Karnataka Times
Trending Stories, Viral News, Gossips & Everything in Kannada

Bank Locker: ಬ್ಯಾಂಕ್ ಲಾಕರ್‌ನಿಂದ ಚಿನ್ನಾಭರಣ ಕಳವು ಆದ್ರೆ 10ಲಕ್ಷ ಪರಿಹಾರ ಕೊಡುತ್ತೆ ಈ ಬ್ಯಾಂಕು! ಹೊಸ ನಿಯಮ ಇಲ್ಲಿವೆ.

advertisement

ಬಹಳಷ್ಟು ಜನರಿಗೆ ತಾವು ಸೇವಿಂಗ್ ಮಾಡಿದ ಹಣವನ್ನು ಬಹಳಷ್ಟು ಸೇಫ್ ಆಗಿ ಇರಿಸಬೇಕೆಂದು ಇರುತ್ತದೆ. ಹಾಗೇ ಅನೇಕ ಕಾರಣದಿಂದ ಜನ ಬ್ಯಾಂಕ್​ ಲಾಕರ್ (Bank Locker) ​ಗಳನ್ನು ಆಯ್ಕೆಮಾಡಿ ತಮ್ಮ ಅತ್ಯಮೂಲ್ಯ ದಾಖಲೆಗಳನ್ನು ಇಲ್ಲಿ ಇಡುತ್ತಾರೆ. ಇಲ್ಲಿ ಆಭರಣ, ಸಾಲದ ದಾಖಲೆಗಳು, ಆಸ್ತಿ ದಾಖಲೆಗಳು (Property Documnets) ಇತ್ಯಾದಿಗಳನ್ನು ಸುರಕ್ಷಿತವಾಗಿ ಇಡಲಿ‌ ಗ್ರಾಹಕರು ಬ್ಯಾಂಕ್ ಲಾಕರ್​ (Bank Locker) ಗಳ ಸೇವೆ ಪಡೆಯುತ್ತಾರೆ. ಆರ್‌ಬಿಐ (RBI) ಪ್ರಕಾರ, ಲಾಕರ್‌ಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬ್ಯಾಂಕ್‌ಗಳ ಜವಾಬ್ದಾರಿ ಎಂದಿದೆ. ಕಳ್ಳತನ, ದರೋಡೆ, ಡಕಾಯಿತಿ, ಕಟ್ಟಡ ಕುಸಿತದಂತಹ ಘಟನೆ ಆಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಈ ಘಟನೆ ನಡೆದಿದೆ:

 

 

ಇದೀಗ ಬ್ಯಾಂಕ್‌ನ ಸಿವಿಲ್ ಲೈನ್ಸ್ (Civil Lines), ಅಲಹಾಬಾದ್ ಶಾಖೆಯಲ್ಲಿ ಬ್ಯಾಂಕ್ ಲಾಕರ್ ನಿರ್ವಹಣೆ ಮಾಡುತ್ತಿದ್ದ ಗ್ರಾಹಕನಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಇಲ್ಲಿ ಕಳ್ಳರು ಬ್ಯಾಂಕ್ ಶಾಖೆಗೆ ನುಗ್ಗಿ ಹಲವಾರು ಲಾಕರ್‌ಗಳಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ. ಅದೇ ರೀತಿ ಅಂದು ಸೇವೆಯಲ್ಲಿನ ಕೊರತೆಯನ್ನು ಕಂಡು NCDRC ಯುಕೋ ಬ್ಯಾಂಕ್‌ಗೆ (UCO Bank) ಲಾಕರ್ ಲೂಟಿ ಮಾಡಿದ ಸಂತ್ರಸ್ತರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ಸಹ ನೀಡಿದೆ. ಭದ್ರತೆ ಮತ್ತು ಸುರಕ್ಷತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಇದು ಬ್ಯಾಂಕಿನ ಸೇವೆಯಲ್ಲಿನ ಕೊರತೆಯು ಸಹ ಆಗಿದೆ‌.

advertisement

Bank Locker ಒಪ್ಪಂದ ನವೀಕರಣ:

ಅದೇ ರೀತಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India) ಸೇಫ್‌ ಡೆಪಾಸಿಟ್‌ (Safe Deposit) ಲಾಕರ್‌ಗಳ ಒಪ್ಪಂದಗಳ ಬಗ್ಗೆ ಇದೀಗ ಮಾರ್ಗಸೂಚಿ ನೀಡಿದ್ದು ಒಪ್ಪಂದಗಳನ್ನು ನವೀಕರಿಸಿಕೊಳ್ಳಲು ಡಿಸೆಂಬರ್‌ 31ರ ವರೆಗೆ ಸಮಯ ನೀಡಿದೆ. ಅದೇ ರೀತಿ RBI ಪ್ರಕಾರ, ಲಾಕರ್‌ಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಬ್ಯಾಂಕ್‌ಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದಿದೆ.

ಈ ನಿಯಮ‌ ಇದೆ:

ಗ್ರಾಹಕರು ಬ್ಯಾಂಕ್ ಲಾಕರ್​ನಲ್ಲಿಟ್ಟಿರುವ ವಸ್ತು ಕಳೆದು ಕೊಂಡರೆ ಗ್ರಾಹಕರಿಗೆ ಬ್ಯಾಂಕ್, ಲಾಕರ್​ ಬಾಡಿಗೆ ಶುಲ್ಕದ 100 ಪಟ್ಟು ಪರಿಹಾರ ನೀಡಬೇಕು ಎಂದು ನಿಯಮದಲ್ಲಿ ಸಹ ಇದೆ. ಇನ್ನೂ ಗ್ರಾಹಕರು ಬ್ಯಾಂಕ್ ಲಾಕರ್ ಇಡುವಾಗ ಬ್ಯಾಂಕುಗಳು ಗ್ರಾಹಕರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂಬ ನಿಯಮ ಸಹ ಇದೆ.

advertisement

Leave A Reply

Your email address will not be published.