Karnataka Times
Trending Stories, Viral News, Gossips & Everything in Kannada

TVS Jupiter: ಒಂದೇ ತಿಂಗಳಲ್ಲಿ 73,000 ಯೂನಿಟ್ ಮಾರಾಟ ಮಾಡಿ ನಂ.1 ಸ್ಥಾನದಲ್ಲಿದೆ ಈ ಸ್ಕೂಟರ್, ಬೆಲೆ ಕೂಡ ಕಡಿಮೆ!

advertisement

ಈ ಹಬ್ಬದ ಋತುವಿನಲ್ಲಿ ಸಾಕಷ್ಟು ಮಂದಿ ದ್ವಿಚಕ್ರ ವಾಹನ ಖರೀದಿಸಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳು ಸಾಕಷ್ಟು ಯುನಿಟ್ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿವೆ. ಅಂತೆಯೇ ಕಳೆದ ತಿಂಗಳು ಉತ್ತಮ ಮಾರಾಟ ದಾಖಲಿಸಿದ ಟಿವಿಎಸ್ (TVS) ಮಾಡೆಲ್ ಗಳನ್ನು ನೋಡೋಣ.

ಟಿವಿಎಸ್ ಮೋಟಾರ್ ಕಂಪನಿ ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 2,82,017 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ವರ್ಷದಿಂದ ವರ್ಷಕ್ಕೆ 19.7 ಶೇಕಡಾ ಅಷ್ಟು ಬೆಳೆವಣಿಗೆಯನ್ನು ಹೊಂದಿದೆ.ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಟಿವಿಎಸ್ ಮೋಟರ್ಸ್ (TVS Motors) ನವಂಬರ್ 2023ರಲ್ಲಿ ದಾಖಲೆಯ ಮಾರಾಟವನ್ನು ದಾಖಲಿಸಿದೆ ನವಂಬರ್ 2022 ರಲ್ಲಿ ಟಿವಿಎಸ್ ಮೋಟರ್ಸ್ ಒಟ್ಟು 1,91,738 ಯೂನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ ಸ್ಕೂಟರ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗಿದೆ ಅಲ್ಲದೆ ಕಳೆದ ತಿಂಗಳು 72,889 ಯೂನಿಟ್ ಜುಪಿಟರ್ ಸ್ಕೂಟರ್ (Jupiter Scooter) ಮಾರಾಟವಾಗಿದೆ. ಟಿವಿಎಸ್ ಮೋಟಾರ್ ಅಕ್ಟೋಬರ್ 2023ರಲ್ಲಿ ಸರಾಸರಿ 3.45 ಲಕ್ಷ ಯೂನಿಟ್ ಗಳ ಅತ್ಯಧಿಕ ಮಾರಾಟ ಮಾಡಿದೆ. ಟಿವಿಎಸ್ ನ ಟಾಪ್ 5 ದ್ವಿಚಕ್ರ ವಾಹನಗಳ ಬಗ್ಗೆ ನಾವಿಂದು ತಿಳಿಯೋಣ.

Jupiter Scooter ಮಾರಾಟ 50 % ಕ್ಕಿಂತ ಹೆಚ್ಚು:

 

 

advertisement

ಟಿವಿಎಸ್ ಜುಪಿಟರ್ (TVS Jupiter )ಸ್ಕೂಟರ್  ನ ಮಾರಾಟ ವಾರ್ಷಿಕ ಆಧಾರದ ಮೇಲೆ 53.64% ರಷ್ಟು ಹೆಚ್ಚಾಗಿದೆ ನವಂಬರ್ 2022 ರಲ್ಲಿ 47,422 ಯೂನಿಟ್ ಜುಪಿಟರ್ ಸ್ಕೂಟರ್ ಮಾರಾಟವಾಗಿದೆ. ಅದೇ ಸಮಯದಲ್ಲಿ ಟಿವಿಎಸ್ ಎಕ್ಸೆಲ್ (TVS XL) ನಂಬರ್ 2023ರಲ್ಲಿ ವಾರ್ಷಿಕ ಆಧಾರದ ಮೇಲೆ 26.16% ಹೆಚ್ಚಳದೊಂದಿಗೆ 43482 ಘಟಕಗಳನ್ನು ಮಾರಾಟ ಮಾಡಿದೆ ಟಿವಿಎಸ್ ಅಪಾಚೆ (TVS Apache) ವಾರ್ಷಿಕ 51.26 ಶೇಕಡ ಹೆಚ್ಚಳದೊಂದಿಗೆ 41,025 ಯೂನಿಟ್ ಗಳನ್ನು ಮಾರಾಟ ಮಾಡಿದೆ. ಇದಲ್ಲದೆ ಟಿವಿಎಸ್ ರೈಡರ್ (TVS Rider) ನವಂಬರ್ 2023ರಲ್ಲಿ 3989 ಯೂನಿಟ್ ಗಳನ್ನು ಮಾರಾಟ ಮಾಡಿತ್ತು ಇದು ವರ್ಷದಿಂದ ವರ್ಷಕ್ಕೆ 47.53% ರಷ್ಟು ಹೆಚ್ಚಾಗಿದೆ.

Ntorq ಮಾರಾಟವು ಸುಮಾರು 80 ಪ್ರತಿಶತದಷ್ಟು ಹೆಚ್ಚಾಗಿದೆ:

 

 

ಮತ್ತೊಂದೆಡೆ TVS Ntorq ವಾರ್ಷಿಕ 78. 77 ರಷ್ಟು ಹೆಚ್ಚಳದೊಂದಿಗೆ 30,396 ಯೂನಿಟ್ ಗಳನ್ನು ಮಾರಾಟ ಮಾಡಿದೆ. TVS Sports ವಾರ್ಷಿಕ 50.26 ಶೇಕಡಾ ಬೆಳವಣಿಗೆಯೊಂದಿಗೆ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಟಿವಿಎಸ್ ಪೋರ್ಟ್ ನವಂಬರಲ್ಲಿ 17,157 ಯೂನಿಟ್ ಗಳನ್ನು ಮಾರಾಟ ಮಾಡಿದೆ. TVS iQube ಈ ಪಟ್ಟಿಯಲ್ಲಿ 66.09 ಶೇಕಡ ಹೆಚ್ಚಳದೊಂದಿಗೆ 7ನೇ ಸ್ಥಾನದಲ್ಲಿದೆ. ನವಂಬರಲ್ಲಿ iQube 16,702 ಯೂನಿಟ್ ಗಳನ್ನು ಮಾರಾಟ ಮಾಡಿದೆ. ಈ ಪಟ್ಟಿಯಲ್ಲಿ TVS Radeon ಎಂಟನೇ ಸ್ಥಾನದಲ್ಲಿದೆ. ಟಿವಿಎಸ್ ಜಸ್ಟ್ ಒಂಬತ್ತನೇ ಸ್ಥಾನದಲ್ಲಿದ್ದರೆ. ಸ್ಟಾರ ಸಿಟಿ ಹತ್ತನೇ ಸ್ಥಾನದಲ್ಲಿದೆ.

advertisement

Leave A Reply

Your email address will not be published.