Karnataka Times
Trending Stories, Viral News, Gossips & Everything in Kannada

SUV Car: SUV ಕಾರುಗಳ ಮೇಲೆ 2.5ಲಕ್ಷ ರೂ. ವರೆಗೂ ಭರ್ಜರಿ ರಿಯಾಯಿತಿ, ಈ ಕಂಪನಿಯ ಕಾರು ಎಲ್ಲಕ್ಕಿಂತ ಬೆಸ್ಟ್!

advertisement

ವರ್ಷದಾದ್ಯಂತ ಹಬ್ಬದ ಸಮಯದಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಆಫರ್ ಗಳು ಮಾರುಕಟ್ಟೆಯಲ್ಲಿ ನಡೆಯುತ್ತಿರುತ್ತವೆ. ಈ ಅವಧಿಯಲ್ಲಿ ಹಬ್ಬದ ವಾತಾವರಣವಿದ್ದು ಜನರು ಹೆಚ್ಚಿನ ಖರೀದಿಗೆ ಮುಂದಾಗುವುದರಿಂದ ಈ ರೀತಿ ಆಫರ್ ಗಳನ್ನು ಕಂಪನಿಗಳು ನೀಡುತ್ತಿರುತ್ತವೆ. ಡಿಸೆಂಬರ್ ನಲ್ಲಿ ಬೇರೆ ಮಾರುಕಟ್ಟೆಗಳಿಗಿಂತ ವಾಹನಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಆಫರ್ ಗಳನ್ನು ನಾವು ಕಾಣಬಹುದು. ಪ್ರತಿಯೊಂದು ಕಾರು ತಯಾರಿಕ ಕಂಪನಿ ಕೂಡ ತಮ್ಮಲ್ಲಿರುವ ಕಾರುಗಳ ಸ್ಟಾಕ್ ಅನ್ನು ಅದೇ ವರ್ಷ ಖಾಲಿ ಮಾಡಬೇಕು ಎನ್ನುವ ಉದ್ದೇಶದಿಂದ ಡಿಸೆಂಬರ್ ನಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡುತ್ತಿರುತ್ತದೆ.

ಕಾರಿನ ಬೆಲೆಗಳಲ್ಲಿ ಕಡಿತ, ಕಾರಿನ ಆನ್ ರೋಡ್ ಬೆಲೆಯ ಮೇಲೆ ಸಂಪೂರ್ಣ ಸಾಲ ಸೌಲಭ್ಯ, ಎಕ್ಸ್ಟೆಂಡೆಡ್ ವಾರೆಂಟಿಗಳು, ಫ್ರೀ ಸರ್ವಿಸ್ ಗಳು, ಉಚಿತ ಆಕ್ಸೆಸರೀಸ್ ಗಳು ಮುಂತಾದ ಹಲವು ಯೋಜನೆಗಳೊಂದಿಗೆ ಕ್ರಿಯಾತ್ಮಕವಾಗಿ ಕಾರು ತಯಾರಕ ಸಂಸ್ಥೆಗಳು ಡಿಸೆಂಬರ್ ತಿಂಗಳಲ್ಲಿ ಆಫರ್ ಗಳನ್ನು ಬಿಡುಗಡೆ ಮಾಡುತ್ತಿರುತ್ತವೆ.

ಲಾಂಗ್ ಟರ್ಮ್ ಕಾರು ಬಳಸಬೇಕು ಎನ್ನುವ ಯೋಜನೆ ಇರುವವರಿಗೆ ಮಾಡೆಲ್ ಚೇಂಜ್ ಆಗುವುದು ಅಷ್ಟೊಂದು ದೊಡ್ಡ ಸಮಸ್ಯೆ ಆಗದೆ ಇರುವುದರಿಂದ ಡಿಸೆಂಬರ್ ನಲ್ಲಿ ಬರುವ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗಾದರೆ ಮಾರುಕಟ್ಟೆಯಲ್ಲಿ ಯಾವ ಕಾರುಗಳಿಗೆ ಈ ಡಿಸೆಂಬರ್ ನಲ್ಲಿ ಆಫರ್ ಗಳು ನಡೆಯುತ್ತಿದೆ ಈಗ ನೋಡೋಣ.

ಮಾರುತಿ ಸುಜುಕಿ – ಜಿಮ್ನಿ ಮೇಲೆ 2 ಲಕ್ಷಗಳ ಆಫರ್

ಭಾರತದಲ್ಲಿ ಹೆಚ್ಚಿನ ಕಾರುಗಳು ಸೇಲ್ ಆಗುವುದು ಮಾರುತಿ ಸುಜುಕಿ ಕಂಪನಿಯದ್ದಾಗಿದೆ. ಈ ಡಿಸೆಂಬರ್ ನಲ್ಲಿ ಮಾರುತಿ ಸುಜುಕಿ ಇತ್ತೀಚಿಗೆ ಲಾಂಚ್ ಮಾಡಿದ ಜಿಮ್ನಿ ಕಾರಿನ ಮೇಲೆ ಎರಡು ಲಕ್ಷ ರೂಪಾಯಿಗಳ ಕೊಡುಗೆ ನೀಡುತ್ತಿದೆ. ಇದಲ್ಲದೆ ತನ್ನ ಟಾಪ್ ಸೆಲ್ಲಿಂಗ್ ಕಾರುಗಳಾದ ವಿತಾರ ಬ್ರೆಜಾ (Vitara Brezza)ದ ಮೇಲೆ 25 ರಿಂದ 30 ಸಾವಿರಗಳ ಕಡಿತ ಮತ್ತು ಇನ್ನೊಂದು ಪ್ರಖ್ಯಾತ ಮಾಡಲಾದ ಫ್ರಾಂಕ್ಸ್ ನ ಮೇಲೆ 40,000ಗಳ ಕಡಿತ ನೀಡುತ್ತಿದೆ.

ಹ್ಯುಂಡಯಿ ಎಸ್. ಯು. ವಿ (Hyundai SUV)ಗಳ ಖರೀದಿಗೆ ಸರಿಯಾದ ಸಮಯ

advertisement

ಕಾರು ತಯಾರಿಕ ಸಂಸ್ಥೆಯು ಹ್ಯುಂಡಯಿ ತನ್ನ ಪ್ರೀಮಿಯಂ ಎಸ್ ಯು ವಿ ಟಕ್ಸನ್ ಮೇಲೆ 1.5 ಲಕ್ಷಗಳ ಡಿಸ್ಕೌಂಟ್ ನೀಡುತ್ತಿದೆ. ಇನ್ನೊಂದು ಸೆವೆನ್ ಸೀಟರ್ ಎಸ್ ಯು ವಿ ಆದ ಆಲ್ಕಜಾರ್ (Alcazar)ನ ಪೆಟ್ರೋಲ್ ವೇರಿಯಂಟನ ಮೇಲೆ 35,000 ಮತ್ತು ಡೀಸೆಲ ವೇರಿಯೆಂಟ್ ನ ಮೇಲೆ 20 ಸಾವಿರ ರೂಪಾಯಿಗಳ ಕೊಡುಗೆ ನೀಡುತ್ತಿದೆ.

ಟಾಟಾ ಆಫರ್ಸ್

ಭಾರತೀಯ ಕಾರು ತಯಾರಕ ಸಂಸ್ಥೆ ಟಾಟಾ ಮೋಟರ್ಸ್ ಫೇಸ್ ಲಿಫ್ಟ್ ಹ್ಯಾರಿಯರ್ (Harrier) ಮತ್ತು ಸಫಾರಿ (Safari) ಕಾರುಗಳ ಮೇಲೆ 1.5 ಲಕ್ಷಗಳ ಕೊಡುಗೆ ನೀಡಿದೆ. ಇದಲ್ಲದೆ ತನ್ನ ಪ್ರಖ್ಯಾತ ನೆಕ್ಸಾನ್ ಇ.ವಿ (Nexon EV) ಯ ಬೆಲೆಗಳಲ್ಲಿ 2.6 ಲಕ್ಷಗಳ ಡಿಸ್ಕೌಂಟ್ ನೀಡುತ್ತಿದೆ.

ಮಹೀಂದ್ರ – ಎಕ್ಸ್. ಯು. ವಿ 400 ಇ.ವಿ ಇಷ್ಟು ಕಡಿಮೆ ಬೆಲೆಯಲ್ಲಿ ಮತ್ತೆ ಸಿಗದು

ಮತ್ತೊಂದು ಭಾರತೀಯ ಕಾರು ತಯಾರಕ ಸಂಸ್ಥೆ ಮಹೀಂದ್ರ ಕೂಡ ಕೊಡುಗೆ ನೀಡುವುದರಲ್ಲಿ ಹಿಂದೆ ಉಳಿಯದೆ ಎಕ್ಸ್ ಯು ವಿ 400 ಇವಿ ಕಾರಿನ ಮೇಲೆ 4.2 ಲಕ್ಷಗಳ ತನಕದ ಡಿಸ್ಕೌಂಟ್ ನೀಡುತ್ತಿದೆ. ಇದಲ್ಲದೆ ಮಹಿಂದ್ರ ಬೋಲೇರೋ ಮತ್ತು ಮಹಿಂದ್ರ ಬೋಲೇರೋ ನಿಯೋ (Mahindra Bolero Neo)ಗಳ ಮೇಲೆ 96,000 ಹಾಗೂ 1.1 ಲಕ್ಷದ ಕೊಡುಗೆ ನೀಡಿದೆ.

ಸ್ಕೋಡಾ – ಡಿಸೆಂಬರ್ ಆಫರ್ಸ್ ಕೋಡಿಯಾಕ್ ಮತ್ತು ಕುಷಾಕ್

ಸ್ಕೋಡಾ ಕಾರುಗಳನ್ನು ತೆಗೆದುಕೊಳ್ಳಲು ಈ ಅವಧಿ ಸರಿಯಾಗಿದೆ. ಪ್ರಖ್ಯಾತ ಎಸ್.ಯು.ವಿ ಸ್ಕೋಡಾ ಕೊಡಿಯಾಕ್ (Skoda Kodiaq)ನ ಮೇಲೆ 2.66 ಲಕ್ಷಗಳ ಕಡಿತ ಇದೆ ಹಾಗೂ ಸ್ಕೋಡಾ ಕುಷಾಕ್ (Skoda Kushaq)ಕಾರಿನ ಮೇಲೆ 1.25 ಲಕ್ಷಗಳ ಕಡಿತ ಇದೆ.

advertisement

Leave A Reply

Your email address will not be published.