ಟ್ಯತೆಗಳು!

ಅತ್ಯುತ್ತಮ ಶ್ರೇಣಿಯ ಕಾರು ಇದಾಗಿದೆ. ಹೊರಗಿನ ವಿನ್ಯಾಸ ಹಾಗೂ ಒಳಾಂಗಣದ ವಿನ್ಯಾಸವು ಕೂಡ ಬಹಳ ಸಿಸ್ಟಮ್ಯಾಟಿಕ್ ಆಗಿ ವಿನ್ಯಾಸಗೊಳಿಸಿದೆ ಮಾರುತಿ. ವಯರ್ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ (Apple Car Play)ಒಳಗೊಂಡಿದ್ದು 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡಲಾಗಿದೆ.

ಅಷ್ಟೇ ಅಲ್ಲದೆ ಇದರಲ್ಲಿ ಹೆಚ್ಚು ಆಕರ್ಷಣೀಯವಾಗಿರುವ ವೈಶಿಷ್ಟ್ಯತೆ ಅಂದ್ರೆ, Head of Display, Cruise Control, Auto Climate Control ಹಾಗೂ Wireless Phone Charging ಈ ಮೊದಲಾದ ಫೆಸಿಲಿಟಿಗಳನ್ನು ಕೊಡಲಾಗಿದೆ. ಇನ್ನು ಸುರಕ್ಷತೆಯ ವಿಚಾರಕ್ಕೆ ಬಂದರೆ ಈ ಪುಟ್ಟ ಎಸ್ಯುವಿ ಕೂಡ ಆರು ಏರ್ ಬ್ಯಾಗ್ ಗಳನ್ನು ಹೊಂದಿದೆ. ಇದರ ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್ ಇರಬಹುದು, ಹಿಲ್ ಹೋಲ್ಡ್ ಅಸಿಸ್ಟ್, 350 ಡಿಗ್ರಿ ಕ್ಯಾಮೆರಾ ಈಬಿಡಿ ಜೊತೆಗೆ ಎ ಬಿ ಎಸ್ ISOFIX ಆಂಕರ್ ಗಳು ಮೊದಲಾದ ವೈಶಿಷ್ಟ್ಯಗಳನ್ನು ಕಾಣಬಹುದು.

Fronx compact SUV ಬೆಲೆ!

ಮಾರುತಿಯ ಈ ಹೊಸ ಎಸ್ ಯು ವಿ ಕಾರಿನ ಎಕ್ಸ್ ಶೋರೂಮ್ ಬೆಲೆ 7.46 ಲಕ್ಷ ರೂಪಾಯಿಗಳಿಂದ ಆರಂಭವಾಗಿ 13.14 ಲಕ್ಷದವರೆಗೆ ಇದೆ. ಸಿಗ್ಮಾ ರೂಪಾಂತರದೊಂದಿಗೆ ಸಿ ಎನ್ ಜಿ ಮಾದರಿಯನ್ನು ಕಾಣಬಹುದು ಇದರ ಎಕ್ಸ್ ಶೋರೂಮ್ ಬೆಲೆ 8.45 ಲಕ್ಷ ರೂಪಾಯಿಗಳು. ಮಾರುತಿಯ ಹೊಸ Fronx Compact SUV ಕಿಯಾ ಸೊನೆಟ್ (Kia Sonet), ಹುಂಡೈ ವೆನ್ಯೂ (Hyndai Venue), ಮಹಿಂದ್ರ ಎಕ್ಸ್ ಯುವಿ 300(Mahindra XUV300), ನಿಸ್ಸಾನ್ ಮ್ಯಾಗ್ನೆಟ್ ಮೊದಲಾದ ಕಾರುಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.

2023ರ ಅಂತ್ಯದಲ್ಲಿ ನಾವಿದ್ದೇವೆ ಹಾಗಾಗಿ ಸಿ ಎನ್ ಜಿ ಕಾರುಗಳ ಮೇಲೆ ಮಾರುತಿ ಗಮನಾರ್ಹವಾದ ವರ್ಷಾಂತ್ಯದ ಕೊಡುಗೆಯನ್ನು ಕೂಡ ನೀಡುತ್ತಿದೆ. ಸಿಎನ್ಜಿ ಕಾರು ಖರೀದಿ ಮಾಡಲು ಬಯಸಿದರೆ ಇದು ಸೂಕ್ತ ಸಮಯ.

advertisement

Leave A Reply

Your email address will not be published.