Karnataka Times
Trending Stories, Viral News, Gossips & Everything in Kannada

Tata Neu Credit Card: ಎಚ್‌ಡಿಎಫ್‌ಸಿ ಬ್ಯಾಂಕ್‌ ನಿಂದ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ ಬಿಡುಗಡೆ, ಈ ಕಾರ್ಡ್ ನಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

advertisement

ಭಾರತ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ (HDFC Bank) ಗ್ರಾಹಕರಿಗೆ ವಿವಿಧ ರೀತಿಯ ಸೇವೆಗಳನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಆದರೆ ಇದೀಗ ಟಾಟಾ ನ್ಯೂ ಸಹಭಾಗಿತ್ವದಲ್ಲಿ HDFC ಬ್ಯಾಂಕ್ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ (Tata Neu Credit Card) ಬಿಡುಗಡೆ ಮಾಡಿದೆ. ಈ ಕಾರ್ಡ್ ನಿಂದ ಗ್ರಾಹಕರು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಗ್ರಾಹಕರಿಗೆ ಈ ಕಾರ್ಡ್ ನಿಂದ ಏನೆಲ್ಲಾ ಪ್ರಯೋಜನಗಳಿವೆ?

 

 

ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ನಲ್ಲಿ ಗ್ರಾಹಕರಿಗೆ ಹಲವು ದಾಖಲೆಗಳನ್ನು ಸಹ ನೀಡಲಾಗುವುದು. ಟಾಟಾ ಕಂಪನಿಯು ವರದಿಗಳ ರೂಪದಲ್ಲಿ ಗ್ರಾಹಕರಿಗೆ ಫುಡ್ (Food), ಟ್ರಾವೆಲ್ (Travel) ಹಾಗೂ ಶಾಪಿಂಗ್‌ (Shoping) ನಲ್ಲಿ ಅಂಕಗಳನ್ನು ನೀಡಲಾಗುವುದು. ಗ್ರಾಹಕರು ಚಂದಾದಾರಿಕೆ ಮತ್ತು ದೈನಂದಿನ ವೆಚ್ಚಗಳಿಗಾಗಿ ಈ ಅಂಕಗಳನ್ನು ಬಳಸಬಹುದು. ಈ ರಿವಾರ್ಡ್ ಫೀಚರ್‌ನಿಂದಾಗಿ ಈ ಟಾಟಾ ಕ್ರೆಡಿಟ್ ಕಾರ್ಡ್ (Tata Credit Card) ಇಷ್ಟವಾಗಲಿದೆ ಎಂದು ಹೇಳಿಕೊಂಡಿದೆ.

advertisement

ಗ್ರಾಹಕರಿಗೆ ವಿಮಾ ಸೌಲಭ್ಯವು ಲಭ್ಯ:

ಟಾಟಾ Neu ಎಚ್‌ಡಿಎಫ್‌ಸಿ ಪ್ಲಸ್ ಕ್ರೆಡಿಟ್ ಕಾರ್ಡ್ (Credit Card) ಮತ್ತು Tata Neu HDFC ಬ್ಯಾಂಕ್ ಇನ್ಫಿನಿಟಿ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ 1 ಕೋಟಿ ವರೆಗೆ ಅಪಘಾತದ ಏರ್‌ ಡೆತ್‌ ಕವರ್‌ ಸೇವೆಯು ಲಭ್ಯವಿದೆ. ಹೌದು, 15 ಲಕ್ಷದವರೆಗೆ ಆಸ್ಪತ್ರೆಯ ವೆಚ್ಚ, 9 ಲಕ್ಷದವರೆಗೆ ಲಾಸ್ಟ್ ಕಾರ್ಡ್ ಹೊಣೆಗಾರಿಕೆ ಕವರ್‌ ನೀಡಲಾಗುತ್ತಿದ್ದು, ಹೀಗೆ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಟಾಟಾ ಕ್ರೆಡಿಟ್ ಕಾರ್ಡ್ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು?

  • ವಯೋಮಿತಿಯ ಆಧಾರದ ಮೇಲೆ ಈ ಕಾರ್ಡ್ ಅನ್ನು ನೀಡಲಾಗುತ್ತದೆ. ಹೀಗಾಗಿ ಕನಿಷ್ಠ 21 ವರ್ಷ ಮತ್ತು ಗರಿಷ್ಠ 60 ವರ್ಷದ ವಯೋಮಿತಿಯನ್ನು ಹೊಂದಿದವರು ಈ ಕಾರ್ಡ್ ಪಡೆಯಲು ಅರ್ಹರು.
  • ನಿವ್ವಳ ಮಾಸಿಕ ಆದಾಯ 25,000 ರೂಕ್ಕಿಂತ ಹೆಚ್ಚು ಇರಬೇಕು. ಒಂದು ಲಕ್ಷಕ್ಕಿಂತ ಹೆಚ್ಚು ನಿವ್ವಳ ಮಾಸಿಕ ಆದಾಯ ಹೊಂದಿರಬೇಕು.
  • ಸ್ವಯಂ ಉದ್ಯೋಗಿಗಳು ಕೂಡ ಈ ಕಾರ್ಡ್ ಪಡೆಯಬಹುದು. ಆದರೆ, ಸ್ವಯಂ ಉದ್ಯೋಗಿಗಳು ಭಾರತೀಯ ಪ್ರಜೆಯಾಗಿರಬೇಕು.
  • ಸ್ವಯಂ ಉದ್ಯೋಗಿಗಳು ಕನಿಷ್ಠ 21 ವರ್ಷ ಮತ್ತು ಗರಿಷ್ಠ 65 ವರ್ಷ ವಯೋಮಿತಿ ಹೊಂದಿದವರಾಗಿಬೇಕು. ಅದಲ್ಲದೇ ವಾರ್ಷಿಕವಾಗಿ 6 ಲಕ್ಷಕ್ಕಿಂತ ಹೆಚ್ಚು ಆದಾಯ ತೆರಿಗೆ ರಿಟರ್ನ್ ಮಾಡಿದವರುಡಿದವರು ಈ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ.

advertisement

Leave A Reply

Your email address will not be published.